ಬೆಂಗಳೂರು (ಫೆ. 06): ಚೆನ್ನೈ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾಗಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಸುಸ್ತಾಗಿ ಹೋದರು. ಟೀಂ ಇಂಡಿಯಾ ಎದುರಾಳಿ ಬ್ಯಾಟ್ಸ್ಮನ್ಗಳನ್ನ ಪೆವಿಲಿಯನ್ಗೆ ಅಟ್ಟಲು ಹರಸಾಹಸ ಪಡುತ್ತಿದೆ. ನಾಯಕ ಜೋ ರೂಟ್ಗೆ ಪೆವಿಲಿಯನ್ ದಾರಿ ತೋರಿಸಲಂತು ಯಾರಿಂದಲೂ ಸಾಧ್ಯವಾಗಲಿಲ್ಲ. ಹೀಗೆ ಮೊದಲ ದಿನ ಪರಾಕ್ರಮ ಮೆರೆದ ಆಂಗ್ಲರು ಕೇವಲ 3 ವಿಕೆಟ್ ಕಳೆದುಕೊಂಡು 263 ರನ್ ಕಲೆಹಾಕಿದೆ. ರೂಟ್ ಆಕರ್ಷಕ ಶತಕ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಜೋ ರೂಟ್ಗೆ ಈ ಪಂದ್ಯ ವಿಶೇಷವಾಗಿತ್ತು. ಇದು ಅವರ ವೃತ್ತಿ ಬದುಕಿನ ನೂರನೇ ಟೆಸ್ಟ್ ಪಂದ್ಯ. 100ನೇ ಪಂದ್ಯದಲ್ಲಿ ಸೆಂಚುರಿ ಬಾರಿಸಿರುವುದು ಕೆಲವೇ ಕೆಲವು ಆಟಗಾರರು ಮಾತ್ರ. ಟೀಂ ಇಂಡಿಯಾ ವಿರುದ್ಧ ಸೆಂಚುರಿ ಬಾರಿಸಿ ಬ್ಯಾಟ್ ಮೇಲೆಕ್ಕೆತ್ತುವ ಮೂಲಕ ವಿಶೇಷ ಸಾಧನೆ ಮಾಡಿದ ಇಂಗ್ಲೆಂಡ್ನ 3ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಅಲ್ಲದೆ 98, 99 ಮತ್ತು 100 ನೇ ಟೆಸ್ಟ್ನಲ್ಲಿ ಶತಕ ಬಾರಿಸುವ ಮೂಲಕ ಹೊಸ ವಿಶ್ವ ದಾಖಲೆಯನ್ನೂ ನಿರ್ಮಿಸಿದರು.
IPL 2021: IPL ನಿಂದ ಹಿಂದೆ ಸರಿದ ಸ್ಟಾರ್ ಆಟಗಾರ..!
ಇವೆಲ್ಲದರ ನಡುವೆ ಮೈದಾನದಲ್ಲಿ ನಡೆದಿರುವ ಘಟನೆವೊಂದು ಎಲ್ಲರ ಮನಗೆದ್ದಿದೆ. ಚೆನ್ನೈನ ಉರಿ ಬಿಸಿಲಿನ ಮಧ್ಯೆ ಗಂಟೆಗಟ್ಟಲೆ ಬ್ಯಾಟಿಂಗ್ ಮಾಡಿದ ರೂಟ್ 87ರನ್ಗಳಿಸಿದ್ದಾಗ ಆರ್.ಅಶ್ವಿನ್ ಎಸೆದ ಓವರ್ನಲ್ಲಿ ಸಿಕ್ಸರ್ ಸಿಡಿಸಿದರು. ಈ ವೇಳೆ ಸ್ನಾಯು ಸೆಳೆತಕ್ಕೊಳಗಾದ ಇಂಗ್ಲೆಂಡ್ ಕ್ಯಾಪ್ಟನ್ ರೂಟ್ಗೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಓಡಿ ಬಂದು ಸಹಾಯ ಮಾಡಿ ಕ್ರೀಡಾ ಸ್ಫೂರ್ತಿ ಮೆರೆದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕೊಹ್ಲಿ ಮೈದಾನದಲ್ಲಿ ರೂಟ್ಗೆ ಸಹಾಯ ಮಾಡುತ್ತಿರುವ ವಿಡಿಯೋವನ್ನ ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪಂದ್ಯ ಗೆಲ್ಲಲು ಜಿದ್ದಾಜಿದ್ದಿನ ಪೈಪೋಟಿ ಇರುವಾಗ ಎದುರಾಳಿ ತಂಡದ ನಾಯಕ ಶತಕ ಬಾರಿಸಿ ಪಂದ್ಯ ಕೈ ಜಾರುವಂತೆ ಮಾಡಿರುವಾಗ ಹತಾಶೆಯ ಸಮಯದಲ್ಲೂ ಕ್ರೀಡಾ ಸ್ಫೂರ್ತಿ ಮೆರೆದು ಸಹಾಯ ಹಸ್ತ ಚಾಚಿದ ವಿರಾಟ್ ಕೊಹ್ಲಿ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ.
Joe Root: 100ನೇ ಟೆಸ್ಟ್ನಲ್ಲಿ ಶತಕ ಸಿಡಿಸಿ ಹೊಸ ವಿಶ್ವ ದಾಖಲೆ ಬರೆದ ಜೋ ರೂಟ್
ಒಟ್ಟಾರೆ ಇಂದಿನ ಎರಡನೇ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದೆ. ಪಂದ್ಯ ಭಾರತದ ಕಡೆ ವಾಲಲು ಇಂಗ್ಲೆಂಡ್ ಬ್ಯಾಟ್ಸ್ಮನ್ಗಳನ್ನ ಆದಷ್ಟು ಬೇಗ ಔಟ್ ಮಾಡಬೇಕಿದೆ. ಇದಕ್ಕೂ ಮುನ್ನ ಭರ್ಜರಿ ಫಾರ್ಮ್ನಲ್ಲಿರುವ ರೂಟ್ಗೆ ಪೆವಿಲಿಯನ್ ರೂಟ್ ತೋರಿಸಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ