India vs England: ವಿಶ್ವಕಪ್​​ನಲ್ಲಿಂದು ಭಾರತ-ಇಂಗ್ಲೆಂಡ್ ನಡುವೆ ಹೈವೋಲ್ಟೇಜ್ ಪಂದ್ಯ; ಕೊಹ್ಲಿಗೆ 4ನೇ ಕ್ರಮಾಂಕದ್ದೇ ಚಿಂತೆ!

ಇಂಗ್ಲೆಂಡ್ ವಿರುದ್ಧ ಪ್ರಮುಖ ಪಂದ್ಯ ಆಗಿರುವುದರಿಂದ ತಂಡದಲ್ಲಿ ದೊಡ್ಡ ಬದಲಾವಣೆ ಮಾಡುವ ಅಂದಾಜಿದೆ. ಶಂಕರ್ ಅನ್ನು ಕೈಬಿಟ್ಟು ದಿನೇಶ್ ಕಾರ್ತಿಕ್ ಅಥವಾ ರವೀಂದ್ರ ಜಡೇಜಾಗೆ ಅವಕಾಶ ನೀಡಬಹುದು.

Vinay Bhat | news18
Updated:June 30, 2019, 7:23 AM IST
India vs England: ವಿಶ್ವಕಪ್​​ನಲ್ಲಿಂದು ಭಾರತ-ಇಂಗ್ಲೆಂಡ್ ನಡುವೆ ಹೈವೋಲ್ಟೇಜ್ ಪಂದ್ಯ; ಕೊಹ್ಲಿಗೆ 4ನೇ ಕ್ರಮಾಂಕದ್ದೇ ಚಿಂತೆ!
ಟೀಂ ಇಂಡಿಯಾ ಆಟಗಾರರು
  • News18
  • Last Updated: June 30, 2019, 7:23 AM IST
  • Share this:
ಬೆಂಗಳೂರು (ಜೂ. 29): ಬರ್ಮಿಂಗ್​ ಹ್ಯಾಮ್​​ನಲ್ಲಿ ನಡೆಯಲಿರುವ ವಿಶ್ವಕಪ್​ನ ಇಂದಿನ ಪಂದ್ಯದಲ್ಲಿ ಎರಡು ಬಲಿಷ್ಠ ತಂಡಗಳು ಮುಖಾಮುಖಿ ಆಗುತ್ತಿವೆ. ಮೊದಲ ಬಾರಿ ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ತಂಡ ಸೆಣೆಸಾಟ ನಡೆಸುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯದ ಮೇಲೆ ವಿಶ್ವವೇ ಕಣ್ಣಿಟ್ಟಿದೆ.

ಟೀಂ ಇಂಡಿಯಾ ಇಂದಿನ ಪಂದ್ಯ ಗೆದ್ದರೆ ಸೆಮಿ ಫೈನಲ್‌ಗೆ ಲಗ್ಗೆಯಿಡಲಿದೆ. ಆದರೆ ಇಂಗ್ಲೆಂಡ್‌ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆಲ್ಲಲೇ ಬೇಕಾಗಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋತರೆ ವಿಶ್ವಕಪ್​ನಿಂದಲೇ ಹೊರಬೀಳುವ ಹಂತಕ್ಕೆ ತಲುಪಲಿದೆ.

ಕೊಹ್ಲಿ ಪಡೆ ಆಡಿರುವ ಆರು ಪಂದ್ಯಗಳಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾಗಿದ್ದು ಬಿಟ್ಟರೆ, ಇನ್ನುಳಿದ ಐದೂ ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಅಲ್ಲದೆ 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನೂ ಇಂದು ಇಂಗ್ಲೆಂಡ್‌ ವಿರುದ್ಧ ಗೆದ್ದರೆ ಭಾರತ ಐಸಿಸಿ ಶ್ರೇಯಾಂಕದಲ್ಲೂ ಅಗ್ರ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲಿದೆ.

PAK vs AFG: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಪಾಕ್; ಸೆಮೀಸ್ ಹಾದಿ ಇನ್ನೂ ಜೀವಂತ

ಭಾರತ ಎಲ್ಲಾ ವಿಭಾಗದಲ್ಲಿ ಬಲಿಷ್ಠವಾಗಿದೆ. ಆದರೆ ನಾಲ್ಕನೇ ಕ್ರಮಾಂಕದ್ದೇ ದೊಡ್ಡ ಸಮಸ್ಯೆ. ನಂಬರ್ 4 ಸ್ಥಾನದಲ್ಲಿ ಆಲ್​ರೌಂಡರ್ ವಿಜಯ್​ ಶಂಕರ್​​ಗೆ ಅವಕಾಶ​ ಕೊಟ್ಟಷ್ಟೂ ಮುಗ್ಗರಿಸುತ್ತಿದ್ದಾರೆ. ವಿಶ್ವಕಪ್​ಗೂ ಮೊದಲು ಕಾಣಿಸಿಕೊಂಡಿದ್ದ ಸಮಸ್ಯೆಗೆ ಲೀಗ್ ಸ್ಟೇಜ್ ಮುಗಿಯುವ ಹಂತಕ್ಕೆ ತಲುಪಿದರೂ ಪರಿಹಾರ ಸಿಕ್ಕಿಲ್ಲ.

India vs England: Upbeat, Buoyant and 'Home', India Target Stumbling Hosts
ದಿನೇಶ್ ಕಾರ್ತಿಕ್


ಹೀಗಾಗಿ ಇಂದು ಇಂಗ್ಲೆಂಡ್ ವಿರುದ್ಧ ಪ್ರಮುಖ ಪಂದ್ಯ ಆಗಿರುವುದರಿಂದ ತಂಡದಲ್ಲಿ ದೊಡ್ಡ ಬದಲಾವಣೆ ಮಾಡುವ ಅಂದಾಜಿದೆ. ಶಂಕರ್ ಅನ್ನು ಕೈಬಿಟ್ಟು ದಿನೇಶ್ ಕಾರ್ತಿಕ್ ಅಥವಾ ರವೀಂದ್ರ ಜಡೇಜಾಗೆ ಅವಕಾಶ ನೀಡಬಹುದು. ಇನ್ನು ಬೌಲಿಂಗ್​ನಲ್ಲಿ ಶಮಿ ಜೊತೆ ಬೂಮ್ರಾ ಮೇಲೆ ಹಚ್ಚಿನ ಜವಾಬ್ದಾರಿ ಇದೆ.ಬ್ಯಾಟಿಂಗ್‌ನಲ್ಲಿ ಇಂಗ್ಲೆಂಡ್‌ ತಂಡ ಬಲಿಷ್ಟವಾಗಿದೆ. ನಾಯಕ ಇಯಾನ್‌ ಮಾರ್ಗನ್‌ ಬ್ಯಾಟಿಂಗ್‌ನಲ್ಲಿ ಮಿಂಚೋಕೆ ರೆಡಿಯಾಗಿದ್ದಾರೆ. ಇವರ ಜೊತೆ ಜೋ ರೂಟ್, ಬೆನ್ ಸ್ಟೋಕ್ಸ್, ಜಾಣಿ ಬೈರ್​ಸ್ಟೋ ಕೂಡ ಇದ್ದು ದೊಡ್ಡ ಮೊತ್ತ ಕಲೆಹಾಕುವ ಸಾಮರ್ಥ್ಯವಿದೆ. ಆದರೆ ಬೌಲಿಂಗ್​ನಲ್ಲಿ ವೀಕ್ ಆಗಿರುವ ಇಂಗ್ಲೆಂಡ್ ಮತ್ತಚ್ಟು ಸುಧಾರಿಸಬೇಕಿದೆ.

ಒಟ್ಟಾರೆ ಉಭಯ ತಂಡಗಳಿಗೆ ಇಂದಿನ ಪಂದ್ಯ ಮುಖ್ಯವಾಗಿದ್ದು, ವಿಜಯಲಕ್ಷ್ಮೀ ಯಾರಕಡೆ ವಾಲಲಿದ್ದಾಳೆ ಎಂಬುದು ಕುತೂಹಲ ಕೆರಳಿಸಿದೆ.
First published:June 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading