ಮುಂದಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಪಡೆ ಈ ಮಹತ್ವದ ಬದಲಾವಣೆ ಮಾಡದಿದ್ದರೆ ಕಾದಿದೆ ಸಂಕಷ್ಟ

ಚಹಾಲ್​ ಹಾಗೂ ಕುಲ್ದೀಪ್​ ಬೌಲಿಂಗ್​ ದುಬಾರಿಯಾಗುತ್ತಿರುವ ಸಂದರ್ಭದಲ್ಲೂ  ಜಾಧವ್​ ಅವರ ಕೈಗೆ ಬಾಲ್​ ನೀಡಲು ಕೊಹ್ಲಿ ಹಿಂದೇಟು ಹಾಕುತ್ತಿದ್ದಾರೆ. ಇದು ಜಾಧವ್​ ಬಗ್ಗೆ ಕೊಹ್ಲಿ ವಿಶ್ವಾಸ ಹೊಂದಿಲ್ಲ ಎಂಬುದನ್ನು ಸಾಬೀತು ಮಾಡುತ್ತಿದೆ.

Rajesh Duggumane | news18
Updated:July 1, 2019, 12:14 PM IST
ಮುಂದಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಪಡೆ ಈ ಮಹತ್ವದ ಬದಲಾವಣೆ ಮಾಡದಿದ್ದರೆ ಕಾದಿದೆ ಸಂಕಷ್ಟ
ಜಡೇಜಾ-ಜಾಧವ್​
  • News18
  • Last Updated: July 1, 2019, 12:14 PM IST
  • Share this:
ವಿಶ್ವಕಪ್​ನಿಂದ ಶಿಖರ್​ ಧವನ್ ಹೊರ ಬಿದ್ದಿದ್ದು, ನಾಲ್ಕನೇ ಕ್ರಮಾಂಕದಲ್ಲಿ ಯಾರನ್ನು ಇಳಿಸಬೇಕು ಎನ್ನುವ ಪ್ರಶ್ನೆ. ಹೀಗೆ ಭಾರತ ಕ್ರಿಕೆಟ್​ ತಂಡಕ್ಕೆ ಒಂದಾದಮೇಲೆ ಒಂದರಂತೆ ಸಂಕಷ್ಟ ಎದುರಾಗುತ್ತಿದೆ. ಹೀಗಿದ್ದರೂ ಸತತ ಐದು ಗೆಲುವನ್ನು ದಾಖಲಿಸಿದ್ದ ಭಾರತ, ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಮುಗ್ಗರಿಸಿದೆ. ಈ ಸೋಲಿಗೆ ನಾನಾ ಕಾರಣಗಳು ಇರಬಹುದು. ಆದರೆ, ಟ್ವಿಟ್ಟರ್​ನಲ್ಲಿ ಒಂದು ಆಟಗಾರನ ವಿರುದ್ಧ ತೀವ್ರ ಟೀಕೆಗಳು ಕೇಳಿ ಬಂದಿವೆ. ಅಷ್ಟೇ ಅಲ್ಲ ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಒಂದು ಮಹತ್ತರ ಬದಾಲವಣೆ ಮಾಡುವಂತೆ ಕೋರಲಾಗುತ್ತಿದೆ.

ಅಷ್ಟಕ್ಕೂ ಕೆಂಗಣ್ಣಿಗೆ ಗುರಿಯಾದ ಆಟಗಾರನಾರು? ಕೇದಾರ್​​ ಜಾಧವ್​. ಹೌದು, ಈ ಆಟಗಾರನ ವಿರುದ್ಧ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾಧವ್​ ಮೇಲೆ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಹೆಚ್ಚು ಭರವಸೆ ಇಟ್ಟಿದ್ದರು. ಆಲ್​ರೌಂಡರ್​ ಆಗಿ ಗುರುತಿಸಿಕೊಂಡಿದ್ದ ಅವರು, ಈ ಬಾರಿ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್​ನಲ್ಲೂ ಅವರು ಚಮತ್ಕಾರ ಮಾಡಲಿಲ್ಲ.

ಚಹಾಲ್​ ಹಾಗೂ ಕುಲ್ದೀಪ್​ ಬೌಲಿಂಗ್​ ದುಬಾರಿಯಾಗುತ್ತಿರುವ ಸಂದರ್ಭದಲ್ಲೂ  ಜಾಧವ್​ ಅವರ ಕೈಗೆ ಬಾಲ್​ ನೀಡಲು ಕೊಹ್ಲಿ ಹಿಂದೇಟು ಹಾಕುತ್ತಿದ್ದಾರೆ. ಇದು ಜಾಧವ್​ ಬಗ್ಗೆ ಕೊಹ್ಲಿ ವಿಶ್ವಾಸ ಹೊಂದಿಲ್ಲ ಎಂಬುದನ್ನು ಸಾಬೀತು ಮಾಡುತ್ತಿದೆ. ಕೇದಾರ್​ ಜಾಧವ್​ ಸ್ಥಾನವನ್ನು ಮುಂದಿನ ಪಂದ್ಯದಲ್ಲಿ ರವೀಂದ್ರ ಜಡೇಜಾ ತುಂಬುವ ಸಾಧ್ಯತೆ ಇದೆ.

ಇದನ್ನೂ ಓದಿ: ಸೋತ ಪಂದ್ಯದಲ್ಲೂ ದಾಖಲೆ ಬರೆದ ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡರಲ್ಲೂ ಜಡೇಜಾ ಉತ್ತಮ ಲೈನ್​ ಹೊಂದಿದ್ದಾರೆ. ಈ ಮೊದಲು ಫೀಲ್ಡಿಂಗ್​ನಲ್ಲೂ ಅವರು ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಡೇಜಾ ಅವರನ್ನು ಮುಂದಿನ ಪಂದ್ಯಕ್ಕೆ ಹಾಕಿಕೊಳ್ಳಬೇಕು ಎನ್ನುವ ಕೂಗು ಕೇಳಿ ಬಂದಿದೆ. ಈ ಬದಲಾವಣೆ ಮಾಡದಿದ್ದರೆ ಮುಂದಿನ ಪಂದ್ಯಗಳಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

First published:July 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ