ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ-ಇಂಗ್ಲೆಂಡ್ ನಾಲ್ಕನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 8 ರನ್‌ಗಳ ರೋಚಕ ಜಯ ದಾಖಲಿಸಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-2 ರಿಂದ ಸಮಬಲ ಸಾಧಿಸಿದೆ. ಅಲ್ಲದೆ ಉಭಯ ತಂಡಗಳು ತಲಾ 2 ಜಯ ಸಾಧಿಸುವ ಮೂಲಕ ಶನಿವಾರ ನಡೆಯಲಿರುವ ಅಂತಿಮ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ.
4ನೇ ಪಂದ್ಯದಲ್ಲಿ ಇಂಗ್ಲೆಂಡ್ಗೆ ಗೆಲ್ಲುವ ಅವಕಾಶಗಳಿತ್ತು. ಇದಾಗ್ಯೂ ಟೀಮ್ ಇಂಡಿಯಾ ಬೌಲರುಗಳ ಸಾಂಘಿಕ ಪ್ರದರ್ಶನದಿಂದ ಸೋಲನುಭವಿಸಬೇಕಾಯಿತು. ಈ ಸೋಲಿನ ನೋವಿನ ಬೆನ್ನಲ್ಲೇ ಇಂಗ್ಲೆಂಡ್ಗೆ ದಂಡ ಕೂಡ ವಿಧಿಸಲಾಗಿದೆ. 4ನೇ ಟಿ20ಯಲ್ಲಿ ನಿಧಾನಗತಿಯ ಓವರ್ರೇಟ್ಗಾಗಿ ಆಂಗ್ಲರ ಬಳಗಕ್ಕೆ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಂದ್ಯದ ಸಂಭಾವನೆ ಶೇ.20 ರಷ್ಟು ದಂಡ ವಿಧಿಸಿದೆ.
ಐಸಿಸಿ ನಿಯಮದ ಪ್ರಕಾರ T20 ಕ್ರಿಕೆಟ್‌ನಲ್ಲಿ 75 ನಿಮಿಷದೊಳಗೆ 20 ಓವರ್ ಮುಗಿಸಬೇಕು. ಅಂದರೆ ಪ್ರತಿ ಗಂಟೆಗೆ 14.11 ಓವರ್ ಮುಗಿಸಿರಬೇಕಾಗುತ್ತದೆ. ಇದಕ್ಕಿಂತ ಹೆಚ್ಚುವರಿ ಸಮಯ ತೆಗೆದುಕೊಂಡರೆ ದಂಡ ವಿಧಿಸಲಾಗುತ್ತದೆ. ಇನ್ನು 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾಗೂ ಸ್ಲೋ ಓವರ್ ಮಾಡಿದಕ್ಕಾಗಿ ಪಂದ್ಯದ ಶೇ. 20 ರಷ್ಟು ದಂಡ ವಿಧಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ