India vs New Zealand: ಆಕ್ಲೆಂಡ್​ನಲ್ಲಿ ಅಬ್ಬರಿಸಿದ ರಾಹುಲ್-ಐಯರ್; ಕೊಹ್ಲಿ ಪಡೆ ಭರ್ಜರಿ ಶುಭಾರಂಭ

India vs New Zealand, 1st T20I Match at Auckland: 6 ವಿಕೆಟ್​ಗಳ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮುಂದಿನ ಎರಡನೇ ಟಿ-20 ಪಂದ್ಯ ಜನವರಿ 26 ಭಾನುವಾರದಂದು ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ.

Vinay Bhat | news18-kannada
Updated:January 24, 2020, 3:57 PM IST
India vs New Zealand: ಆಕ್ಲೆಂಡ್​ನಲ್ಲಿ ಅಬ್ಬರಿಸಿದ ರಾಹುಲ್-ಐಯರ್; ಕೊಹ್ಲಿ ಪಡೆ ಭರ್ಜರಿ ಶುಭಾರಂಭ
ಕೆ ಎಲ್ ರಾಹುಲ್ ಹಾಗೂ ಶ್ರೇಯಸ್ ಐಯರ್.
  • Share this:
ಆಕ್ಲೆಂಡ್ (. 24): ಇಲ್ಲಿನ ಈಡನ್ ಪಾರ್ಕ್ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್​ಗಳಿಂದ ಗೆದ್ದು ಶುಭಾರಂಭ ಮಾಡಿದೆ. ರಾಹುಲ್ ಹಾಗೂ ಶ್ರೇಯಸ್ ಐಯರ್ ಅಮೋಘ ಪ್ರದರ್ಶನದ ನೆರವಿನಿಂದ ಕೊಹ್ಲಿ ಪಡೆ ಐದು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ನ್ಯೂಜಿಲೆಂಡ್ ನೀಡಿದ್ದ 204 ರನ್​ಗಳ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ(7) ಶರ್ಮಾ ವಿಕೆಟ್ ಕಳೆದುಕೊಂಡಿತು. ಬಳಿಕ ಒಂದಾದ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಈ ಜೋಡಿ ಬೌಂಡರಿಗಳ ಮಳೆಸುರಿಸಿತು. ಅದರಲ್ಲು ಸ್ಫೋಟಕ ಬ್ಯಾಟಿಂಗ್ ನಡೆಸಿದ ರಾಹುಲ್ ಅರ್ಧಶತಕ ಸಿಡಿಸಿ ಮಿಂಚಿದರು. ಕೇವಲ 27 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಿಡಿಸಿ 56 ರನ್ ಬಾರಿಸಿ ಔಟ್ ಆದರು.

ಇದರ ಬೆನ್ನಲ್ಲೆ ಕೊಹ್ಲಿ ಕೂಡ 32 ಎಸೆತಗಳಲ್ಲಿ 45 ರನ್ ಬಾರಿಸಿ ಪೆವಿಲಿಯನ್ ಹಾದಿ ಹಿಡಿದರು. ಶಿವಂ ದುಬೆ ಆಟ 13 ರನ್​ಗೆ ಅಂತ್ಯವಾಯಿತು. ಈ ಸಂಕಷ್ಟದ ಸಂದರ್ಭದಲ್ಲಿ ತಂಡವನ್ನು ಗೆಲುವಿನ ಹಾದಿಯತ್ತ ಸಾಗಿಸಿದ್ದು ಶ್ರೇಯಸ್ ಐಯರ್ ಹಾಗೂ ಮನೀಶ್ ಪಾಂಡೆ. ಅತ್ಯುತ್ತಮ ಆಟವಾಡಿದ ಈ ಜೋಡಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿತು.

IND vs NZ: ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ ಕೊಹ್ಲಿ; ಯಾಕೆ ಗೊತ್ತಾ..?

ಐಯರ್ ಕೇವಲ 29 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಬಾರಿಸಿ ಅಜೇಯ 58 ರನ್ ಬಾರಿಸಿದರೆ, ಪಾಂಡೆ 12 ಎಸೆತಗಳಲ್ಲಿ 1 ಸಿಕ್ಸರ್​ನೊಂದಿಗೆ ಅಜೇಯ 14 ರನ್ ಚಚ್ಚಿದರು.

ಭಾರತ 19 ಓವರ್​ನಲ್ಲೇ 4 ವಿಕೆಟ್ ನಷ್ಟಕ್ಕೆ 204 ರನ್ ಬಾರಿಸಿ ಗೆಲುವು ಕಂಡಿತು. ಕಿವೀಸ್ ಪರ ಇಶ್ ಸೋಧಿ 2 ವಿಕೆಟ್ ಕಿತ್ತರೆ, ಮಿಚೆಲ್ ಸ್ಯಾಂಟನರ್ ಹಾಗೂ ಬ್ಲೇರ್ ಟಿಕ್ನೆರ್ ತಲಾ 1 ವಿಕೆಟ್ ಪಡೆದರು. ಶ್ರೇಯಸ್ ಐಯರ್ ಪಂದ್ಯಶ್ರೇಷ್ಠ ಬಾಜಿಕೊಂಡರು.6 ವಿಕೆಟ್​ಗಳ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮುಂದಿನ ಎರಡನೇ ಟಿ-20 ಪಂದ್ಯ ಜನವರಿ 26 ಭಾನುವಾರದಂದು ಇದೇ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕಿವೀಸ್ ಓಪನರ್​ಗಳಾದ ಮಾರ್ಟಿನ್ ಗಪ್ಟಿಲ್ ಹಾಗೂ ಕಾಲಿನ್ ಮನ್ರೊ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್​ನಿಂದಲೇ ಅಬ್ಬರಿಸಲು ಶುರು ಮಾಡಿದ ಈ ಜೋಡಿ ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿತು.

ಮೊದಲ ವಿಕೆಟ್​ಗೆ ಈ ಜೋಡಿ 80 ರನ್​ಗಳ ಕಾಣಿಕೆ ನೀಡಿತು. ಅದುಕೂಡ 7.5 ಓವರ್​ನಲ್ಲಿ. ಮಾರ್ಟಿನ್ ಗಪ್ಟಿಲ್ ಅವರು ಶಿವಂ ದುಬೆ ಬೌಲಿಂಗ್​ನಲ್ಲಿ ಚೆಂಡನ್ನು ಸಿಕ್ಸ್​ಗೆ ಅಟ್ಟಲೋಗಿ ಔಟ್ ಆದರು. ಗಪ್ಟಿಲ್ 19 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್​ನೊಂದಿಗೆ 30 ಸಿಡಿಸಿದರು.

ತನಗೆ ಸಿಕ್ಕ ಪಂದ್ಯಶ್ರೇಷ್ಠವನ್ನು ರಾಹುಲ್ ಏನು ಮಾಡಿದ್ರು ಗೊತ್ತಾ?; ಇಲ್ಲಿದೆ ಕನ್ನಡಿಗನ ಹೆಮ್ಮೆಯ ಸ್ಟೋರಿ!

ಬಳಿಕ ನಾಯಕ ಕೇನ್ ವಿಲಿಯಮ್ಸನ್ ಜೊತೆಯಾದ ಮನ್ರೊ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿ ಅರ್ಧಶತಕ ಸಿಡಿಸಿದರು. ಬಳಿಕ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದ ಮನ್ರೊ 42 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಬಾರಿಸಿ 59 ರನ್​ಗೆ ನಿರ್ಗಮಿಸಿದರು. ಬಂದ ಬೆನ್ನಲ್ಲೆ ಕಾಲಿನ್ ಡಿ'ಗ್ರ್ಯಾಂಡ್ಹೋಮ್ ಸೊನ್ನೆ ಸುತ್ತಿದರು.

ಬಳಿಕ ವಿಲಿಯಮ್ಸನ್ ಹಾಗೂ ರಾಸ್ ಟೇಲರ್ ಭಾರತೀಯ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಇಬ್ಬರೂ ಸ್ಫೋಟಕ ಆಟವಾಡಿ ತಂಡದ ಮೊತ್ತವನ್ನು ಮತ್ತಷ್ಟು ಏರಿಸಿದರು. ವಿಲಿಯಮ್ಸನ್ ಕೇವಲ 26 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ ಚಚ್ಚಿ 51 ರನ್ ಸಿಡಿಸಿ ಔಟ್ ಆದರು. ಟೇಲರ್ 27 ಎಸೆತಗಳಲ್ಲಿ 4 ಬೌಂಡರಿ-4 ಸಿಕ್ಸರ್​ನೊಂದಿಗೆ ಅಜೇಯ 54 ರನ್ ಗಳಿಸಿದರು.

ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್​ನಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಬಾರಿಸಿತು. ಭಾರತ ಪರ ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಾಲ್, ಜಸ್​ಪ್ರೀತ್ ಬುಮ್ರಾ ಹಾಗೂ ಶಿವಂ ದುಬೆ ತಲಾ 1 ವಿಕೆಟ್ ಪಡೆದರು.

First published:January 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ