India vs England: ಕೇಸರಿ ಬಣ್ಣದ ಹೊಸ ಜೆರ್ಸಿ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ?

India vs England: ಜೆರ್ಸಿ ನೋಡಲು ಸುಂದರವಾಗಿದೆ, ತುಂಬಾನೆ ಸಂತೋಷವಾಯಿತು. ನಾನು ಈ ಜೆರ್ಸಿಗೆ 10 ರಲ್ಲಿ 8 ಅಂಕ ನೀಡುತ್ತೇನೆ- ವಿರಾಟ್ ಕೊಹ್ಲಿ

Vinay Bhat | news18
Updated:June 29, 2019, 6:18 PM IST
India vs England: ಕೇಸರಿ ಬಣ್ಣದ ಹೊಸ ಜೆರ್ಸಿ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು ಗೊತ್ತಾ?
ವಿರಾಟ್ ಕೊಹ್ಲಿ (ಟೀಂ ಇಂಡಿಯಾ ನಾಯಕ)
Vinay Bhat | news18
Updated: June 29, 2019, 6:18 PM IST
ಬೆಂಗಳೂರು (ಜೂ. 29): ವಿಶ್ವಕಪ್​ನಲ್ಲಿ ನಾಳೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಬರ್ಮಿಂಗ್ ​​ಹ್ಯಾಮ್​​​ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡ ಮುಖಾಮುಖಿ ಆಗುತ್ತಿದೆ.

ಈ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕೇಸರಿ ಉಡುಪು ಧರಿಸಿ ಕಣಕ್ಕಿಳಿಯಲಿದ್ದು ಕುತೂಹಲ ಕೆರಳಿಸಿದೆ. ಇದಕ್ಕೂ ಮೊದಲು ಇಂದು ಬಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ಹೊಸ ಜೆರ್ಸಿ ಬಗ್ಗೆ ಮಾತನಾಡಿದ ಕೊಹ್ಲಿ, ಜೆರ್ಸಿ ನೋಡಲು ಸುಂದರವಾಗಿದೆ, ತುಂಬಾನೆ ಸಂತೋಷವಾಯಿತು. ನಾನು ಈ ಜೆರ್ಸಿಗೆ 10 ರಲ್ಲಿ 8 ಅಂಕ ನೀಡುತ್ತೇನೆ ಎಂದು ಕೊಹ್ಲಿ ಹೇಳಿದರು. ಇನ್ನು ಈ ಹೊಸ ಜೆರ್ಸಿ ಕೇವಲ ಒಂದು ಪಂದ್ಯಕ್ಕಷ್ಟೆ ಸೀಮತ. ಮುಂದಿನ ಎಲ್ಲ ಪಂದ್ಯಕ್ಕೆ ಇದೇ ಜೆರ್ಸಿಯಲ್ಲಿ ಆಡಲಾಗುವುದಿಲ್ಲ. ನಮ್ಮದು ಯಾವಾಗಲು ನೀಲಿ ಬಣ್ಣದ ಜೆರ್ಸಿಯೇ ಎಂದು ಹೇಳಿದ್ದಾರೆ.

World Cup 2019: ಶಂಕರ್, ಪಂತ್, ಕಾರ್ತಿಕ್ ಅಲ್ಲ: 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ ಈ ಸ್ಟಾರ್ ಆಟಗಾರ

 



ಇನ್ನು ನಾಳಿನ ಪಂದ್ಯದ ಬಗ್ಗೆ ಮಾತನಾಡಿ ಕೊಹ್ಲಿ, ತವರಿನಲ್ಲಿ ವಿಶ್ವಕಪ್ ನಡೆಯುತ್ತಿರುವುದರಿಂದ ಇಂಗ್ಲೆಂಡ್ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎಂದು ನಂಬಲಾಗಿತ್ತು. ಆದರೆ, ಅದು ಅಷ್ಟು ಸುಲಭವಲ್ಲ. ತವರಿನ ಅಂಗಳದಲ್ಲಿ ಆಡುವಾಗ ಸಾಕಷ್ಟು ಒತ್ತಡಗಳಿರುವತ್ತವೆ. ಇದು ತಂಡದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ನಾಳಿನ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

First published:June 29, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...