Live Score, IND vs NZ, 1st ODI: ಟೇಲರ್ ಅಮೋಘ ಶತಕ; ರೋಚಕ ಘಟ್ಟದತ್ತ ಪಂದ್ಯ

India vs New Zealand 1st ODI Live Cricket Score Updates: ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯನ್ನು ಭಾರತ 5-0 ಅಂತರದಿಂದ ಕ್ಲೀನ್​ಸ್ವೀಪ್  ಮಾಡಿ ಪರಾಕ್ರಮ ಮೆರೆದಿತ್ತು. ಸದ್ಯ ಏಕದಿನ ಸರಣಿ ಮೇಲೂ ಕೊಹ್ಲಿ ಪಡೆ ಕಣ್ಣಿಟ್ಟಿದೆ. ಇತ್ತ ಕಿವೀಸ್ ಪಡೆ ಟಿ-20 ಸರಣಿ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಇರಾದೆಯಲ್ಲಿದೆ.

ರಾಸ್ ಟೇಲರ್

ರಾಸ್ ಟೇಲರ್

  • Share this:
ಹ್ಯಾಮಿಲ್ಟನ್ (ಫೆ. 05): ಇಲ್ಲಿನ ಸೆಡಾನ್ ಪಾರ್ಕ್ಮೈದಾನದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಇರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಉತ್ತಮ ಮೊತ್ತ ಕಲೆಹಾಕಿದೆ. ಶ್ರೇಯಸ್ ಅಯ್ಯರ್ ಅವರ ಚೊಚ್ಚಲ ಶತಕದ ಜೊತೆ, ಕೆ ಎಲ್ ರಾಹುಲ್ ಅವರ ಸ್ಫೋಟಕ ಆಟದ ನೆರವಿನಿಂದ ಭಾರತ 50 ಓವರ್​ನಲ್ಲಿ 347 ರನ್ ಬಾರಿಸಿದೆ.

ಸದ್ಯ 348 ರನ್​ಗಳ ಟಾರ್ಗೆಟ್ ಬೆನ್ನಟ್ಟಿರುವ ನ್ಯೂಜಿಲೆಂಡ್ 4 ವಿಕೆಟ್ ಕಳೆದುಕೊಂಡಿದೆಯಾದರು, ರಾಸ್ ಟೇಲರ್ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

ಟಾರ್ಗೆಟ್ ಬೆನ್ನಟ್ಟಲು ನ್ಯೂಜಿಲೆಂಡ್ ಪರ ಓಪನರ್​ಗಳಾಗಿ ಕಣಕ್ಕಿಳಿದ ಮಾರ್ಟಿನ್ ಗಪ್ಟಿಲ್ ಹಾಗೂ ಹೆನ್ರಿ ನಿಕೂಲಸ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಅನಗತ್ಯ ಹೊಡೆತಕ್ಕೆ ಕೈ ಹಾಕದ ಈ ಜೋಡಿ 85 ರನ್​ಗಳ ಕಾಣಿಕೆ ನೀಡಿತು. ಚೆನ್ನಾಗಿಯೇ ಆಡುತ್ತಿದ್ದ ಗಪ್ಟಿಲ್ ಅವರು 32 ರನ್ ಗಳಿಸಿದ್ದಾಗ ಠಾಕೂರ್ ಬೌಲಿಂಗ್​ನಲ್ಲಿ ಔಟ್ ಆದರು. ಬಂದ ಬೆನ್ನಲ್ಲೆ ಥಾಮ್​ ಬ್ಲಂಡೆಲ್(9)​ ಸ್ಟಂಪ್​ಔಟ್​ಗೆ ಬಲಿಯಾದರು.

ಈ ಸಂದರ್ಭ ನಿಕೋಲಸ್ ಜೊತೆಯಾದ ಅನುಭವಿ ರಾಸ್ ಟೇಲರ್ ಅತ್ಯುತ್ತಮ ಆಟ ಪ್ರದರ್ಶಿಸಿದರು. ನಿಕೋಲಸ್ ಆಕರ್ಷಕ ಅರ್ಧಶತಕ ಗಳಿಸಿದರು. ಆದರೆ, ನಿಕೋಲಸ್ 82 ಎಸೆತಗಳಲ್ಲಿ 78 ರನ್ ಗಳಿಸಿ ಕೊಹ್ಲಿ ಮಾಡಿದ ಅದ್ಭುತ ರನೌಟ್​ಗೆ ಬಲಿಯಾದರು. ಈ ಮೂಲಕ ಇವರಿಬ್ಬರ 62 ರನ್​ಗಳ ಜೊತೆಯಾಟಕ್ಕೆ ಬ್ರೇಕ್ ಬಿತ್ತು.

ಬಳಿಕ ಶುರುವಾಗಿದ್ದು ಟೇಲರ್ ಹಾಗೂ ನಾಯಕ ಟಾಮ್ ಲೇಥಮ್ ಆಟ. ಭಾರತೀಯ ಬೌಲರ್​ಗಳನ್ನು ಕಾಡಿದ ಈ ಜೋಡಿ ಸ್ಫೋಟಕ ಆಟ ಪ್ರದರ್ಶಿಸಿತು. ಇವರಿಬ್ಬರು ತಂಡಕ್ಕೆ ಮತ್ತೆ ಗೆಲುವಿನ ರುಚಿ ನೀಡಿದರು. ಆದರೆ, ಲೇಥಮ್ 48 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಬಾರಿಸಿ 69 ರನ್ ಗಳಿಸಿ ನಿರ್ಗಮಿಸಿದರು.

ಇದರ ಬೆನ್ನಲ್ಲೆ ರಾಸ್ ಟೇಲರ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಕೇವಲ 73 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್ ಬಾರಿಸಿ ಟೇಲರ್ ಏಕದಿನ ಕ್ರಿಕೆಟ್​​ನಲ್ಲಿ 21ನೇ ಶತಕ ಸೆಂಚುರಿ ಗಳಿಸಿದರು. ಸದ್ಯ ಟೇಲರ್ ಜೊತೆ ಜೇಮ್ಸ್ ನೀಶಮ್ ಕ್ರೀಸ್​ನಲ್ಲಿದ್ದು, ಗೆಲುವಿಗಾಗಿ ಹೋರಾಟ ನಡೆಸುತ್ತಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಭಾರತ 50 ರನ್ ಆಗುವ ಹೊತ್ತಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ ಓಪನರ್​ಗಳಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಹಾಗೂ ಪೃಥ್ವಿ ಶಾ ಅರ್ಧಶತಕದ ಜೊತೆಯಾಟ ನೀಡಿದರಷ್ಟೆ.

ಶಾ 21 ಎಸೆತಗಳಲ್ಲಿ 20 ರನ್ ಬಾರಿಸಿ ಔಟ್ ಆದರೆ, ಇದರ ಬೆನ್ನಲ್ಲೆ ಮಯಾಂಕ್ ಕೂಡ 32 ರನ್​ಗೆ ನಿರ್ಗಮಿಸಿದರು. ಬಳಿಕ ಒಂದಾದ ಶ್ರೇಯಸ್ ಅಯ್ಯರ್ ಹಾಗೂ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದರು. ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿತು. ಜೊತೆಗೆ 102 ರನ್​ಗಳ ಅಮೋಘ ಜೊತೆಯಾಟ ಆಡಿತು.

ವಿರಾಟ್ 63 ಎಸೆತಗಳಲ್ಲಿ 51 ರನ್ ಗಳಿಸಿ ಇಶ್ ಸೋಧಿ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ಸದ್ಯ ಅಯ್ಯರ್ ಹಾಗೂ ಕೆ ಎಲ್ ರಾಹುಲ್ ಕ್ರೀಸ್​​ನಲ್ಲಿದ್ದು, ಈ ಜೋಡಿ ಶತಕದ ಜೊತೆಯಾಟ ಆಡಿ ಭರ್ಜರಿ ಆಟ ಪ್ರದರ್ಶಿಸುತ್ತಿದೆ.

ಕೊಹ್ಲಿ ನಿರ್ಗಮನದ ಬಳಿಕ ಅಯ್ಯರ್ ಹಾಗೂ ಕೆ ಎಲ್ ರಾಹುಲ್ ಬಿರುಸಿನ ಬ್ಯಾಟಿಂಗ್ ನಡೆಸಿದರು. ತಂಡದ ಮೊತ್ತವನ್ನು ಏರಿಸಿದ ಈ ಜೋಡಿಯ ಖಾತೆಯಿಂದ ಮತ್ತೊಂದು ಶತಕದ ಅಮೋಘ ಜೊತೆಯಾಟ ಮೂಡಿಬಂತು.

 ಶ್ರೇಯಸ್​ ಅಯ್ಯರ್ ಏಕದಿನ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದರು. ಆದರೆ, ಶತಕದ ಬಳಿಕ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲದ ಅಯ್ಯರ್ 107 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಬಾರಿಸಿ 103 ರನ್​ಗೆ ಔಟ್ ಆದರು. ಇತ್ತ ರಾಹುಲ್ ಕೇವಲ 63 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್ ಸಿಡಿಸಿ ಅಜೇಯ 87 ರನ್ ಚಚ್ಚಿದರು. ಕೇದರ್ ಜಾಧವ್ 15 ಎಸೆತಗಳಲ್ಲಿ 26 ರನ್ ಬಾರಿಸಿದರು.

ಅಂತಿಮವಾಗಿ ಭಾರತ 50 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 347 ರನ್ ಬಾರಿಸಿತು. ನ್ಯೂಜಿಲೆಂಡ್ ಪರ ಟಿಮ್ ಸೌಥೀ 2 ವಿಕೆಟ್ ಕಿತ್ತರೆ, ಗ್ರ್ಯಾಂಡ್​ಹೋಮ್ ಹಾಗೂ ಇಶ್ ಸೋಧಿ ತಲಾ 1 ವಿಕೆಟ್ ಪಡೆದರು.

ನ್ಯೂಜಿಲೆಂಡ್ ಪರ ಖಾಯಂ ನಾಯಕ ಕೇನ್ ವಿಲಿಯಮ್ಸನ್ ಇಂಜುರಿಯಿಂದ ಗುಣಮುಖರಾಗದ ಕಾರಣ ಇಂದಿನ ಪಂದ್ಯದಲ್ಲೂ ಕಣಕ್ಕಿಳಿಯುತ್ತಿಲ್ಲ. ಹೀಗಾಗಿ ತಂಡವನ್ನು ಟಾಮ್ ಲೇಥಮ್ ಮುನ್ನಡೆಸುತ್ತಿದ್ದಾರೆ.

ಇತ್ತ ಭಾರತ ಪರ ಮಯಾಂಕ್ ಅಗರ್ವಾಲ್ ಹಾಗೂ ಪೃಥ್ವಿ ಶಾ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. ಇನ್ನು ಇನ್ ಫಾರ್ಮ್‌ನಲ್ಲಿರುವ ಕರ್ನಾಟಕದ ಮನೀಶ್ ಪಾಂಡೆ ಅವರನ್ನು ಕಡೆಗಣಿಸಲಾಗಿದೆ. ಇವರ ಬದಲು ಕೇದಾರ್ ಜಾಧವ್ ಆಡುವ ಅವಕಾಶ ಗಿಟ್ಟಿಸಿದ್ದಾರೆ.

 ಭಾರತ ತಂಡ: ಪೃಥ್ವಿ ಶಾ, ಮಯಾಂಕ್​ ಅಗರ್ವಾಲ್​, ವಿರಾಟ್​ ಕೊಹ್ಲಿ(ನಾಯಕ​), ಶ್ರೇಯಸ್​ ಅಯ್ಯರ್​, ಕೆಎಲ್​ ರಾಹುಲ್​(ವಿ.ಕೀ), ಕೇದಾರ್​ ಜಾಧವ್​, ರವೀಂದ್ರ ಜಡೇಜಾ, ಶಾರ್ದೂಲ್​ ಠಾಕೂರ್​, ಮೊಹಮ್ಮದ್​ ಶಮಿ, ಕುಲ್ದೀಪ್​ ಯಾದವ್​, ಜಸ್​ಪ್ರೀತ್​ ಬುಮ್ರಾ.

ನ್ಯೂಜಿಲೆಂಡ್ ತಂಡ: ​​ಮಾರ್ಟಿನ್​ ಗಪ್ಟಿಲ್​​, ಹೆನ್ರಿ ನಿಕೂಲಸ್​, ಟಾಮ್ ಲೇಥಮ್​​(ನಾಯಕ​), ಥಾಮ್​ ಬ್ಲಂಡೆಲ್​, ರಾಸ್​ ಟೇಲರ್​, ಜೇಮ್ಸ್​​ ನಿಸ್ಸಮ್​, ಗ್ರ್ಯಾಂಡ್​ಹೊಮ್​, ಸ್ಯಾಂಟ್ನರ್​, ಥೀಮ್​​ ಸೌಥಿ, ಇಶಾ ಶೋಧಿ, ಹಿಮಿಶ್​ ಬೆನಿಟ್​​.

 ನ್ಯೂಜಿಲೆಂಡ್ ವಿರುದ್ಧದ ಟಿ-20 ಸರಣಿಯನ್ನು ಭಾರತ 5-0 ಅಂತರದಿಂದ ಕ್ಲೀನ್​ಸ್ವೀಪ್  ಮಾಡಿ ಪರಾಕ್ರಮ ಮೆರೆದಿತ್ತು. ಸದ್ಯ ಏಕದಿನ ಸರಣಿ ಮೇಲೂ ಕೊಹ್ಲಿ ಪಡೆ ಕಣ್ಣಿಟ್ಟಿದೆ. ಇತ್ತ ಕಿವೀಸ್ ಪಡೆ ಟಿ-20 ಸರಣಿ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಇರಾದೆಯಲ್ಲಿದೆ.
First published: