HOME » NEWS » Sports » CRICKET INDIA VS ENGLAND MS DHONI DID A MASTER PLAN TO KICK OUT PAKISTAN FROM WORLD CUP 2019

ಪಾಕಿಸ್ತಾನದವರನ್ನು ಮನೆಗೆ ಕಳುಹಿಸಲು ಧೋನಿ ಮಾಡಿದ್ರಾ ಮಾಸ್ಟರ್ ಪ್ಲ್ಯಾನ್?; ಟ್ವಿಟ್ಟರ್​ನಲ್ಲಿ ಸೃಷ್ಟಿಯಾಗಿದೆ ಟ್ರೆಂಡ್

INDvsENG: ಪಾಕಿಸ್ತಾನವನ್ನು ವಿಶ್ವಕಪ್​ನಿಂದ ಹೊರಗಿಡಲು ಧೋನಿ ಈ ಮಾಸ್ಟರ್​ ಪ್ಲ್ಯಾನ್​ ಮಾಡಿದ್ದಾರೆ ಎಂದು ಅನೇಕರು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ. ಕೊಹ್ಲಿ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾದರೂ ಧೋನಿಯ ಸಲಹೆ ಪಡೆಯುತ್ತಾರೆ. ನಿನ್ನೆಯ ಪಂದ್ಯದಲ್ಲೂ ಕೊಹ್ಲಿ ಇದೇ ರೀತಿ ಮಾಡಿದ್ದಾರಂತೆ.

Rajesh Duggumane | news18
Updated:July 1, 2019, 8:52 AM IST
ಪಾಕಿಸ್ತಾನದವರನ್ನು ಮನೆಗೆ ಕಳುಹಿಸಲು ಧೋನಿ ಮಾಡಿದ್ರಾ ಮಾಸ್ಟರ್ ಪ್ಲ್ಯಾನ್?; ಟ್ವಿಟ್ಟರ್​ನಲ್ಲಿ ಸೃಷ್ಟಿಯಾಗಿದೆ ಟ್ರೆಂಡ್
ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ
  • News18
  • Last Updated: July 1, 2019, 8:52 AM IST
  • Share this:
ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಭಾರತ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾವನ್ನು ಭಾರತ ಮಣಿಸಿತ್ತು. ಆದರೆ, ನಿನ್ನೆ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಸೋತಿದೆ. ಇದಕ್ಕೆ ಧೋನಿ ಮಾಡಿದ ಮಾಸ್ಟರ್​ ಪ್ಲ್ಯಾನ್​ ಕಾರಣ ಎಂದು ಅನೇಕರು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇಂಗ್ಲೆಂಡ್​ ವಿರುದ್ಧ ಭಾರತ ಜಯಗಳಿಸಿದ್ದರೆ ಪಾಕಿಸ್ತಾನ ಸುಲಭವಾಗಿ ಸೆಮಿಫೈನಲ್​ಗೆ ಏರಬಹುದಿತ್ತು. ಆದರೆ, ಈಗ ಪಾಕಿಸ್ತಾನದ ಹಾದಿ ಮತ್ತಷ್ಟು ಕಠಿಣವಾಗಿದೆ. ಇದೇ ಕಾರಣಕ್ಕೆ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಭಾರತ ಗೆಲ್ಲಲಿ ಎಂದು ಪಾಕಿಸ್ತಾನದವರು ಕೋರಿಕೊಂಡಿದ್ದರು. ಆದರೆ, ಪಾಕಿಸ್ತಾನದವರ ಕೋರಿಕೆ ಈಡೇರಲಿಲ್ಲ. ಭಾರತ 31ರನ್​ಗಳ ಸೋಲನ್ನು ಕಂಡಿದೆ.

ಪಾಕಿಸ್ತಾನವನ್ನು ವಿಶ್ವಕಪ್​ನಿಂದ ಹೊರಗಿಡಲು ಧೋನಿ ಈ ಮಾಸ್ಟರ್​ ಪ್ಲ್ಯಾನ್​ ಮಾಡಿದ್ದಾರೆ ಎಂದು ಅನೇಕರು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ. ಟೀಂ ಇಂಡಿಯಾ ಮೊದಲ 10 ಓವರ್​ನಲ್ಲಿ ಮಂದಗತಿಯ ಆಟ ಆಡಿತ್ತು. ಅಲ್ಲದೆ, ಧೋನಿ ಕೂಡ ನಿಧಾನವಾಗಿ ಬ್ಯಾಟ್​ ಬೀಸಿದ್ದರು. ಪಾಕ್​ ತಂಡವನ್ನು ಸೋಲಿಸಲು ಅವರು ಈ ರೀತಿ ಯೋಜನೆ ಹಾಕಿಕೊಂಡಿದ್ದರು ಎಂದಿದ್ದಾರೆ ಅನೇಕರು.

ಇದನ್ನೂ ಓದಿ: ಭಾರತದ ಸೋಲಿನಿಂದ ಪಾಕ್​ ಮನೆಗೆ ಹೋಗಿಲ್ಲ; ಚಮತ್ಕಾರ ನಡೆದರೆ ಈಗಲೂ ಇದೆ ಸೆಮಿ ಫೈನಲ್​ಗೇರುವ ಅವಕಾಶವಿರಾಟ್​ ಕೊಹ್ಲಿ ಭಾರತ ತಂಡದ ನಾಯಕ. ಆದರೆ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾದರೂ ಅವರು ಧೋನಿಯ ಸಲಹೆ ಪಡೆಯುತ್ತಾರೆ. ನಿನ್ನೆಯ ಪಂದ್ಯದಲ್ಲೂ ಕೊಹ್ಲಿ ಇದೇ ರೀತಿ ಮಾಡಿದ್ದಾರಂತೆ. ಈ ವೇಳೆ ಕೊಹ್ಲಿಗೆ ಧೋನಿ ಕೆಲ ಸೂಚನೆಗಳನ್ನು ನೀಡಿದ್ದರು ಎಂಬುದು ಟ್ವಿಟ್ಟರಿಗರ ಅಭಿಪ್ರಾಯ.‘ಪಾಕಿಸ್ತಾನದವರು ಧೋನಿ ಗ್ಲೌಸ್​ನಿಂದ ‘ಬಲಿದಾನ್​’ ತೆಗೆದ್ರು, ಧೋನಿ ಪಾಕಿಸ್ತಾನ ತಂಡವನ್ನೇ ವಿಶ್ವಕಪ್​ನಿಂದ ತೆಗೆದ್ರು,’ ಎಂದು ಕೆಲವರು ಬರೆದುಕೊಂಡಿದ್ದಾರೆ.First published: July 1, 2019, 8:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories