India vs England Test| 3ನೇ ಟೆಸ್ಟ್​ಗೆ ಬೌಲರ್​ ಶಾರ್ದೂಲ್ ಠಾಕೂರ್​ ಫಿಟ್​; ದೃಢಪಡಿಸಿದ ಅಜಿಂಕ್ಯಾ ರಹಾನೆ

ತಿಂಗಳ ಆರಂಭದಲ್ಲಿ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೌಲರ್​ ಶಾರ್ದೂಲ್ ಠಾಕೂರ್​ 11ರ ಬಳಗದಲ್ಲಿ ಆಡಿದ್ದರು. ಆದರೆ, ಪಂದ್ಯದ ನಡುವೆ ಅವರು ಮಂಡಿ ನೋವಿನಿಂದ ಬಳಲುತ್ತಿದ್ದ ಕಾರಣ ಅವರಿಗೆ ಎರಡನೇ ಪಂದ್ಯಕ್ಕೆ ವಿಶ್ರಾಂತಿ ನೀಡಿ ಇಶಾಂತ್​ ಶರ್ಮಾ ಅವರನ್ನು ಕಣಕ್ಕೆ ಇಳಿಸಲಾಗಿತ್ತು.

ಶಾರ್ದೂಲ್ ಠಾಕೂರ್.

ಶಾರ್ದೂಲ್ ಠಾಕೂರ್.

  • Share this:
    ಭಾರತ-ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​ (India vs England 3rd Test )ಪಂದ್ಯ ಆಗಸ್ಟ್​ 25 ರಿಂದ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯಕ್ಕೆ ಬೌಲರ್ ಶಾರ್ದೂಲ್ ಠಾಕೂರ್​ (Shardul Thakur) ಗಾಯಾಳುವಾಗಿದ್ದು ಲಭ್ಯವಿಲ್ಲ ಎಂದು ಹೇಳಲಾಗಿತ್ತು. ಆದರೆ, ಇದೀಗ ಭಾರತ ಕ್ರಿಕೆಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ (Ajinkya Rahane) ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಬೌಲರ್ ಶಾರ್ದೂಲ್ ಠಾಕೂರ್ ಮೂರನೇ ಪಂದ್ಯಕ್ಕೆ ಫಿಟ್ ಅಂಡ್ ಫೈನ್ ಆಗಿದ್ದು ಮೂರನೇ ಪಂದ್ಯಕ್ಕೆ ಪರಿಗಣಿಸಲು ಲಭ್ಯರಿದ್ದಾರೆ ಎಂದು ದೃಢಪಡಿಸಿದ್ದಾರೆ. ಆದರೆ, ಶಾರ್ದೂಲ್ ಠಾಕೂರ್ ಅವರನ್ನು ಈ ಪಂದ್ಯದ 11ರ ಬಳಗದ ಆಯ್ಕೆಯಲ್ಲಿ ಪರಿಗಣಿಸುವ ಸಾಧ್ಯತೆ ತೀರಾ ವಿರಳ ಎಂದು ಹೇಳಲಾಗುತ್ತಿದೆ.

    ತಿಂಗಳ ಆರಂಭದಲ್ಲಿ ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೌಲರ್​ ಶಾರ್ದೂಲ್ ಠಾಕೂರ್​ 11ರ ಬಳಗದಲ್ಲಿ ಆಡಿದ್ದರು. ಆದರೆ, ಪಂದ್ಯದ ನಡುವೆ ಅವರು ಮಂಡಿ ನೋವಿನಿಂದ ಬಳಲುತ್ತಿದ್ದ ಕಾರಣ ಅವರಿಗೆ ಎರಡನೇ ಪಂದ್ಯಕ್ಕೆ ವಿಶ್ರಾಂತಿ ನೀಡಿ ಇಶಾಂತ್​ ಶರ್ಮಾ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಇಶಾಂತ್ ಶರ್ಮ ಅತ್ಯುತ್ತಮ ಪ್ರದರ್ಶನ ನೀಡದ ಕಾರಣ ಮೂರನೇ ಪಂದ್ಯಕ್ಕೂ ಅವರೇ ಮುಂದುವರೆಯಲಿದ್ದಾರೆ ಎನ್ನಲಾಗಿದೆ.

    ಮಾಧ್ಯಮ ಸಂವಾದದಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಗಳ ರೊಟೇ ಶನ್ ನೀತಿಯ ಬಗೆಗಿನ ಊಹಾಪೋಹಗಳನ್ನು ತಳ್ಳಿಹಾಕಿದ ಅಜಿಂಕ್ಯಾ ರಹಾನೆ, "ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್​ ಕೊನೆಗೊಂಡ ನಂತರ ಭಾರತದ ಬೌಲರ್​ ಮತ್ತು ಬ್ಯಾಟ್ಸ್​ಮನ್​ಗಳಿಗೆ ಉತ್ತಮ ವಿರಾಮ ಸಿಕ್ಕಿದೆ.

    ಆದ್ದರಿಂದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಭಾರತದ ಪರ ಕಣಕ್ಕಿಳಿದಿದ್ದ ಎಲ್ಲಾ ಆಟಗಾರರು ಸಜಹ ಹೊಸ ಉತ್ಸಾಹದೊಂದಿಗೆ ಮುಂದಿನ ಪಂದ್ಯಕ್ಕೆ ಲಭ್ಯರಿದ್ದಾರೆ ಮತ್ತು ಎಲ್ಲರೂ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲು ಬಯಸಿದ್ದಾರೆ. ಅಲ್ಲದೆ, ಕಳೆದ ಪಂದ್ಯದ ಗೆಲುವಿನ ತಂಡವನ್ನು ಹಾಗೆ ಉಳಿಸಿಕೊಳ್ಳಲು ತಂಡದ ಮ್ಯಾನೇಜ್​ಮೆಂಟ್ ಒಲವು ತೋರಿಸಿದೆ. ಹೀಗಾಗಿ ಆಟಗಾರರ ರೊಟೇಶನ್ ನೀತಿಯನ್ನು ಈ ಪಂದ್ಯದಲ್ಲಿ ಅನ್ವಯಿಸಲಾ ಗುವುದಿಲ್ಲ" ಎಂದು ರಹಾನೆ ತಿಳಿಸಿದ್ದಾರೆ.

    ಇದನ್ನೂ ಓದಿ: Miguel Oliveira: ತಂಗಿಯನ್ನೇ ಮದುವೆಯಾದ ರೇಸರ್ ಮಿಗುಯೆಲ್ ಒಲಿವೇರಾ; 11 ವರ್ಷಗಳ ಲವ್​​​ಸ್ಟೋರಿ ಬಯಲು!

    ಈ ನಡುವೆ ಉಪನಾಯಕ ಅಜಿಂಕ್ಯಾ ರಹಾನೆ ಮತ್ತು ಮೂರನೇ ಕ್ರಮಾಂಕದ ಬ್ಯಾಟ್ಸ್​ಮನ್ ಚೇತೇಶ್ವರ ಪೂಜಾರ ಅವರ ಕಳಪೆ ಫಾರ್ಮ್​ ಬಗ್ಗೆಯೂ ಮಾಧ್ಯಮ ಸಂವಾದದಲ್ಲಿ ಪ್ರಶ್ನೆ ಮಾಡಲಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ರಹಾನೆ, "ಜನರು ಪೂಜಾರ ಮತ್ತು ನನ್ನ ಬಗ್ಗೆ ಮಾತನಾಡುತ್ತಿರುವುದಕ್ಕೆ ನನಗೆ ಸಂತೋಷವಿದೆ. ಫಾರ್ಮ್ ಸುತ್ತಲಿನ ಎಲ್ಲಾ ಪ್ರಶ್ನೆಗಳಿಗೂ ನಾವು ಕಾಳಜಿ ವಹಿಸುವ ಅಗತ್ಯವಿಲ್ಲ. ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದು ನಮಗೆ ತಿಳಿದಿದೆ ಮತ್ತು ನಾವು ಅದನ್ನು ಮಾಡುತ್ತಿದ್ದೇವೆ. ನಮ್ಮಿಂದ ನಿಯಂತ್ರಿ ಸಲಾಗದ ವಿಷಯಗಳ ಬಗ್ಗೆ ನಾವು ಎಂದಿಗೂ ಯೋಚಿಸುವುದಿಲ್ಲ" ಎಂದು ತಿಳಿಸಿದ್ದಾರೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸು ವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸ ಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿ ನಿಂದ ಪಾಲಿಸಿ ಸೋಂಕಿ ನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳ ಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:MAshok Kumar
    First published: