ವಿಶ್ವಕಪ್​ನಲ್ಲಿ ಹೊಸ ದಾಖಲೆ ಬರೆದ ಟೀಂ ಇಂಡಿಯಾ ನಾಯಕ-ಉಪನಾಯಕ..!

India vs England: ಇದಕ್ಕೂ ಮುನ್ನ 2003ರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ 3 ಶತಕ ಸಿಡಿಸಿ ದಾಖಲೆ ಬರೆದಿದ್ದರು.

zahir | news18
Updated:July 1, 2019, 4:51 PM IST
ವಿಶ್ವಕಪ್​ನಲ್ಲಿ ಹೊಸ ದಾಖಲೆ ಬರೆದ ಟೀಂ ಇಂಡಿಯಾ ನಾಯಕ-ಉಪನಾಯಕ..!
ವಿರಾಟ್ ಕೊಹ್ಲಿ- ರೋಹಿತ್ ಶರ್ಮಾ
  • News18
  • Last Updated: July 1, 2019, 4:51 PM IST
  • Share this:
ಈ ಬಾರಿ ವರ್ಲ್ಡ್​ಕಪ್​ನಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ರೋಹಿತ್ ಶರ್ಮಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಕೊಹ್ಲಿ ಸತತ ಅರ್ಧಶತಕಗಳನ್ನು ಸಿಡಿಸಿ ಸಾಧನೆ ಮರೆದರೆ, ರೋಹಿತ್ ಶರ್ಮಾ ಶತಕಗಳ ಮೂಲಕ ಹೊಸ ದಾಖಲೆ ಸೃಷ್ಟಿಸುತ್ತಿದ್ದಾರೆ.

ನಾಯಕನ ದಾಖಲೆ:

ಭಾರತ ತಂಡದ ಕಪ್ತಾನ ಕೊಹ್ಲಿ ಈ ಬಾರಿಯ ವಿಶ್ವಕಪ್​ನಲ್ಲಿ ಸತತ 5 ಅರ್ಧಶತಕಗಳನ್ನು ಸಿಡಿಸಿ ಮಿಂಚಿದ್ದಾರೆ. ನಾಯಕನಾಗಿ ಇಂತಹದೊಂದು ಪ್ರದರ್ಶನ ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲು. 2007 ರಲ್ಲಿ ದಕ್ಷಿಣ ಆಫ್ರಿಕಾ ತಂಡ ನಾಯಕರಾಗಿದ್ದ ಗೇಮ್​ ಸ್ಮಿತ್ ಅದ್ಭುತ ಪ್ರದರ್ಶನ ನೀಡಿದ್ದರು. ಅವರ ಅಮೋಘ ಆಟದಿಂದ ಮೂಡಿ ಬಂದದ್ದು ಸತತ ನಾಲ್ಕು ಅರ್ಧಶತಕಗಳು. ಇದೀಗ ಸ್ಮಿತ್ ದಾಖಲೆಯನ್ನು ರನ್​ ಮಿಷಿನ್ ಕೊಹ್ಲಿ 5 ಅರ್ಧಶತಕಗಳ ಮೂಲಕ ಮುರಿದಿದ್ದಾರೆ.

2019ರ ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 18 ಸಿಡಿಸಿದ್ದ ಕೊಹ್ಲಿ, ಉಳಿದ ಐದು ಪಂದ್ಯಗಳಲ್ಲೂ ಮಿಂಚಿದ್ದರು. ಈ ವೇಳೆ ಪಾಕಿಸ್ತಾನದ ವಿರುದ್ಧ 77, ಅಫ್ಘಾನಿಸ್ತಾನದ ವಿರುದ್ಧ 67, ಆಸ್ಟ್ರೇಲಿಯಾ ವಿರುದ್ಧ 82, ವೆಸ್ಟ್​ ಇಂಡೀಸ್​ ವಿರುದ್ಧ 72 ಹಾಗೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 66 ರನ್​ಗಳು ಕೊಹ್ಲಿಯ ಬ್ಯಾಟ್​ನಿಂದ ಸಿಡಿಯಿತು. ಇನ್ನು ಈ ದಾಖಲೆಯನ್ನೇ ಬೆನ್ನೆತ್ತುವಂತೆ ಆಸ್ಟ್ರೇಲಿಯಾ ತಂಡ ನಾಯಕ ಆರೋನ್ ಫಿಂಚ್ ಸತತ ನಾಲ್ಕು ಅರ್ಧಶತಕಗಳೊಂದಿಗೆ ಟೀಂ ಇಂಡಿಯಾ ನಾಯಕನ ಹಿಂದಿದ್ದಾರೆ.

ಇದನ್ನೂ ಓದಿ: ಧೋನಿ ಮಾಡಿದ ಸಣ್ಣದೊಂದು ಎಡವಟ್ಟು ಟೀಂ ಇಂಡಿಯಾದ ಸೋಲಿಗೆ ಕಾರಣವಾಯ್ತು..!

ಹಿಟ್​ಮ್ಯಾನ್ ದಾಖಲೆ:
ಇನ್ನು ವಿಶ್ವಕಪ್​ನಲ್ಲಿ ಅದ್ಭುತ ಫಾರ್ಮ್​ನಲ್ಲಿರುವ ಹಿಟ್​ಮ್ಯಾನ್ ರೋಹಿತ್ ಶರ್ಮಾ ಬ್ಯಾಟ್​ನಿಂದ ಈಗಾಗಲೇ ಮೂರು ಭರ್ಜರಿ ಶತಕಗಳು ಮೂಡಿ ಬಂದಿವೆ. ರೋಹಿತ್, ಭಾನುವಾರ ಇಂಗ್ಲೆಂಡ್ ವಿರುದ್ಧ 102 ರನ್​ಗಳಿಸಿದರೆ, ದಕ್ಷಿಣ ಆಫ್ರಿಕಾ ವಿರುದ್ಧ 122 ರನ್​ಗಳನ್ನು ಬಾರಿಸಿದ್ದರು. ಹಾಗೆಯೇ ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ ಬಿರುಸಿನ 140 ರನ್​ಗಳನ್ನು ಚಚ್ಚಿದ್ದರು. ಈ ಮೂಲಕ ವಿಶ್ವಕಪ್​ ಟೂರ್ನಿಯಲ್ಲಿ 3 ಶತಕ ಸಿಡಿಸಿದ ಭಾರತದ 2ನೇ ಆಟಗಾರ ಎಂಬ ಕೀರ್ತಿಗೆ ಹಿಟ್​ಮ್ಯಾನ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 2003ರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ 3 ಶತಕ ಸಿಡಿಸಿ ದಾಖಲೆ ಬರೆದಿದ್ದರು.
First published: July 1, 2019, 4:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading