ಟೀಂ ಇಂಡಿಯಾ ಆಟಗಾರರೋ ಅಥವಾ ಇಂಡಿಯನ್ ಆಯಿಲ್ ಕೆಲಸಗಾರರೋ?; ಟ್ರೋಲ್ ಆಯ್ತು ಹೊಸ ಜರ್ಸಿ

ಹೊಸ ಜರ್ಸಿ ಕುರಿತು ಸಂತಸ ವ್ಯಕ್ತಪಡಿಸಿರುವ ಕೊಹ್ಲಿ, “ಈ ಜರ್ಸಿ ನನಗೆ ನಿಜಕ್ಕೂ ಇಷ್ಟವಾಗಿದೆ. 10ಕ್ಕೆ 8 ಅಂಕವನ್ನು ನಾನು ನೀಡುತ್ತೇನೆ,” ಎಂದಿದ್ದರು. ಆದರೆ, ಕೆಲವರು ಈ ಜರ್ಸಿ ಇಟ್ಟುಕೊಂಡು ಟ್ರೋಲ್​ ಮಾಡಿದ್ದಾರೆ.

Rajesh Duggumane | news18
Updated:June 30, 2019, 1:12 PM IST
ಟೀಂ ಇಂಡಿಯಾ ಆಟಗಾರರೋ ಅಥವಾ ಇಂಡಿಯನ್ ಆಯಿಲ್ ಕೆಲಸಗಾರರೋ?; ಟ್ರೋಲ್ ಆಯ್ತು ಹೊಸ ಜರ್ಸಿ
ಟ್ರೋಲ್​ ಮಾಡಲಾದ ಚಿತ್ರ
Rajesh Duggumane | news18
Updated: June 30, 2019, 1:12 PM IST
ಟೀಂ ಇಂಡಿಯಾ ಆಟಗಾರರು ಇಂದು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇಸರಿ-ಕಂದು ನೀಲಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಈಗಾಗಲೇ ಹೊಸ ಜರ್ಸಿಯ ಫೋಟೋಗಳನ್ನು ಬಿಡುಡಗೆ ಮಾಡಲಾಗಿದೆ. ಇದಕ್ಕೆ ರಾಜಕೀಯ ವಲಯದಲ್ಲಿ ಅಪಸ್ವರ ಕೇಳಿ ಬಂದಿತ್ತು. ಈಗ ಜರ್ಸಿ ವಿಚಾರ ಮತ್ತೆ ಟ್ರೋಲ್​ ಆಗಿದೆ.

ಇಂಟರ್​​ನ್ಯಾಷನಲ್ ಕ್ರಿಕೆಟ್​ ಕೌನ್ಸಿಲ್ (ಐಸಿಸಿ) ನಿಯಮದ ಅನುಸಾರ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡವೂ ಎರಡು ಬಣ್ಣಗಳ ಜೆರ್ಸಿ ಬಳಸಬಹುದು. ಅಲ್ಲದೆ, ಎರಡು ತಂಡಗಳು ಒಂದೇ ಬಣ್ಣದ ಜೆರ್ಸಿಯಲ್ಲಿ ಮೈದಾನಕ್ಕಿಳಿಯುವಂತಿಲ್ಲ. ಇಂಗ್ಲೆಂಡ್​ ಹಾಗೂ ಭಾರತ ತಂಡದ ಜರ್ಸಿ ಬಣ್ಣ ಒಂದೇ ತೆರನಾಗಿದೆ. ಇಂಗ್ಲೆಂಡ್ ತಂಡವು ವಿಶ್ವಕಪ್ ಆತಿಥ್ಯವಹಿಸಿರುವುದರಿಂದ ಆಂಗ್ಲರಿಗೆ ಜೆರ್ಸಿ ಬದಲಿಸಬೇಕೆಂಬ ನಿಯಮ ಅನ್ವಯವಾಗುವುದಿಲ್ಲ. ಹಾಗಾಗಿ ಭಾರತ ಜರ್ಸಿಯ ಬಣ್ಣ ಬದಲಿಸಿ ಕಣಕ್ಕಿಳಿಯುತ್ತಿದೆ.

ಹೊಸ ಜರ್ಸಿ ಕುರಿತು ಸಂತಸ ವ್ಯಕ್ತಪಡಿಸಿರುವ ಕೊಹ್ಲಿ, “ಈ ಜರ್ಸಿ ನನಗೆ ನಿಜಕ್ಕೂ ಇಷ್ಟವಾಗಿದೆ. 10ಕ್ಕೆ 8 ಅಂಕವನ್ನು ನಾನು ನೀಡುತ್ತೇನೆ,” ಎಂದಿದ್ದರು. ಆದರೆ, ಕೆಲವರು ಈ ಬಣ್ಣವನ್ನು ಇಟ್ಟುಕೊಂಡು ಟ್ರೋಲ್​ ಮಾಡಿದ್ದಾರೆ.




ಇಂಡಿಯನ್​ ಆಯಿಲ್​ ಪೆಟ್ರೊಲ್​ ಬಂಕ್​ನಲ್ಲಿ ಕೆಲಸ ಮಾಡುವವರಿಗೆ ಇದೇ ಮಾದರಿಯ ಸಮವಸ್ತ್ರ ಇದೆ. ಹಾಗಾಗಿ ಅನೇಕರು ಇದನ್ನು ಟ್ರೋಲ್​ ಮಾಡಿದ್ದು, ಇದು ಟೀಂ ಇಂಡಿಯಾ ಆಟಗಾರರೋ ಅಥವಾ ಇಂಡಿಯನ್​ ಆಯಿಲ್​ ಕೆಲಸಗಾರರೋ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ಈ ಜರ್ಸಿಯನ್ನು ಮೆಚ್ಚಿಕೊಂಡಿದ್ದಾರೆ.











First published:June 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...