India vs England :ಪ್ರತಿ ಪಂದ್ಯದಲ್ಲಿ ಮೊಹಮ್ಮದ್‌ ಸಿರಾಜ್‌ ಮ್ಯಾಜಿಕ್..!

ಮೊಹಮದ್ ಸಿರಾಜ್

ಮೊಹಮದ್ ಸಿರಾಜ್

Mohammed Siraj : ಇಂಗ್ಲೆಂಡ್‌ ವಿರುದ್ಧದ ಎರಡು ಟೆಸ್ಟ್‌ ಪಂದ್ಯಗಳನ್ನು ನೋಡಿದರೆ ಸಿರಾಜ್‌ ತಂಡದಲ್ಲಿ ಏಕೆ ಇರಬೇಕೆಂಬುದು ಅರ್ಥವಾಗುತ್ತದೆ. ಮೊದಲ ಟೆಸ್ಟ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದ ಸಿರಾಜ್‌, ಎರಡನೇ ಟೆಸ್ಟ್‌ ಪಂದ್ಯದಲ್ಲಿ 8 ವಿಕೆಟ್‌ ಪಡೆದಿದ್ದಾರೆ.

  • Share this:

ಇತ್ತೀಚೆಗೆ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್‌ ಬೌಲಿಂಗ್‌ ಅನ್ನು ಅನೇಕರು ಮೆಚ್ಚಿಕೊಳ್ಳುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲೂ ಅವರ ಬೌಲಿಂಗ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೊಹಮ್ಮದ್ ಸಿರಾಜ್ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಕೇವಲ 7 ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಹಲವರಿಗೆ ಕಷ್ಟವಾಗುತ್ತಿದೆ. ಪ್ರತಿ ಪಂದ್ಯದಲ್ಲೂ ಸಿರಾಜ್‌ ಪ್ರತಿಭಾವಂತ ಬೌಲರ್‌ನಿಂದ ಭಾರತದ ಪ್ರಮುಖ ಆಟಗಾರನಾಗುವತ್ತ ಸಾಗುತ್ತಿದ್ದಾರೆ. ಮತ್ತು ವೇಗದ ಬೌಲಿಂಗ್ ವಿಭಾಗದಲ್ಲಿ ಭಾರತದ ಕ್ರಿಕೆಟ್‌ ಇತಿಹಾಸವನ್ನು ಗಮನಿಸಿದರೆ, ಇದು ಸಾಧಾರಣ ಸಾಧನೆಯಲ್ಲ. ಇನ್ನು, ಉತ್ತಮ ಬೌಲಿಂಗ್‌ ಮೂಲಕ ತಮ್ಮ ವಿರುದ್ಧ ಟೀಕೆ ಮಾಡುವ ಜನರ ಬಾಯಿ ಮುಚ್ಚಿಸುತ್ತಿದ್ದಾರೆ ಮೊಹಮ್ಮದ್‌ ಸಿರಾಜ್. ನ್ಯೂಜಿಲೆಂಡ್‌ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಸಿರಾಜ್‌ರನ್ನು ಭಾರತ ಇಲೆವೆನ್‌ಗೆ ಸೇರಿಸಿಕೊಳ್ಳುವಂತೆ ಹಲವರು ಒತ್ತಾಯ, ಮನವಿ ಮಾಡಿಕೊಂಡಿದ್ದರು. ಭಾರತ, ಹೆಚ್ಚು ಅನುಭವಿ ಬೌಲಿಂಗ್ ಘಟಕ ಹೊಂದಿದ್ದರೂ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ನ ಫೈನಲ್‌ ಪಂದ್ಯದಲ್ಲಿ ಸೋಲನುಭವಿಸಿತು. ಇದರ ನಂತರ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸಿರಾಜ್‌ರನ್ನು ತಂಡದಲ್ಲಿ ಆಡಿಸುವ ನಿರ್ಧಾರವನ್ನು ಟೀಂ ಇಂಡಿಯಾ ಮಾಡಿರಬಹುದು ಎಂದು ಹೇಳಲಾಗುತ್ತಿದೆ.


ಇಂಗ್ಲೆಂಡ್‌ ವಿರುದ್ಧದ ಎರಡು ಟೆಸ್ಟ್‌ ಪಂದ್ಯಗಳನ್ನು ನೋಡಿದರೆ ಸಿರಾಜ್‌ ತಂಡದಲ್ಲಿ ಏಕೆ ಇರಬೇಕೆಂಬುದು ಅರ್ಥವಾಗುತ್ತದೆ. ಮೊದಲ ಟೆಸ್ಟ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದ ಸಿರಾಜ್‌, ಎರಡನೇ ಟೆಸ್ಟ್‌ ಪಂದ್ಯದಲ್ಲಿ 8 ವಿಕೆಟ್‌ಗಳನ್ನು ಕಿತ್ತರು. ಲಾರ್ಡ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಅದ್ಭುತ ಗೆಲುವು ಸಾಧಿಸಿದೆ. ಪ್ರತಿ ಬಾರಿ ಬೌಲಿಂಗ್‌ ಮಾಡುವಾಗಲೂ ಒಂದು ಉದ್ದೇಶ ಮತ್ತು 100% ಪ್ರಯತ್ನ ಸಿರಾಜ್‌ರಲ್ಲಿ ಕಾಣಿಸುತ್ತದೆ. ಮತ್ತು  ಅವರ ಉತ್ಸಾಹವು ತಂಡದ ನಾಯಕ ಕೊಹ್ಲಿಗೆ ಮಾತ್ರ ಹೊಂದಿಕೆಯಾಗುತ್ತದೆ. ಈ ಉತ್ಸಾಹವು ಕೆಲವು ವ್ಯರ್ಥವಾದ ವಿಮರ್ಶೆಗಳಿಗೆ ಕಾರಣವಾಗಿದೆ. ತುಟಿಯ ಮೇಲೆ ಬೆರಳಿಡುವ ಸಂಭ್ರಮವು ಅವರ ಟ್ರೇಡ್‌ಮಾರ್ಕ್‌ ಆಗುತ್ತಿದ್ದು, ಅದರ ಹಿಂದೆ ಒಂದು ಕತೆಯೂ ಇದೆ.


"ಈ ಕತೆ ಅಥವಾ ಆಚರಣೆ ದ್ವೇಷಿಸುವವರಿಗಾಗಿ ಅಥವಾ ವಿಮರ್ಶಕರಿಗಾಗಿ. ಏಕೆಂದರೆ ಅವರು ನನ್ನ ಬಗ್ಗೆ ಸಾಧನೆ  ಮಾಡಲು ಸಾಧ್ಯವಿಲ್ಲ ಎಂದು ಬಹಳಷ್ಟು ವಿಷಯಗಳನ್ನು ಹೇಳುತ್ತಿದ್ದರು. ಹಾಗಾಗಿ, ನಾನು ನನ್ನ ಚೆಂಡನ್ನು ಮಾತನಾಡಲು ಮಾತ್ರ ಅವಕಾಶ ನೀಡುತ್ತೇನೆ ಮತ್ತು ಆದ್ದರಿಂದ ಇದು ನನ್ನ ಹೊಸ ಶೈಲಿಯ ಆಚರಣೆಯಾಗಿದೆ" ಎಂದು ಲಾರ್ಡ್ಸ್‌ನಲ್ಲಿ ಮೂರನೇ ದಿನದ ಆಟದ ನಂತರ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಸಿರಾಜ್ ಹೇಳಿದರು.


ಸಿರಾಜ್‌ಗೆ ದ್ವೇಷಿಗಳು ಮತ್ತು ವಿಮರ್ಶಕರು ಇದ್ದ ದಿನಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟ. ಬಹುಶಃ ಅವರ ಐಪಿಎಲ್ ಪ್ರದರ್ಶನಗಳ ಮೇಲೆ ನಿರ್ಣಯಿಸಿದರು. 2017ರಿಂದ 2019 ರವರೆಗಿನ ಐಪಿಎಲ್‌ನಲ್ಲಿ ಸಿರಾಜ್‌ ಅತ್ಯುತ್ತಮ ಪ್ರದರ್ಶನ ನೀಡಿರಲಿಲ್ಲ. ಏಕೆಂದರೆ ಅವರ ಬೌಲಿಂಗ್ ಎಕಾನಮಿ ದರ ಸುಮಾರು 9 ಅಥವಾ ಅದಕ್ಕಿಂತ ಹೆಚ್ಚು. ಚಿನ್ನಸ್ವಾಮಿ ಕ್ರೀಡಾಂಗಣದಂತಹ ಸಣ್ಣ ಸ್ಟೇಡಿಯಂಗಳು ಸಹ ಸಹಾಯ ಮಾಡಲಿಲ್ಲ.


ಇದನ್ನೂ ಓದಿ:  ಟಿ20 ವಿಶ್ವಕಪ್ ವೇಳಾಪಟ್ಟಿ; ಭಾರತ-ಪಾಕ್ ಪಂದ್ಯ ಅ. 24ಕ್ಕೆ


ಆದರೆ ಆ ದ್ವೇಷಿಗಳು ಕೂಡ ಕಳೆದ ಎರಡು ವರ್ಷಗಳಲ್ಲಿ ಮೌನವಾಗಿದ್ದಾರೆ. ಏಕೆಂದರೆ ಸಿರಾಜ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲೇ ಇದ್ದು, 2020ರಲ್ಲಿ ಬೌಲಿಂಗ್‌ ಅನ್ನು ಸುಧಾರಿಸಿಕೊಂಡರು. ಹಾಗೂ 2021ರಲ್ಲಿ ಪ್ರಮುಖ ವೇಗಿ ಎನಿಸಿಕೊಂಡರು. ಈ ವರ್ಷ ಅಪೂರ್ಣವಾದ ಐಪಿಎಲ್‌ನಲ್ಲಿ, ಅವರು 7 ಪಂದ್ಯಗಳಲ್ಲಿ 6 ವಿಕೆಟ್‌ ಪಡೆದುಕೊಂಡಿದ್ದು, ಕೇವಲ 7.34 ಎಕಾನಮಿ ರೇಟ್‌ ಹೊಂದಿದ್ದಾರೆ.


ಐಪಿಎಲ್‌ ಮಾತ್ರವಲ್ಲ ಇತರೆ ಕ್ರಿಕೆಟ್‌ ಮಾದರಿಗಳಲ್ಲೂ ಸಿರಾಜ್‌ ಸಾಮರ್ಥ್ಯದ ಬಗ್ಗೆ ಅನುಮಾನಗಳು ಇರಬಾರದು. ಅವರ ಪ್ರಥಮ ದರ್ಜೆ ದಾಖಲೆಯನ್ನು ಒಮ್ಮೆ ನೋಡಿದರೆ ಸಾಕು. 83 ಪಂದ್ಯಗಳಿಂದ 181 ವಿಕೆಟ್ ಪಡೆದುಕೊಂಡಿದ್ದು,, 23 ಸರಾಸರಿ ಹೊಂದಿದ್ದಾರೆ. ಭಾರತ ಎ ತಂಡದ ಪರವಾಗಿ ಆಡುತ್ತಿದ್ದ ಸಿರಾಜ್‌, ಹೈದರಾಬಾದ್‌ ತಂಡದ ಉತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರು. ಈ ಹಿನ್ನೆಲೆ ಇವರನ್ನು ಆಸ್ಟ್ರೇಲಿಯ ಪ್ರವಾಸಕ್ಕೆ ಆಯ್ಕೆ ಮಾಡಿದರೂ ಆಶ್ಚರ್ಯವಿಲ್ಲ. ಬೌಲಿಂಗ್ ತರಬೇತುದಾರ ಭರತ್ ಅರುಣ್‌ಗೆ ಸಿರಾಜ್‌ ಸಾಮರ್ಥ್ಯ ತಿಳಿಸಿದ್ದು, ಅವರು ಹೈದರಾಬಾದ್‌ ತಂಡದ ತರಬೇತುದಾರರೂ ಆಗಿದ್ದರು.

ಎರಡು ಐಪಿಎಲ್‌ಗಳ ನಡುವೆ, ಸಿರಾಜ್ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್‌ನಲ್ಲಿ ಐತಿಹಾಸಿಕ ಗೆಲುವಿನೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಥಾನ ಭದ್ರಪಡಿಸಿಕೊಂಡರು. ಮೂರು ಟೆಸ್ಟ್‌ಗಳಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಸೇರಿದಂತೆ 13 ವಿಕೆಟ್ ಪಡೆದರು. ಮೆಲ್ಬೋರ್ನ್ ಮತ್ತು ಬ್ರಿಸ್ಬೇನ್ ಗೆಲುವುಗಳಲ್ಲಿ ಸಿರಾಜ್ ದೊಡ್ಡ ಪಾತ್ರ ವಹಿಸಿದ್ದು, ಭಾರತವು ಈ ಫಲಿತಾಂಶಗಳನ್ನು ಎಂದಿಗೂ ಮರೆಯುವುದಿಲ್ಲ. ತನ್ನ ತಂದೆಯನ್ನು ತಾಯ್ನಾಡಿನಲ್ಲಿ ಕಳೆದುಕೊಂಡರೂ ಆಸ್ಟ್ರೇಲಿಯದಲ್ಲಿ ಉಳಿದುಕೊಂಡಿದ್ದ ಸಿರಾಜ್‌ ಉತ್ತಮ ಸಾಧನೆ ಮಾಡಿದರು. ಸಿರಾಜ್ ತಂದೆ, ಹೈದರಾಬಾದಿನಲ್ಲಿ ಆಟೋರಿಕ್ಷಾ ಚಾಲಕರಾಗಿದ್ದು, ಅವರ ವೃತ್ತಿಜೀವನದಲ್ಲಿ ದೊಡ್ಡ ಪಾತ್ರ ವಹಿಸಿದ್ದರು.




ಆಸ್ಟ್ರೇಲಿಯಾ ಪ್ರವಾಸವು ಕೇವಲ ಆರಂಭವಾಗಿದೆ, ಆದರೆ ಇಂಗ್ಲೆಂಡ್ ಪ್ರವಾಸವು ಮುಂದಿನ ಹೆಜ್ಜೆಯಾಗಿದೆ. ಇಷ್ಟು ತ್ವರಿತ ಸಮಯದಲ್ಲಿ, ತನಗೂ ತಂತ್ರದ ಸಾಮರ್ಥ್ಯವಿದೆ ಎಂದು ಸಿರಾಜ್ ತೋರಿಸಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆದ ಮೊದಲ ಇನ್ನಿಂಗ್ಸ್‌ನಲ್ಲಿ, ಸಿರಾಜ್, ಸ್ಟಂಪ್‌ಗಳ ಸುತ್ತಲೂ ಬೌನ್ಸರ್ ಎಸೆದು ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋ ನಡುವಿನ 121 ರನ್‌ಗಳ ಜೊತೆಯಾಟವನ್ನು ಮುರಿದರು. ಬೈರ್‌ಸ್ಟೋ ವಿಕೆಟ್‌ ಅನ್ನು ತೆಗೆದಿದ್ದರು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ, ಮೊಯೀನ್ ಅಲಿ ಮತ್ತು ಜೋಸ್ ಬಟ್ಲರ್ ನಡುವಿನ ಉತ್ತಮ ಜೊತೆಯಾಟವನ್ನು ಮುರಿದರು ಸಿರಾಜ್. ಭಾರತದ ಕ್ರಿಕೆಟ್ ಪಯಣದಲ್ಲಿ ಈ ಲಾರ್ಡ್ಸ್‌ ಟೆಸ್ಟ್‌ ಪಂದ್ಯ ಐತಿಹಾಸಿಕ ಕ್ಷಣವಾಗಿ ಮಾರ್ಪಟ್ಟಿದೆ.


Published by:Sandhya M
First published: