India vs England: ವಿಶ್ವಕಪ್​ನಲ್ಲಿ ಕೆಟ್ಟ ದಾಖಲೆ ಬರೆದ ಚಹಾಲ್!

ಇಂದಿನ ಪಂದ್ಯದಲ್ಲಿ ಜಸ್​ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಬಿಟ್ಟರೆ ಮತ್ಯಾವ ಬೌಲರ್​​ಗಳು ಅಷ್ಟೊಂದು ಪರಿಣಾಮಕಾರಿಯಾಗಿ ಗೋಚರಿಸಿಲ್ಲ. ಮೊಹಮ್ಮದ್ ಶಮಿ 5 ವಿಕೆಟ್ ಕಿತ್ತರಾದರು ತಮ್ಮ 10 ಓವರ್​​ಗೆ 69 ರನ್ ನೀಡಿದರು.

Vinay Bhat | news18
Updated:June 30, 2019, 9:20 PM IST
India vs England: ವಿಶ್ವಕಪ್​ನಲ್ಲಿ ಕೆಟ್ಟ ದಾಖಲೆ ಬರೆದ ಚಹಾಲ್!
ಯಜುವೇಂದ್ರ ಚಹಾಲ್
  • News18
  • Last Updated: June 30, 2019, 9:20 PM IST
  • Share this:
ಬೆಂಗಳೂರು (ಜೂ. 30): ಬರ್ಮಿಂಗ್​ ಹ್ಯಾಮ್​​ನಲ್ಲಿ ನಡೆಯುತ್ತಿರುವ ವಿಶ್ವಕಪ್​ನ 38ನೇ ಪಂದ್ಯದಲ್ಲಿ ಭಾರತ ವಿರುದ್ಧ ಇಂಗ್ಲೆಂಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಬೈರ್​ಸ್ಟೋರ ಆಕರ್ಷಕ ಶತಕ, ಬೆನ್ ಸ್ಟೋಕ್ಸ್​ ಹಾಗೂ ಜೇಸನ್ ರಾಯ್​​ರ ಅರ್ಧಶತಕದ ನೆರವಿನಿಂದ ಆಂಗ್ಲರು ಭಾರತಕ್ಕೆ ಗೆಲ್ಲಲು 338 ರನ್​ಗಳ ಬೃಹತ್ ಟಾರ್ಗೆಟ್ ನೀಡಿದೆ. 

ಈ ಬಾರಿಯ ವಿಶ್ವಕಪ್​​ನ ಪ್ರತಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಭಾರತೀಯ ಬೌಲರ್​ಗಳು ಇಂದು ಇಂಗ್ಲೆಂಡ್ ವಿರುದ್ಧ ದುಬಾರಿ ಎನಿಸಿಕೊಂಡರು. ಅದರಲ್ಲು ಪ್ರಮುಖ ಸ್ಪಿನ್ನರ್ ಯಜುವೇಂದ್ರ ಚಹಾಲ್ ಕೆಟ್ಟ ದಾಖಲೆಯೊಂದನ್ನು ಬರೆದಿದ್ದಾರೆ.

10 ಓವರ್​​ ಬೌಲಿಂಗ್​ ಮಾಡಿದ ಚಹಾಲ್​ ಒಟ್ಟು 88 ರನ್​ ನೀಡಿ ವಿಕೆಟ್​ ಕಬಳಿಸುವಲ್ಲಿಯೂ ವಿಫಲರಾದರು. ಹೀಗೆ 10 ಓವರ್​ಗಳಲ್ಲಿ 88 ರನ್​ ನೀಡಿ ವಿಶ್ವಕಪ್​ನಲ್ಲಿ ಭಾರತದ ಪರ ಗರಿಷ್ಠ ರನ್ ಕೊಟ್ಟ ದುಬಾರಿ ಬೌಲರ್ ಎಂಬ ಅಪಖ್ಯಾತಿಗೊಳಗಾಗಿದ್ದಾರೆ.ಚಹಾಲ್​ ಅವರ ವೃತ್ತಿಜೀವನದ ಅತಿ ಕಳಪೆ ಪ್ರದರ್ಶನ ಇದಾಗಿದೆ. ಇದಕ್ಕೂ ಮುನ್ನ 2003ರ ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಾವಗಲ್​ ಶ್ರೀನಾಥ್ ಅವರು​ 10 ಓವರ್​ಗಳಲ್ಲಿ 87 ರನ್​ ಬಿಟ್ಟುಕೊಟ್ಟಿದ್ದು ಅತಿ ಕೆಟ್ಟ ದಾಖಲೆಯಾಗಿತ್ತು.


IND vs ENG: ಜಡೇಜಾ ಹಿಡಿದ ಅದ್ಭುತ ಕ್ಯಾಚ್ ನೋಡಲು ಮಿಸ್ ಆಯ್ತಾ?; ಇಲ್ಲಿದೆ ವಿಡಿಯೋಇಂದಿನ ಪಂದ್ಯದಲ್ಲಿ ಜಸ್​ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಬಿಟ್ಟರೆ ಮತ್ಯಾವ ಬೌಲರ್​​ಗಳು ಅಷ್ಟೊಂದು ಪರಿಣಾಮಕಾರಿಯಾಗಿ ಗೋಚರಿಸಿಲ್ಲ. ಮೊಹಮ್ಮದ್ ಶಮಿ 5 ವಿಕೆಟ್ ಕಿತ್ತರಾದರು ತಮ್ಮ 10 ಓವರ್​​ಗೆ 69 ರನ್ ನೀಡಿದರು.
First published:June 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ