HOME » NEWS » Sports » CRICKET INDIA VS ENGLAND TOP 5 INDIAN BATSMEN WITH MOST TEST CENTURIES AGAINST ENGLAND TEAM VB

India vs England: ಇಂಗ್ಲೆಂಡ್ ವಿರುದ್ಧ ಅಬ್ಬರಿಸಿದ ಟಾಪ್ 5 ಭಾರತೀಯ ಬ್ಯಾಟ್ಸ್​ಮನ್​ಗಳು ಇವರೇ ನೋಡಿ

ಇಂಗ್ಲೆಂಡ್ ತಂಡದ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಟಾಪ್ 5 ಭಾರತೀಯ ಆಟಗಾರರು ಯಾರು ಎಂಬುದನ್ನು ನೋಡುವುದಾದರೆ…

news18-kannada
Updated:February 3, 2021, 9:48 AM IST
India vs England: ಇಂಗ್ಲೆಂಡ್ ವಿರುದ್ಧ ಅಬ್ಬರಿಸಿದ ಟಾಪ್ 5 ಭಾರತೀಯ ಬ್ಯಾಟ್ಸ್​ಮನ್​ಗಳು ಇವರೇ ನೋಡಿ
Virat Kohli - Sachin Tendulkar
  • Share this:
ಬೆಂಗಳೂರು (ಫೆ. 03): ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್​ ಸರಣಿಗೆ ಸಜ್ಜಾಗುತ್ತಿದೆ. ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯಿಂದ ಕಮ್​ಬ್ಯಾಕ್ ಮಾಡಿದ್ದು ನೆಟ್​ನಲ್ಲಿ ಬ್ಯಾಟಿಂಗ್ ಅಭ್ಯಾಸ ಮುಂದುವರೆಸಿದ್ದಾರೆ. ಇತ್ತ ರೂಟ್ ಪಡೆ ಕೂಡ ಕ್ವಾರಂಟೈನ್ ಮುಗಿಸಿ ಮೈದಾನದಲ್ಲಿ ಬೆವರು ಹರಿಸುತ್ತಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಕಾರಣದಿಂದಾಗಿ ಈ ಟೆಸ್ಟ್ ಸರಣಿ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಇಂಗ್ಲೆಂಡ್ ವಿರುದ್ಧ ಭಾರತೀಯರ ಪಾರುಪತ್ಯ ತವರಿನಲ್ಲಿ ಅದ್ಭುತವಾಗಿದೆ. ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಅಂತೂ ಆಂಗ್ಲರ ನಾಡಿನಲ್ಲೇ ಇಂಗ್ಲೆಂಡ್​ಗೆ ಮಣ್ಣು ಮುಕ್ಕಿಸಿದ್ದರು.

ಹಾಗಾದ್ರೆ ಇಂಗ್ಲೆಂಡ್ ತಂಡದ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಟಾಪ್ 5 ಭಾರತೀಯ ಆಟಗಾರರು ಯಾರು ಎಂಬುದನ್ನು ನೋಡುವುದಾದರೆ…

ರಾಹುಲ್ ದ್ರಾವಿಡ್: ದಿ ವಾಲ್ ಖ್ಯಾತಿಯ ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಶತಕ ಬಾರಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಇವರ ಬ್ಯಾಟ್​ನಿಂದ ಒಟ್ಟು ಏಳು ಸೆಂಚುರಿ ಬಂದಿವೆ. 21 ಪಂದ್ಯಗಳಲ್ಲಿ 1950 ರನ್ ಗಳಿಸಿದ್ದು, ದ್ವಿಶತಕ ಕೂಡ ಸೇರಿವೆ ಎಂಬುದು ವಿಶೇಷ.

Ashok Dinda Retires: ಎಲ್ಲಾ ಮಾದರಿಯ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ ಅಶೋಕ್ ದಿಂಡಾ

ಸಚಿನ್ ತೆಂಡೂಲ್ಕರ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೂಡ ಇಂಗ್ಲೆಂಡ್ ವಿರುದ್ಧ ರಾಹುಲ್ ದ್ರಾವಿಡ್ ರೀತಿ 7 ಶತಕ ಬಾರಿಸಿದ್ದಾರೆ. ಜೊತೆಗೆ 2535 ರನ್ ಕಲೆಹಾಕಿ ಆಂಗ್ಲರ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್​ಮನ್ ಆಗಿದ್ದಾರೆ. 13 ಅರ್ಧಶತಕ ಕೂಡ ಸಚಿನ್ ಬಾರಿಸಿದ್ದಾರೆ.

ಮೊಹಮ್ಮದ್ ಅಜರುದ್ದೀನ್: ಟೀಂ ಇಂಡಿಯಾ ಮಾಜಿ ನಾಯಕ ಅಜರುದ್ದೀನ್ ಇಂಗ್ಲೆಂಡ್ ವಿರುದ್ಧ ಗರಿಷ್ಠ ಶತಕ ಗಳಿಸಿದ ಸಾಲಿನಲ್ಲಿ ಮೂರನೇಯವರಾಗಿದ್ದಾರೆ. ಇವರು 15 ಟೆಸ್ಟ್ ಪಂದ್ಯಗಳಲ್ಲಿ 1278 ರನ್ ಗಳಿಸಿ 6 ಶತಕ ಬಾರಿಸಿದ್ದಾರೆ. ಜೊತೆಗೆ ಮೂರು ಅರ್ಧಶತಕ ಕೂಡ ಸೇರಿವೆ.

ಚೇತೇಶ್ವರ್ ಪೂಜಾರ: ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್ ಪೂಜಾರ ಆಂಗ್ಲರ ವಿರುದ್ಧ ಅತಿ ಹೆಚ್ಚು ಸೆಂಚುರಿ ಗಳಿಸಿದ ಆಟಗಾರರ ಸಾಲಿನಲ್ಲಿ ನಾಲ್ಕನೇಯವರಾಗಿದ್ದಾರೆ. ಪೂಜಾರ ಒಟ್ಟು 18 ಪಂದ್ಯಗಳಲ್ಲಿ 5 ಶತಕ ಬಾರಿಸಿದ್ದು, 1339 ರನ್ ಗಳಿಸಿದ್ದಾರೆ.ICC World Test Championship: ಫೈನಲ್​ಗೇರಿದ ನ್ಯೂಜಿಲೆಂಡ್: ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ನಡುವೆ ಪೈಪೋಟಿ..!

ವಿರಾಟ್ ಕೊಹ್ಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಇಂಗ್ಲೆಂಡ್ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಇವರು ಒಟ್ಟು 19 ಟೆಸ್ಟ್ ಪಂದ್ಯಗಳಲ್ಲಿ 5 ಶತಕ ಸಿಡಿಸಿ 1570 ರನ್ ಗಳಿಸಿದ್ದಾರೆ.
Published by: Vinay Bhat
First published: February 3, 2021, 9:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories