HOME » NEWS » Sports » CRICKET INDIA VS ENGLAND TEAM INDIA CAPTAIN VIRAT KOHLI HINTS AXAR PATEL MIGHT BE IN LINE FOR TEST DEBUT VB

ಪಂದ್ಯ ಆರಂಭಕ್ಕೂ ಮುನ್ನ ಆಂಗ್ಲರಿಗೆ ಭಯ: ಭಾರತ ಪರ ಪದಾರ್ಪಣೆ ಮಾಡಲು ಸಜ್ಜಾಗಿದ್ದಾನೆ ಈ ಆಟಗಾರ

ಇತ್ತೀಚೆಗಷ್ಟೆ ಮುಕ್ತಾಯಗೊಂಡು ಶ್ರೀಲಂಕಾ ಸರಣಿಯನ್ನ ಕ್ಲೀನ್​ಸ್ವೀಪ್​​ ಮಾಡಿದ ವಿಶ್ವಾಸದಲ್ಲಿ ಭಾರತಕ್ಕೆ ಬಂದಿರುವ ಆಂಗ್ಲ ಪಡೆಯ ವೀಕ್​ನೆಸ್​ ಲೆಫ್ಟ್​​ ಆರ್ಮ್​ ಸ್ಪಿನ್​. ಇದುವೇ ಅಕ್ಷರ್​​​ ಪಟೇಲ್​ ಪದಾರ್ಪಣೆಗೆ ದಾರಿ ಮಾಡಿಕೊಟ್ಟಿದೆ.

news18-kannada
Updated:February 5, 2021, 8:02 AM IST
ಪಂದ್ಯ ಆರಂಭಕ್ಕೂ ಮುನ್ನ ಆಂಗ್ಲರಿಗೆ ಭಯ: ಭಾರತ ಪರ ಪದಾರ್ಪಣೆ ಮಾಡಲು ಸಜ್ಜಾಗಿದ್ದಾನೆ ಈ ಆಟಗಾರ
Team India
  • Share this:
ಬೆಂಗಳೂರು (ಫೆ. 05): ಭಾರತದಲ್ಲಿ ಕೋವಿಡ್ ಬಿಸಿ ತಣ್ಣಗಾಗುತ್ತಿದ್ದಂತೆ ಸುಮಾರು ಒಂದು ವರ್ಷದ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಮತ್ತೆ ಚಾಲನೆ ಸಿಗುತ್ತಿದೆ. ಪ್ರವಾಸಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಇಂದು ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ಗೇರಲು ಉಭಯ ತಂಡಗಳು ಇಲ್ಲಿ ಹೋರಾಟ ನಡೆಸಲಿವೆ. ಇದರ ಜೊತೆಗೆ ಅನೇಕ ವಿಚಾರಗಳಿಗೆ ಈ ಟೆಸ್ಟ್​ ಸರಣಿ ಮಹತ್ವದ ಪಡೆದಿದೆ. ಈ ಪಂದ್ಯದ ಮೂಲಕ ಅಕ್ಷರ್ ಪಟೇಲ್ ಭಾರತ ಪರ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಹೌದು, ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಸುಳಿವು ನೀಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಅಂತಿಮ ನಾಲ್ಕನೇ ಟೆಸ್ಟ್​ನಲ್ಲಿ ಪದಾರ್ಪಣೆ ಮಾಡಿ ಮಿಂಚಿದ್ದ ವಾಷಿಂಗ್ಟನ್ ಸುಂದರ್ ಮೊದಲ ಟೆಸ್ಟ್​ನಲ್ಲಿ ಬೆಂಚ್ ಕಾಯಬೇಕಿದೆ. ಅಷ್ಟಕ್ಕು ಟೀಂ ಇಂಡಿಯಾ ಸುಂದರ್ ಅವರನ್ನು ಬಿಟ್ಟು ಅಕ್ಷರ್ ಪಟೇಲ್​ರ್ನ್ನು ಆಯ್ಕೆ ಮಾಡಲು ಬಲವಾದ ಕಾರಣ ಕೂಡ ಇದೆ.

ಒಂದೇ ದಿನದಲ್ಲಿ ಕ್ರಿಸ್ ಗೇಲ್ ವಿಶ್ವ ದಾಖಲೆಯನ್ನು ಸರಿಗಟ್ಟಿದ ಯುವ ಬ್ಯಾಟ್ಸ್​ಮನ್..!ಇತ್ತೀಚೆಗಷ್ಟೆ ಮುಕ್ತಾಯಗೊಂಡು ಶ್ರೀಲಂಕಾ ಸರಣಿಯನ್ನ ಕ್ಲೀನ್​ಸ್ವೀಪ್​​ ಮಾಡಿದ ವಿಶ್ವಾಸದಲ್ಲಿ ಭಾರತಕ್ಕೆ ಬಂದಿರುವ ಆಂಗ್ಲ ಪಡೆಯ ವೀಕ್​ನೆಸ್​ ಲೆಫ್ಟ್​​ ಆರ್ಮ್​ ಸ್ಪಿನ್​. ಇದುವೇ ಅಕ್ಷರ್​​​ ಪಟೇಲ್​ ಪದಾರ್ಪಣೆಗೆ ದಾರಿ ಮಾಡಿಕೊಟ್ಟಿದೆ.

ಲೆಫ್ಟ್​ ಆರ್ಮ್​ ಸ್ಪಿನ್​​ ಬೌಲರ್​ಗಳ ಮೋಡಿಗೆ ಆರಂಭಿಕರಾದ ಡಾಮಿನಿಕ್​​ ಸಿಬ್ಲೇ 5 ಬಾರಿ, ಜಾಕ್​​​​ ಕ್ರಾಲಿ 4 ಬಾರಿ ಬಲಿಯಾಗಿದ್ದಾರೆ. ರೋರಿ ಬರ್ನ್ಸ್​​​​, ಹಾಗೂ ಡೇನಿಯಲ್​​ ಲಾರೆನ್ಸ್​​​​ ತಲಾ 2 ಬಾರಿ ಔಟ್​​​​ ಆಗಿದ್ದಾರೆ. ಇನ್ನು ವಿಕೆಟ್​​​ ಕೀಪರ್​​​ ಬ್ಯಾಟ್ಸ್​ಮನ್​​ ಜೋಸ್​​​ ಬಟ್ಲರ್​​​​ 10 ಬಾರಿ, ಆಲ್​ರೌಂಡರ್​​​ ಬೆನ್​​​ ಸ್ಟೋಕ್ಸ್​ 13 ಬಾರಿ ಹಾಗೂ ನಾಯಕ ಜೋ ರೂಟ್​​​​ 19 ಬಾರಿ ಔಟ್​​​ ಆಗಿದ್ದಾರೆ.

Video: ಈತನ ಬೌಲಿಂಗ್ ಶೈಲಿ ನೋಡಿ ಬ್ಯಾಟ್ಸ್​ಮನ್ ತಬ್ಬಿಬ್ಬು..!

ಹೀಗಾಗಿಯೇ ಅಕ್ಷರ್​​ ಪಟೇಲ್​ ಅವರನ್ನು ಕಣಕ್ಕಿಳಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಅಕ್ಷರ್​​​ ಪಟೇಲ್​ ಫಸ್ಟ್​ ಕ್ಲಾಸ್​​ನಲ್ಲಿ ಆಡಿದ 39 ಪಂದ್ಯಗಳಲ್ಲಿ 1,665 ರನ್​​ ಕಲೆ ಹಾಕಿದ್ದಲ್ಲದೇ 134 ವಿಕೆಟ್​​​ ಕಬಳಿಸಿ ಮಿಂಚಿದ್ದಾರೆ.

ಒಟ್ಟಾರೆ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿ ಆತ್ಮವಿಶ್ವಾಸದಲ್ಲಿದ್ದರೆ, ಇತ್ತ  ಆಂಗ್ಲರು ಶ್ರೀಲಂಕಾ ವಿರುದ್ಧ ಕ್ಲೀನ್ ಸ್ವಿಪ್ ಮಾಡಿ ಪರಾಕ್ರಮ ಮೆರೆದು ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಮ್​ಬ್ಯಾಕ್ ಮಾಡಿದ್ದು ತಂಡದ ಆತ್ವವಿಶ್ವಾಸ ಮತ್ತಷ್ಟು ಹೆಚ್ಚಿದೆ.
Published by: Vinay Bhat
First published: February 5, 2021, 8:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories