ಬೆಂಗಳೂರು (ಫೆ. 10): ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲೇ ಭಾರತ ಹೀನಾಯ ಸೋಲುಕಂಡಿದೆ. ಈ ನಡುವೆ ಟೀಂ ಇಂಡಿಯಾ ಸೋಲಿಗೆ ತಂಡದ ಆಯ್ಕೆ ಪ್ರಕ್ರಿಯೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ ಚೈನಾಮನ್ ಕುಲ್ದೀಪ್ ಯಾದವ್ ಅವರನ್ನು ಆಡುವ ಬಳಗದಲ್ಲಿ ಕಣಕ್ಕಿಳಿಸದ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕ ಕ್ರಿಕೆಟ್ ಪಂಡಿತರು ಪ್ರಶ್ನೆ ಮಾಡಿದ್ದರು. ಸದ್ಯ ಇದೇ ವಿಷಯಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಉತ್ತರ ನೀಡಿದ್ದಾರೆ.
ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ, ಕುಲ್ದೀಪ್ ಯಾದವ್ರನ್ನು ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೆ 11ರ ಬಳಗದಲ್ಲಿ ಆಯ್ಕೆ ಮಾಡದಿದ್ದಕ್ಕೆ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾರೆ.
Kevin Pietersen: ನಾ ಅವತ್ತೇ ಹೇಳಿದ್ದೆ ಜಾಸ್ತಿ ಸಂಭ್ರಮಿಸಬೇಡಿ ಎಂದು: ಸೋಲಿನ ಬೆನ್ನಲ್ಲೇ ಭಾರತೀಯರ ಕಾಲೆಳೆದ ಪೀಟರ್ಸನ್
ಮೊದಲ ಟೆಸ್ಟ್ನಲ್ಲಿ ಒಟ್ಟು ಮೂರು ಸ್ಪಿನ್ನರ್ಗಳನ್ನು ಆಡಿಸಿದ್ದರೂ ಕೂಡ ತಂಡದ ಪ್ರಮುಖ ಸ್ಪಿನ್ನರ್ ಕುಲ್ದೀಪ್ ಯಾದವ್ಗೆ ಅವಕಾಶ ಸಿಕ್ಕಿರಲಿಲ್ಲ. ವಾಷಿಂಗ್ಟನ್ ಸುಂದರ್, ಆರ್ ಅಶ್ವಿನ್ ಮತ್ತು ಅಚ್ಚರಿಯ ಆಯ್ಕೆ ಎಂಬಂತೆ ಎಡಗೈ ಸ್ಪಿನ್ನರ್ ಶಹಬಾಝ್ ನದೀಮ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.
ಆದರೆ, ಇದು ಯಾವುದೂ ಪ್ರಯೋಜನವಾಗದೆ ಚೆನ್ನೈ ಟೆಸ್ಟ್ನಲ್ಲಿ ಟೀಂ್ ಇಂಡಿಯಾ 227 ರನ್ಗಳ ಹೀನಾಯ ಸೋಲಿನ ಆಘಾತಕ್ಕೆ ಒಳಗಾಗಿದೆ. ಇದರ ಬೆನ್ನಲ್ಲೇ ಕುಲ್ದೀಪ್ ಯಾದವ್ ಅವರನ್ನು ಆಡಿಸದೇ ಮಾಡಿದ ತಪ್ಪಿಗೆ ಭಾರಿ ಬೆಲೆ ತೆತ್ತಿದೆ ಎಂದು ವ್ಯಾಪಕವಾಗಿ ಟೀಕೆ ಮಾಡಲಾಗುತ್ತಿದೆ. ಈ ಎಲ್ಲ ಟೀಕೆಗಳಿಗೆ ಕಿಂಗ್ ಕೊಹ್ಲಿ ಉತ್ತರ ನೀಡಿದ್ದಾರೆ.
"ಕುಲ್ದೀಪ್ ಯಾದವ್ ಅವರನ್ನು ಆಡಿಸದ ಬಗ್ಗೆ ನಿಜಕ್ಕೂ ವಿಷಾದವಿಲ್ಲ. ಇಬ್ಬರು ಆಫ್ಸ್ಪಿನ್ನರ್ಗಳನ್ನು ಆಡಿಸುವಾಗ ಕುಲ್ದೀಪ್ ಬಹುತೇಕ ಸಾಮ್ಯತೆಯ ಬೌಲಿಂಗ್ಅನ್ನು ಹೊಂದಿದ್ದಾರೆ. ಬೌಲಿಂಗ್ನಲ್ಲಿ ವೈವಿಧ್ಯತೆಗಳು ಅಗತ್ಯವಾಗುತ್ತದೆ. ಹೀಗಾಗಿ ಆಡುವ ಬಳಗದಲ್ಲಿ ಬೌಲಿಂಗ್ ಆಯ್ಕೆಯ ಬಗ್ಗೆ ನಾವು ಸ್ಪಷ್ಟತೆಯನ್ನು ಹೊಂದಿದ್ದೆವು. ಆ ನಿರ್ಧಾರಕ್ಕೆ ಯಾವುದೇ ವಿಷಾದವಿಲ್ಲ" ಎಂದು ಕೊಹ್ಲಿ ಹೇಳಿದ್ದಾರೆ.
IPL 2021: ಐಪಿಎಲ್ನಲ್ಲಿ 13 ಬಾರಿ ಹೆಸರು ನೀಡಿದ್ರು, ಸೇಲ್ ಆಗದ ಸ್ಟಾರ್ ಆಟಗಾರ..!
2019ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ ಮ್ಯಾಚ್ ವಿನ್ನಿಂಗ್ಸ್ ಪ್ರದರ್ಶನದ ಬಳಿಕ ಕುಲ್ದೀಪ್ ಯಾದವ್ ಸತತವಾಗಿ ಅವಕಾಶ ವಂಚಿತರಾಗುತ್ತಿದ್ದಾರೆ. ಟೀಂ ಇಂಡಿಯಾ ಜೊತೆಗೆ ಪ್ರವಾಸಕ್ಕೆ ಆಯ್ಕೆಯಾದರೂ ಆಡುವ ಬಳಗದಲ್ಲಿ ಇವರಿಗೆ ಅವಕಾಶ ದೊರೆಯುತ್ತಿಲ್ಲ. ಸದ್ಯ ಎರಡನೇ ಟೆಸ್ಟ್ನಲ್ಲಿ ಕುಲ್ದೀಪ್ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ