World Cup 2019: ಶಂಕರ್, ಪಂತ್, ಕಾರ್ತಿಕ್ ಅಲ್ಲ: 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ ಈ ಸ್ಟಾರ್ ಆಟಗಾರ

India vs England: ವಿಶ್ವಕಪ್​ಗೂ ಮೊದಲು ಕಾಣಿಸಿಕೊಂಡಿದ್ದ ಸಮಸ್ಯೆಗೆ ಲೀಗ್ ಸ್ಟೇಜ್ ಮುಗಿಯುವ ಹಂತಕ್ಕೆ ತಲುಪಿದರೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ನಾಳೆ ಇಂಗ್ಲೆಂಡ್ ವಿರುದ್ಧ ಪ್ರಮುಖ ಪಂದ್ಯ ಆಗಿರುವುದರಿಂದ ತಂಡದಲ್ಲಿ ದೊಡ್ಡ ಬದಲಾವಣೆ ಮಾಡುವ ಅಂದಾಜಿದೆ.

Vinay Bhat | news18
Updated:June 29, 2019, 4:48 PM IST
World Cup 2019: ಶಂಕರ್, ಪಂತ್, ಕಾರ್ತಿಕ್ ಅಲ್ಲ: 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ ಈ ಸ್ಟಾರ್ ಆಟಗಾರ
ಟೀಂ ಇಂಡಿಯಾ ಆಟಗಾರರು
  • News18
  • Last Updated: June 29, 2019, 4:48 PM IST
  • Share this:
ICC cricket World Cup 2019: ವಿಶ್ವಕಪ್​​ಗೂ ಮೊದಲೇ ಟೀಂ ಇಂಡಿಯಾಕ್ಕೆ ಎದುರಾಗಿದ್ದು ಅದೊಂದೇ ಪ್ರಶ್ನೆ! ಎಲ್ಲಾ ವಿಭಾಗದಲ್ಲಿ ಬಲಿಷ್ಟವಾಗಿದ್ದ ಭಾರತಕ್ಕೆ 4ನೇ ಸ್ಥಾನ ತುಂಬುವವರು ಯಾರು ಎಂದುದೆ ದೊಡ್ಡ ತಲೆನೋವಾಗಿತ್ತು. ಇದಕ್ಕಾಗಿ ಮಾಡಿದ ಪ್ರಯೋಗಗಳು ಒಂದೆರಡಲ್ಲ.

ಉತ್ತಮ ಫಾರ್ಮ್​ನಲ್ಲಿದ್ದ ಅಂಬಟಿ ರಾಯುಡುರನ್ನ ಕಣಕ್ಕಿಳಿಸಿ ಪ್ರಯೋಗ ನಡೆಸಲಾಯಿತು. ಆದರೆ ಬರಬರುತ್ತಾ ರಾಯುಡು ಮತ್ತೆ ಕಳಪೆ ಆಟದತ್ತ ಮುಖ ಮಾಡಿದರು. ಹೀಗೆ ರಾಯಡುಗೆ ಫಿಕ್ಸ್ ಆಗಿದ್ದ ಪ್ಲೇಸ್​ನಲ್ಲಿ ಆಯ್ಕೆ ಸಮಿತಿ ಆಲ್​ರೌಂಡರ್ ವಿಜಯ್ ಶಂಕರ್​ಗೆ ಅವಕಾಶ​ ನೀಡಿತು. ಆದರೆ ವಿಶ್ವಕಪ್​​​​ ಆರಂಭದಲ್ಲಿ ನಂಬರ್ 4 ಸ್ಥಾನದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್​ರನ್ನ ಕಣಕ್ಕಿಳಿಸಲಾಗಿತ್ತು. ಶಿಖರ್ ಧವನ್ ಇಂಜ್ಯುರಿಯಾದ ಬಳಿಕ ಮತ್ತದೇ ಸಮಸ್ಯೆ ಭಾರತಕ್ಕೆ ಎದುರಾಯಿತು. ಹೀಗಾಗಿ ಟೀಂ ಮ್ಯಾನೇಜ್​ಮೆಂಟ್​ ಮೊದಲೇ ಹೇಳಿದ್ದಂತೆ ಆಲ್​ರೌಂಡರ್​ ವಿಜಯ್ ಶಂಕರ್​​​​ಗೆ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಒದಗಿಸಿತು.

ಆದರೆ ಶಂಕರ್ ಕೂಡ ಈ ಸ್ಥಾನವನ್ನು ತುಂಬಲು ವಿಫಲರಾಗಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊದಲ ವಿಶ್ವಕಪ್​ ಪಂದ್ಯವನ್ನಾಡಿದ್ದ ವಿಜಯ್​, ಮೊದಲ ಎಸೆತದಲ್ಲೇ ವಿಕೆಟ್ ಪಡೆದಿದರು. ಆದ್ರೆ ಬ್ಯಾಟಿಂಗ್​​​​​ನಲ್ಲಿ ಅಷ್ಟು ಮಿಂಚದ ವಿಜಯ್​ ಶಂಕರ್ 15 ಎಸೆತಗಳಲ್ಲಿ ಗಳಿಸಿದ್ದು 15 ರನ್ ಮಾತ್ರ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ಶಂಕರ್​​ ತಂಡಕ್ಕೆ ಹೆಚ್ಚು ಆಧಾರವಾಗಲಿಲ್ಲ. 41 ಎಸೆತಗಳನ್ನ ಎದುರಿಸಿ 29 ರನ್​ಗಳಿಸಿ ಔಟಾದರು.

ಅಬ್ಬಾ.. ವಿಶ್ವಕಪ್​ನಲ್ಲಿ ಒಂದು ಪಂದ್ಯ ಗೆದ್ದರೆ ಸಾಕು, ಸಿಗುತ್ತೆ ___ ಹಣ!

ಮ್ಯಾಂಚೆಸ್ಟರ್​ನಲ್ಲಿ ನಡೆದ ಕಳೆದ ಪಂದ್ಯದಲ್ಲೂ ಶಂಕರ್​​ರನ್ನ ನಂಬಿ, ನಂಬರ್ 4 ಸ್ಥಾನದಲ್ಲಿ ಕಳುಹಿಸಲಾಯಿತು. ಆದರೆ ವಿಜಯ್​ ಆಟ ಕೇವಲ 14 ರನ್​ಗೆ ಮುಕ್ತಾಯವಾಯಿತು. ಹೀಗೆ ನಂಬರ್ 4 ಸ್ಥಾನದಲ್ಲಿ ಆಲ್​ರೌಂಡರ್ ವಿಜಯ್​ ಶಂಕರ್​​ಗೆ ಅವಕಾಶ​ ಕೊಟ್ಟಷ್ಟೂ ಮುಗ್ಗರಿಸುತ್ತಿದ್ದಾರೆ.

India vs England, ICC World Cup 2019: MS Dhoni should bat at No. 4
ಎಂ ಎಸ್ ಧೋನಿ


ವಿಶ್ವಕಪ್​ಗೂ ಮೊದಲು ಕಾಣಿಸಿಕೊಂಡಿದ್ದ ಸಮಸ್ಯೆಗೆ ಲೀಗ್ ಸ್ಟೇಜ್ ಮುಗಿಯುವ ಹಂತಕ್ಕೆ ತಲುಪಿದರೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ನಾಳೆ ಇಂಗ್ಲೆಂಡ್ ವಿರುದ್ಧ ಪ್ರಮುಖ ಪಂದ್ಯ ಆಗಿರುವುದರಿಂದ ತಂಡದಲ್ಲಿ ದೊಡ್ಡ ಬದಲಾವಣೆ ಮಾಡುವ ಅಂದಾಜಿದೆ. ಜೊತೆಗೆ ನಾಲ್ಕನೇ ಕ್ರಮಾಂಕದಲ್ಲಿ ಈ ಸ್ಟಾರ್ ಆಟಗಾರ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.ಟೀಂ ಇಂಡಿಯಾದ ಆಧಾರ ಸ್ತಂಭ ಎಂದೇ ಹೇಳಲಾಗುವ ಎಂ ಎಸ್ ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದರೆ ಸೂಕ್ತ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇನ್ ಜೋನ್ಸ್​ ಕೂಡ ಕೈಜೋಡಿಸಿದ್ದು, ಧೋನಿಗೆ 4ನೇ ಕ್ರಮಾಂಕವೇ ಸೂಕ್ತ ಎಂದು ಹೇಳಿದ್ದಾರೆ.

Orange Jersey: ಕೇಸರಿ ಜೆರ್ಸಿಯಲ್ಲಿ ಮಿಂಚುತ್ತಿರುವ ಟೀಂ ಇಂಡಿಯಾ ಆಟಗಾರರು; ಇಲ್ಲಿವೆ ಚಿತ್ರ ಪಟಗಳು!

ಇನ್ನು ವಿಜಯ್ ಶಂಕರ್ ಬದಲು ತಂಡದಲ್ಲಿ ಅನುಭವದ ಆಧಾರದ ಮೇಲೆ ದಿನೇಶ್ ಕಾರ್ತಿಕ್​ಗೆ ಸ್ಥಾನ ನೀಡುವ ಅಂದಾಜಿದ್ದು, ಈ ಹಿಂದೆ ಧೋನಿ ಕಣಕ್ಕಿಳಿಯುತ್ತಿದ್ದ ಜಾಗದಲ್ಲಿ ಹಾರ್ದಿಕ್ ಜೊತೆಗೂಡಿ ಕಾರ್ತಿಕ್ ಫಿನಿಶರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

First published:June 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ