IND vs NZ: ಮಳೆಯ ಕಾಟ; ಮೊದಲ ದಿನದಾಟದ ಅಂತ್ಯಕ್ಕೆ ಭಾರತ 122-5

India vs New Zealand, 1st Test Match at Wellington: ನೇ ಸೆಶನ್​ನ ಟೀ ವಿರಾಮದ ವೇಳೆಗೆ ಭಾರತ 55 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತ್ತು. ಬಳಿಕ ಪಂದ್ಯ ಆರಂಭಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಮೊದಲ ದಿನದಾಟಕ್ಕೆ ಬ್ರೇಕ್ ಹಾಕಲಾಯಿತು.

Vinay Bhat | news18-kannada
Updated:February 21, 2020, 10:34 AM IST
IND vs NZ: ಮಳೆಯ ಕಾಟ; ಮೊದಲ ದಿನದಾಟದ ಅಂತ್ಯಕ್ಕೆ ಭಾರತ 122-5
ಅಜಿಂಕ್ಯಾ ರಹಾನೆ 38 ಹಾಗೂ ರಿಷಭ್ ಪಂತ್ 10 ರನ್ ಗಳಿಸಿ ನಾಳೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
  • Share this:
ವೆಲ್ಲಿಂಗ್ಟನ್ (ಫೆ. 21): ಇಲ್ಲಿನ ಬೇಸಿನ್ ರಿಸರ್ವ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತೀಯ ಬ್ಯಾಟ್ಸ್​ಮನ್​ಗಳು ಮೊದಲ ದಿನವೇ ಕಳಪೆ ಪ್ರದರ್ಶನ ತೋರಿದರು. ಅಂತಿಮ ಸೆಶನ್ ವೇಳೆಗೆ ಮಳೆ ಸುರಿದ ಪರಿಣಾಮ ಮೊದಲ ದಿನದಾಟವನ್ನು ಅಂತ್ಯಗೊಳಿಸಲಾಗಿದ್ದು, ಭಾರತ 55 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ ಆರಂಭದಲ್ಲೇ ಪೃಥ್ವಿ ಶಾ ವಿಕೆಟ್ ಕಳೆದುಕೊಂಡಿತು. ಹೀಗೆ ಭಾರತೀಯ ಹೊಸ ಓಪನಿಂಗ್ ಜೋಡಿ ಮತ್ತೆ ವೈಫಲ್ಯ ಅನುಭವಿಸಿತು. ಅಭ್ಯಾಸ ಪಂದ್ಯದಲ್ಲಿ ಮಿಂಚಿದ್ದ ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್ ಪೂಜಾರ 11 ರನ್​ಗೆ ಔಟ್ ಆದರೆ, ನಾಯಕ ವಿರಾಟ್ ಕೊಹ್ಲಿ ಆಟ ಕೇವಲ 2 ರನ್​ಗೆ ಅಂತ್ಯವಾಯಿತು.

 


IND vs NZ: (VIDEO) ಗಾಳಿಯಲ್ಲಿ ಹಾರಿದ ಬೇಲ್ಸ್; ಹೀನಾಯವಾಗಿ ಕ್ಲೀನ್ ಬೌಲ್ಡ್​ ಆದ ಪೃಥ್ವಿ ಶಾ

ಇತ್ತ ಕೊಂಚ್ ರನ್ ಕಲೆಹಾಕಿದ್ದ ಮಯಾಂಕ್ ಅಗರ್ವಾಲ್ 84 ಎಸೆತಗಳಲ್ಲಿ 34 ರನ್ ಗಳಿಸಿ ಬೌಲ್ಟ್ ಬೌಲಿಂಗ್​ನಲ್ಲಿ ಔಟ್ ಆದರು. ತಂಡಕ್ಕೆ ಆಧಾರವಾಗಬೇಕಿದ್ದ ಹನುಮಾ ವಿಹಾರಿ ಕೂಡ 7 ರನ್​ಗೆ ಸುಸ್ತಾದರು. ಹೀಗೆ 100 ರನ್ ಆಗುವ ಹೊತ್ತಿಗೆ ಭಾರತ ತನ್ನ ಪ್ರಮುಖ 5 ವಿಕೆಟ್ ಕಳೆದುಕೊಂಡಿತು.

ಬಳಿಕ ಉಪ ನಾಯಕ ಅಜಿಂಕ್ಯಾ ರಹಾನೆ ಜೊತೆಯಾದ ರಿಷಭ್ ಪಂತ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ರಹಾನೆ 122 ಎಸೆತಗಳಲ್ಲಿ 38 ಹಾಗೂ ಪಂತ್ 37 ಎಸೆತಗಳಲ್ಲಿ 10 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 3ನೇ ಸೆಶನ್​ನ ಟೀ ವಿರಾಮದ ವೇಳೆಗೆ ಭಾರತ 55 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತ್ತು. ಬಳಿಕ ಪಂದ್ಯ ಆರಂಭಕ್ಕೆ ಮಳೆ ಅಡ್ಡಿ ಪಡಿಸಿದ ಕಾರಣ ಮೊದಲ ದಿನದಾಟಕ್ಕೆ ಬ್ರೇಕ್ ಹಾಕಲಾಯಿತು.

ನ್ಯೂಜಿಲೆಂಡ್ ಪರ ತನ್ನ ಚೊಚ್ಚಲ ಟೆಸ್ಟ್​ ಪಂದ್ಯದಲ್ಲೇ 3 ವಿಕೆಟ್ ಕಿತ್ತು ಮಿಂಚಿದ್ದರೆ, ಟಿಮ್ ಸೌಥೀ ಹಾಗೂ ಟ್ರೆಂಟ್ ಬೌಲ್ಟ್​ ತಲಾ 1 ವಿಕೆಟ್ ಪಡೆದರು.

 IPL 2020: ಐಪಿಎಲ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಬಿಸಿಸಿಐ; ಏನದು?

ಮೊದಲ ಟೆಸ್ಟ್​ಗೆ ಭಾರತ ತಂಡದಲ್ಲಿ ಪ್ರಮುಖವಾಗಿ ವಿಕೆಟ್ ಕೀಪರ್ ಸ್ಥಾನಕ್ಕೆ ವೃದ್ಧಿಮಾನ್ ಸಹಾ ಕೈಬಿಟ್ಟು ರಿಷಬ್ ಪಂತ್​ಗೆ ಅವಕಾಶ ನೀಡಲಾಗಿದೆ. ನವದೀಪ್ ಸೈನಿ ಹಾಗೂ ರವೀಂದ್ರ ಜಡೇಜಾ ಅವಕಾಶ ವಂಚಿತವಾಗಿದ್ದಾರೆ.

ಇನ್ನೂ ನ್ಯೂಜಿಲೆಂಡ್ ಪರ ರಾಸ್ ಟೇಲರ್ 100 ಟೆಸ್ಟ್‌ಗಳನ್ನು ಆಡಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಎಲ್ಲ ಪ್ರಕಾರದಲ್ಲೂ (ಟೆಸ್ಟ್, ಏಕದಿನ ಹಾಗೂ ಟಿ-20) 100 ಪಂದ್ಯಗಳನ್ನಾಡಿದ ಮೊದಲ ಆಟಗಾರನೆಂಬ ಕೀರ್ತಿಗೆ ಪಾತ್ರವಾದರು. ಹಾಗೆಯೇ ವೇಗಿ ಕೈಲ್ ಜೇಮಿಸನ್‌ಗೆ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು.

First published: February 21, 2020, 9:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading