T Natarajan: ತಮಿಳುನಾಡು ತಂಡದಿಂದ ಟಿ. ನಟರಾಜನ್ ಹೊರಕ್ಕೆ: ಕಾರಣವೇನು ಗೊತ್ತೇ?

ಆಸ್ಟ್ರೇಲಿಯಾ ಪ್ರವಾಸದ ಬಳಿಕ ವಿಜಯ್ ಹಜಾರೆ ಟೂರ್ನಿಯಲ್ಲಿ ತಮಿಳುನಾಡುವನ್ನು ಪ್ರತಿನಿಧಿಸಬೇಕಿದ್ದ ಟಿ. ನಟರಾಜನ್ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಬಿಸಿಸಿಐ ಸೂಚಿಸಿದೆ.

T Natarajan

T Natarajan

  • Share this:
    ಬೆಂಗಳೂರು (ಫೆ. 11): ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅದ್ಭುತ ಪ್ರದರ್ಶನ ತೋರಿ ಟೀಂ ಇಂಡಿಯಾಕ್ಕೆ ಆಯ್ಕೆಯಾದ ಟಿ. ನಟರಾಜನ್, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮಿಂಚಿದರು. ಸಿಕ್ಕ ಅವಕಾಶವನ್ನು ಎರಡೂ ಕೈಯಲ್ಲಿ ಬಾಜಿದ ಯಾರ್ಕರ್ ಕಿಂಗ್ ಒಂದು ಪ್ರವಾಸದಲ್ಲಿ ಭಾರತ ತಂಡದ ಪರ ಟೆಸ್ಟ್‌, ಏಕದಿನ ಮತ್ತು ಟಿ-20 ಮೂರೂ ಮಾದರಿಯ ಕ್ರಿಕೆಟ್‌ ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸದ್ಯ ನಟರಾಜನ್ ಟೀಂ ಇಂಡಿಯಾದ ಅತ್ಯಂತ ಬೇಡಿಕೆಯ ವೇಗಿಯಾಗಿದ್ದಾರೆ.

    ಈ ಯುವ ಸ್ಟಾರ್ ವೇಗಿ ಸದ್ಯ ತಮಿಳುನಾಡು ತಂದದಿಂದ ಹೊರಬಂದಿದ್ದಾರೆ. ಹೌದು, ಆಸ್ಟ್ರೇಲಿಯಾ ಪ್ರವಾಸದ ಬಳಿಕ ವಿಜಯ್ ಹಜಾರೆ ಟೂರ್ನಿಯಲ್ಲಿ ತಮಿಳುನಾಡುವನ್ನು ಪ್ರತಿನಿಧಿಸಬೇಕಿದ್ದ ಟಿ. ನಟರಾಜನ್ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಬಿಸಿಸಿಐ ಸೂಚಿಸಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಮಿಳುನಾಡು ಕ್ರಿಕೆಟ್ ಸಂಸ್ಥೆಗೆ ಸಂದೇಶ ರವಾನಿಸಿದೆ.

    ಕ್ರಿಕೆಟ್ ಅಂಗಳದಲ್ಲಿ ಮತ್ತೊಂದು ಹೊಸ ಲೀಗ್: ನೂತನ T20 ಕದನಕ್ಕೆ ವೇದಿಕೆ ರೂಪಿಸಲಿದೆ ಯುಎಇ

    ಭಾರತ ಕ್ರಿಕೆಟ್ ತಂಡ ಸದ್ಯ ಇಂಗ್ಲೆಂಡ್ ವಿರುದ್ಧ ಟೆಸ್ಟ್​ ಸರಣಿ ಆಡುತ್ತಿದೆ. ಇದಾದ ಬಳಿಕ 5 ಪಂದ್ಯಗಳ ಟಿ-20 ಕ್ರಿಕೆಟ್‌ ಸರಣಿ ನಡೆಯಲಿದೆ. ಇದಕ್ಕೆ ಸಂಪೂರ್ಣ ಫಿಟ್ನೆಸ್‌ ಕಾಯ್ದುಕೊಳ್ಳುವ ಸಲುವಾಗಿ ನಟರಾಜನ್ ಅವರಿಗೆ ತಮಿಳುನಾಡು ತಂಡದಿಂದ ವಿಶ್ರಾಂತಿ ಪಡೆಯುವಂತೆ ಬಿಸಿಸಿಐ ಸೂಚಿಸಿದೆ.

    ಈ ಬಗ್ಗೆ ತಮಿಳುನಾಡು ಕ್ರಿಕೆಟ್‌ ಸಂಸ್ಥೆ ಕಾರ್ಯದರ್ಶಿ ಆರ್‌ ರಾಮಸ್ವಾಮಿ ಮಾಹಿತಿ ನೀಡಿದ್ದು, "ಟಿ ನಟರಾಜನ್‌ ಇಂಗ್ಲೆಂಡ್‌ ವಿರುದ್ಧದ ಸೀಮಿತ ಓವರ್‌ಗಳ ಸರಣಿಗೆ ಫ್ರೆಷ್‌ ಇರುವಂತೆ ನೋಡಿಕೊಳ್ಳಲು ಬಿಸಿಸಿಐ ಆದೇಶಿಸಿದೆ. ರಾಷ್ಟ್ರೀಯ ತಂಡದ ವಿಚಾರವಾದ್ದರಿಂದ ಇದಕ್ಕೆ ನಾವು ಸಂಪೂರ್ಣ ಸಮ್ಮತಿಸಿದ್ದೇವೆ. ಹೀಗಾಗಿ ನಟರಾಜನ್‌ಗೆ ಬದಲಿ ಆಟಗಾರನನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಟರಾಜನ್‌ ಅವರನ್ನು ತಮಿಳುನಾಡು ತಂಡದ ಸೇವೆಯಿಂದ ಬಿಡುಗಡೆ ಮಾಡಲಾಗಿದೆ" ಎಂದು ಹೇಳಿದ್ದಾರೆ.

    ಕಳೆದ ಆಸ್ಟ್ರೇಲಿಯಾ ವಿರುದ್ಧದ ತನ್ನ ಚೊಚ್ಚಲ ಮೊದಲ ಏಕದಿನ ಪಂದ್ಯದಲ್ಲೇ ನಟರಾಜನ್ 2 ವಿಕೆಟ್ ಪಡೆದಿದ್ದರು. ನಂತರ ನಡೆದಿದ್ದ ಟಿ-20 ಸರಣಿಯ ಮೂರು ಪಂದ್ಯಗಳ ಪೈಕಿ ನಟರಾಜನ್ 6 ವಿಕೆಟ್ ಪಡೆದಿದ್ದರು. ಇದೇ ವೇಳೆ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಪಡೆದು ಮಿಂಚಿದ್ದರು.

    IPL 2021: ಈ ಬಾರಿ ಹೊಸ ಹೆಸರಿನೊಂದಿಗೆ ಕಣಕ್ಕಳಿಯಲು ಮುಂದಾಗಿದೆ ಈ ತಂಡ

    ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಈಗಾಗಲೇ ಮುಕ್ತಾಯಗೊಂಡಿದ್ದು ಭಾರತ ತಂಡ ಹೀನಾಯ ಸೋಲುಕಂಡಿದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಂಗ್ಲರು 1-0 ಮುನ್ನಡೆ ಸಾಧಿಸಿದ್ದಾರೆ. ಫೆ. 13 ರಿಂದ 17 ರ ವರೆಗೆ 2ನೇ ಟೆಸ್ಟ್ ಪಂದ್ಯ ನಡೆಯಲಿದೆ. ಫೆಬ್ರವರಿ 24 ರಿಂದ 28 ವರೆಗೆ ಅಹಮದಾವಾದ್​ನಲ್ಲಿ 3ನೇ ಟೆಸ್ಟ್ ಮತ್ತು ಮಾರ್ಚ್ 4 ರಿಂದ 8 ವರೆಗೆ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ನಂತರ ಅಹಮದಾಬಾದ್‌ನಲ್ಲಿ ಐದು ಪಂದ್ಯಗಳ ಟಿ-20 ಸರಣಿ ಮತ್ತು ಪುಣೆಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
    Published by:Vinay Bhat
    First published: