HOME » NEWS » Sports » CRICKET INDIA VS ENGLAND VIRAL PHOTO OF CHENNAI TEST PLAYING AT WEDDING SHOWS INDIANS AND CRICKET ARE MATCH MADE IN HEAVEN VB STG

ಕಲ್ಯಾಣ ಮಂಟಪದಲ್ಲಿ ಭಾರತ vs ಇಂಗ್ಲೆಂಡ್ ಟೆಸ್ಟ್ ಮ್ಯಾಚ್ ಸ್ಕ್ರೀನಿಂಗ್: ವೈರಲ್ ಫೋಟೋಕ್ಕೆ ನೆಟ್ಟಿಗರ ಅಭಿಪ್ರಾಯ ಹೀಗಿದೆ

ಭಾರತ - ಇಂಗ್ಲೆಂಡ್ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 4 ನೇ ದಿನದಾಟವನ್ನು ವಿವಾಹ ಸಮಾರಂಭದ ಪರದೆಯ ಮೇಲೆ ವೀಕ್ಷಿಸಲಾಗುತ್ತಿದೆ. ಮದುವೆ ಕಾರ್ಯಕ್ರಮಗಳ ಜತೆಗೆ ಕ್ರಿಕೆಟ್ ಪಂದ್ಯವನ್ನೂ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ ಇಲ್ಲಿನ ಜನತೆ.

news18-kannada
Updated:February 9, 2021, 3:34 PM IST
ಕಲ್ಯಾಣ ಮಂಟಪದಲ್ಲಿ ಭಾರತ vs ಇಂಗ್ಲೆಂಡ್ ಟೆಸ್ಟ್ ಮ್ಯಾಚ್ ಸ್ಕ್ರೀನಿಂಗ್: ವೈರಲ್ ಫೋಟೋಕ್ಕೆ ನೆಟ್ಟಿಗರ ಅಭಿಪ್ರಾಯ ಹೀಗಿದೆ
India vs England
  • Share this:
ಭಾರತ ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತದೆ. ಅದು ಟಿ 20, ಏಕದಿನ ಅಥವಾ ಟೆಸ್ಟ್ ಪಂದ್ಯ - ಯಾವುದಾದರೂ ಸರಿಯೇ.. ಟೆಲಿವಿಷನ್ ಪರದೆಯಲ್ಲಿ ಪ್ರತಿ ಬಾರಿಯೂ ಪಂದ್ಯವು ದೇಶವನ್ನು ಒಂದುಗೂಡಿಸುತ್ತದೆ. ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ಜಗತ್ತು ತೆರೆದುಕೊಳ್ಳಲು ಪ್ರಾರಂಭಿಸಿದ ನಂತರ, ಐಪಿಎಲ್ ಕ್ರಿಕೆಟ್ ಪ್ರಿಯರನ್ನು ಕೊಂಡಿಯಾಗಿರಿಸಿತು. ಆಸ್ಟ್ರೇಲಿಯದ ನೆಲದಲ್ಲಿ ಭಾರತದ ಯುವ ತಂಡವು ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದು, ಎಲ್ಲರಿಗೂ ಗೊತ್ತೇ ಇದೆ. ಆದರೆ, ಪ್ರಸ್ತುತ ಇಂಗ್ಲೆಂಡ್ ತಂಡದ ವಿರುದ್ಧದ ಮೊದಲ ಟೆಸ್ಟ್​​ನಲ್ಲಿ ಭಾರತ ಹೀನಾಯ ಸೋಲು ಕಂಡಿದೆ.

ಆದರೆ, ದೇಶದಲ್ಲಿ ನಡೆಯುತ್ತಿರುವ ಕ್ರಿಕೆಟ್ ಅನ್ನು ಜನ ಹೇಗೆ ಮಿಸ್ ಮಾಡಿಕೊಳ್ತಾರೆ..?

ಯಾವುದೇ ಸ್ಥಳ ಅಥವಾ ಸಂದರ್ಭವಾಗಿದ್ದರೂ ಕ್ರಿಕೆಟ್ ನಿಜಕ್ಕೂ ನಮ್ಮ ಆದ್ಯತೆಯಾಗಿದೆ. ಕ್ರಿಕೆಟ್​ನ ಅಭಿಮಾನಿಯೊಬ್ಬರು ಇತ್ತೀಚೆಗೆ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್​ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಇದು ಕ್ರಿಕೆಟ್ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.

India vs England: ಇಂಗ್ಲೆಂಡ್ ಬೌಲರ್​ಗಳ ಬಿರುಗಾಳಿಗೆ ತತ್ತರಿಸಿದ ಭಾರತ: ಆಂಗ್ಲರಿಗೆ ಬೃಹತ್ ಅಂತರದ ಗೆಲುವು

ವಿವಾಹದ ಒಂದು ನೋಟವನ್ನು ಹಂಚಿಕೊಂಡ ಅಕ್ಷಯ್ ನಟರಾಜನ್ ಎಂಬ ಟ್ವಿಟ್ಟರ್ ಬಳಕೆದಾರನು ಟ್ವೀಟ್ವೊಂದನ್ನು ಮಾಡಿರುವುದು ಹೀಗೆ ನೋಡಿ.. ''ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಇಬ್ಬರು ಚೆನ್ನೈ ಹುಡುಗರು ಬ್ಯಾಟಿಂಗ್ ಮಾಡುತ್ತಿದ್ದಾರೆ.  ನೀವು ಹೇಗೆ ಮಿಸ್ ಮಾಡಿಕೊಳ್ಳಲು ಸಾಧ್ಯ..? ಹ್ಯಾಪಿ ಮ್ಯಾರೀಡ್ ಲೈಫ್ ಆನಂದ್'' ಎಂದು ಪೋಸ್ಟ್ ಮಾಡಿದ್ದಾರೆ. ಮದುವೆ ಜತೆಗೆ ಕ್ರಿಕೆಟ್ ಸಹ ಸ್ವರ್ಗದಲ್ಲಿ ನಿಶ್ಚಯವಾಗಿದೆ ಎನ್ನುವುದು ಇದಕ್ಕೆ.

ಭಾರತ - ಇಂಗ್ಲೆಂಡ್ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 4 ನೇ ದಿನದಾಟವನ್ನು ವಿವಾಹ ಸಮಾರಂಭದ ಪರದೆಯ ಮೇಲೆ ವೀಕ್ಷಿಸಲಾಗುತ್ತಿದೆ. ಮದುವೆ ಕಾರ್ಯಕ್ರಮಗಳ ಜತೆಗೆ ಕ್ರಿಕೆಟ್ ಪಂದ್ಯವನ್ನೂ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ ಇಲ್ಲಿನ ಜನತೆ.

ಈ ಫೋಟೋ ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಏಕೆಂದರೆ ಈ ಕ್ರೀಡೆಯು ಅವರಿಗೆ ಮತ್ತು ದೇಶದ ಜನರಿಗೆ ನಿಜವಾಗಿಯೂ ಏನು ಎಂದು ವಿವರಿಸಲು ಹಲವಾರು ಅಭಿಮಾನಿಗಳು ಮುಂದಾಗಿದ್ದರು.

ಈ ನಡುವೆ, ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ 227 ರನ್​ಗಳಿಂದ ಭರ್ಜರಿ ಜಯ ಸಾಧಿಸಿದೆ.
Published by: Vinay Bhat
First published: February 9, 2021, 3:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories