ಸೋತ ಪಂದ್ಯದಲ್ಲೂ ದಾಖಲೆ ಬರೆದ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ

ವಿಶ್ವಕಪ್​​ನಲ್ಲಿ ಭಾರತ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಕೊಹ್ಲಿ ಕೇವಲ 18 ರನ್​ ಗಳಿಸಿದ್ದರು. ನಂತರ ಆಡಿದ ಐದೂ ಪಂದ್ಯಗಳಲ್ಲಿ ಕೊಹ್ಲಿ ಬ್ಯಾಟ್​ನಿಂದ ಅರ್ಧಶತಕ ಸಿಡಿದಿದೆ.

Rajesh Duggumane | news18
Updated:July 1, 2019, 10:42 AM IST
ಸೋತ ಪಂದ್ಯದಲ್ಲೂ ದಾಖಲೆ ಬರೆದ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ
ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)
  • News18
  • Last Updated: July 1, 2019, 10:42 AM IST
  • Share this:
ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಇತ್ತೀಚೆಗೆ ಏಕದಿನ ಕ್ರಿಕೆಟ್​ನಲ್ಲಿ 11 ಸಾವಿರ ರನ್ ಮೈಲುಗಲ್ಲು, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ 20 ಸಾವಿರ ರನ್​ ಪೂರೈಸಿ ಕ್ರಿಕೆಟ್​ ದಂತಕಥೆ ಸಚಿನ್​ ತೆಂಡೂಲ್ಕರ್ ಹಾಗೂ ಬ್ರಿಯಾನ್ ಲಾರ ದಾಖಲೆಯನ್ನು ಪುಡಿಗಟ್ಟಿದ ವಿರಾಟ್​ ಕೊಹ್ಲಿ, ಇದೀಗ ಭಾನುವಾರ ಇಂಗ್ಲೆಂಡ್​ ವಿರುದ್ಧ  ಸೋತ ಪಂದ್ಯದಲ್ಲೂ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 

ಭಾರತ ತಂಡದ ನಾಯಕನಾಗಿ ವಿರಾಟ್​ ಕೊಹ್ಲಿ ಈ ಬಾರಿಯ ವಿಶ್ವಕಪ್​ನಲ್ಲಿ ಸತತ 5 ಅರ್ಧಶತಕಗಳನ್ನು ಸಿಡಿಸಿದ್ದಾರೆ. ನಾಯಕನಾಗಿ ಈ ರೀತಿ ಅರ್ಧಶತಕವನ್ನು ಸತತವಾಗಿ ಸಿಡಿಸಿದ್ದು ಕ್ರಿಕೆಟ್​ ಇತಿಹಾಸದಲ್ಲಿ ಇದೇ ಮೊದಲು. ಈ ಮೂಲಕ ಅವರು ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. 2007ರ ವಿಶ್ವಕಪ್​ನಲ್ಲಿ ಸತತ 4 ಅರ್ಧಶತಕ ಬಾರಿಸಿದ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್​ ಸ್ಮಿತ್​ ಹಾಗೂ 2019ರ ಇದೇ ವಿಶ್ವಕಪ್​ನಲ್ಲಿ ಸತತ 4 ಅರ್ಧಶತಕ ಸಿಡಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಆರೋನ್ ಫಿಂಚ್​ ಎರಡನೇ ಸ್ಥಾನದಲ್ಲಿದ್ದಾರೆ.

ಅಲ್ಲದೆ, 2015ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಆಟಗಾರ ಸ್ಟೀವ್​ ಸ್ಮಿತ್​ ಸಹ ಸತತ 5 ಅರ್ಧ ಶತಕಗಳನ್ನು ಬಾರಿಸಿದ್ದರು. ಆದರೆ ಅವರು ಆ ಸಂದರ್ಭದಲ್ಲಿ ನಾಯಕನಾಗಿರಲಿಲ್ಲ ಎಂಬುದು ಉಲ್ಲೇಖಾರ್ಹ.

ವಿಶ್ವಕಪ್​​ನಲ್ಲಿ ಭಾರತ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಿತ್ತು. ಈ ಪಂದ್ಯದಲ್ಲಿ ಕೊಹ್ಲಿ ಕೇವಲ 18 ರನ್​ ಗಳಿಸಿದ್ದರು. ನಂತರ ಆಡಿದ ಐದೂ ಪಂದ್ಯಗಳಲ್ಲಿ ಕೊಹ್ಲಿ ಕ್ರಮವಾಗಿ ಪಾಕಿಸ್ತಾನದ ವಿರುದ್ಧ 77,  ಅಪಘಾನಿಸ್ತಾನದ ವಿರುದ್ಧ 67, ಆಸ್ಟ್ರೇಲಿಯಾ ವಿರುದ್ಧ 82, ವೆಸ್ಟ್​ ಇಂಡೀಸ್​ ವಿರುದ್ಧ 72 ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 66 ಸಿಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬರ್ಮಿಂಗ್​ ಹ್ಯಾಮ್​​ನಲ್ಲಿ ನಡೆದ ವಿಶ್ವಕಪ್​ನ 38ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲುಕಂಡಿತ್ತು. ರೋಹಿತ್ ಶರ್ಮಾರ ಶತಕದ ಹೊರತಾಗಿಯು ಬೌಲರ್​ಗಳ ಸಂಘಟಿತ ಹೋರಾಟದ ನೆರವಿನಿಂದ ಇಂಗ್ಲೆಂಡ್ 31 ರನ್​ಗಳ ಗೆಲುವು ಸಾಧಿಸಿ ಸೆಮೀಸ್ ಹಾದಿಯನ್ನು ಜೀವಂತವಾಗಿರಿಸಿದೆ. ಇತ್ತ ಟೀಂ ಇಂಡಿಯಾ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದೆ.

ಇದನ್ನೂ ಓದಿ: ರೋಹಿತ್ ಶತಕದ ಹೋರಾಟ ವ್ಯರ್ಥ; ಟೂರ್ನಿಯಲ್ಲಿ ಮೊದಲ ಸೋಲುಂಡ ಭಾರತ

ಜಾನಿ ಬೈರ್​ಸ್ಟೋರ ಆಕರ್ಷಕ ಶತಕ ಹಾಗೂ ಬೆನ್ ಸ್ಟೋಕ್ಸ್​, ಜೇಸನ್ ರಾಯ್​​ರ ಅರ್ಧಶತಕದ ನೆರವಿನಿಂದ ಆಂಗ್ಲರು ಭಾರತಕ್ಕೆ ಗೆಲ್ಲಲು 338 ರನ್​ಗಳ ಬೃಹತ್ ಟಾರ್ಗೆಟ್ ನೀಡಿತು.ಈ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಕ್ರಿಸ್ ವೋಕ್ಸ್​ ಬೌಲಿಂಗ್​ನಲ್ಲಿ ಕೆ.ಎಲ್. ರಾಹುಲ್ 9 ಎಸೆತಗಳಲ್ಲಿ ಶೂನ್ಯಕ್ಕೆ ಔಟ್ ಆದರು. ಬಳಿಕ ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ಎಚ್ಚರಿಕೆಯ ಇನ್ನಿಂಗ್ಸ್​ ಕಟ್ಟಿದರು. ರೋಹಿತ್​ ಶರ್ಮಾ ಈ ವಿಶ್ವಕಪ್​ನಲ್ಲಿ ಮೂರನೇ ಶತಕ ಸಿಡಿಸಿ ಸಂಭ್ರಮಿಸಿದರು ಆದರೂ ಸಹ ಭಾರತ 31ರನ್​ಗಳ ಅಂತರದಿಂದ ಸೋಲು ಕಾಣಬೇಕಾಯಿತು.

ಇದನ್ನೂ ಓದಿ: ಭಾರತದ ಸೋಲಿನಿಂದ ಪಾಕ್​ ಮನೆಗೆ ಹೋಗಿಲ್ಲ; ಚಮತ್ಕಾರ ನಡೆದರೆ ಈಗಲೂ ಇದೆ ಸೆಮಿ ಫೈನಲ್​ಗೇರುವ ಅವಕಾಶ

First published:July 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ