• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • IND vs AUS: ಕುಲ್ದೀಪ್ ಕುತ್ತಿಗೆ ಹಿಡಿದು ಹಲ್ಲೆಗೆ ಮುಂದಾದ ಮೊಹಮ್ಮದ್ ಸಿರಾಜ್?: ವಿಡಿಯೋ ವೈರಲ್

IND vs AUS: ಕುಲ್ದೀಪ್ ಕುತ್ತಿಗೆ ಹಿಡಿದು ಹಲ್ಲೆಗೆ ಮುಂದಾದ ಮೊಹಮ್ಮದ್ ಸಿರಾಜ್?: ವಿಡಿಯೋ ವೈರಲ್

India vs England

India vs England

ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ನ ಎರಡನೇ ದಿನದಾಟದಲ್ಲಿ ನಡೆದ ಈ ವಿಡಿಯೋ ಇಂಟರ್​ನೆಟ್​ನಲ್ಲಿ ಸಂಚಲನ ಸೃಷ್ಟಿಸಿದೆ.

 • Share this:

  ಚೆನ್ನೈನ ಎಂ. ಎ ಚಿದಂಬರಂ ಕ್ರೀಡಾಂಗಣ ಸಾಗುತ್ತಿರುವ ಭಾರತ – ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ ಪಂದ್ಯ ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. 4ನೇ ದಿನದಾಟ ಆರಂಭದಲ್ಲೇ ಭಾರತ ಉಳಿದ ವಿಕೆಟ್​ಗಳನ್ನ ಕಳೆದುಕೊಂಡು 337 ರನ್​ಗೆ ಸರ್ವಪತನ ಕಂಡಿದೆ. 241 ರನ್​ಗಳ ಹಿನ್ನಡೆಯಲ್ಲಿದೆ. ಆರ್. ಅಶ್ವಿನ್ ಹಾಗೂ ವಾಷಿಂಗ್ಟನ್ ಸುಂದರ್ ಟೀಂ ಇಂಡಿಯಾವನ್ನು ಫಾಲೋ ಆನ್ ಭೀತಿಯಿಂದ ತಪ್ಪಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಸುಂದರ್ 85 ರನ್ ಗಳಿಸಿ ಅಜೇಯರಾಗಿ ಉಳಿದರಷ್ಟೆ. ಆದರೆ, ಇಂಗ್ಲೆಂಡ್ ಫಾಲೋ ಆನ್ ಹೇರಲಿಲ್ಲ.


  ಈ ನಡುವೆ ಭಾರತದ ಡ್ರೆಸ್ಸಿಂಗ್​ನಲ್ಲಿ ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ಅವರ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಷ್ಟೊಕ್ಕು ಈ ವಿಡಿಯೋದಲ್ಲಿ ಏನು ಇದೆ ಅಂತೀರಾ…


  Ind vs Eng 1st Test, Day 4 Live Score: ಸುಂದರ್ ಅಜೇಯ 85: ಭಾರತ 337 ರನ್​ಗೆ ಆಲೌಟ್


  ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ನ ಎರಡನೇ ದಿನದಾಟದಲ್ಲಿ ನಡೆದ ಈ ವಿಡಿಯೋ ಇಂಟರ್​ನೆಟ್​ನಲ್ಲಿ ಸಂಚಲನ ಸೃಷ್ಟಿಸಿದೆ. ಕ್ಯಾಮೆರಾ ಕಣ್ಣು ಭಾರತದ ಡ್ರೆಸ್ಸಿಂಗ್ ರೂಮ್ ಕಡೆ ತಿರುಗಿದಾಗ ಮೊಹಮ್ಮದ್ ಸಿರಾಜ್ ಅವರು ಕುಲ್ದೀಪ್ ಯಾದವ್ ಅವರ ಕುತ್ತಿಗೆ ಹಿಡಿದು ಹೊಡೆಯಲು ಮುಂದಾಗಿರುವುದು ರೆಕಾರ್ಡ್ ಆಗಿದೆ. ಆದರೆ, ನಂತರ ಏನಾಯಿತು ಎಂಬುದು ಚಿತ್ರೀಕರಣವಾಗಲಿಲ್ಲ.  ಸದ್ಯ ಈ ವಿಡಿಯೋ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ನಿಜವಾಗಿ ನಡೆದಿರುವುದೋ ಅಥವಾ ತಮಾಷೆಗೆಂದು ಸಿರಾಜ್ ಹೀಗೆ ಮಾಡಿರುವುದೋ ಎಂಬ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಚರ್ಚೆಗಳೆದ್ದಿವೆ. ಈ ಬಗ್ಗೆ ಬಿಸಿಸಿಐ ಆದಷ್ಟು ಬೇಗ ಸ್ಪಷ್ಟನೆ ನೀಡಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

  ಸಿರಾಜ್ ಹಾಗೂ ಕುಲ್ದೀಪ್ ಇಬ್ಬರೂ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ನ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಇವರ ಬದಲು ಇಶಾಂತ್ ಶರ್ಮಾ ಮತ್ತು ಶಹ್ಬಾಜ್ ನದೀಂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.


  Yash-Chahal: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಜೊತೆ ಫೋಟೋ ತೆಗೆಸಿಕೊಂಡ ಯಜುವೇಂದ್ರ ಚಹಾಲ್


  ಸಿರಾಜ್ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ತನ್ನ ಚೊಚ್ಚಲ ಪಂದ್ಯದಲ್ಲೇ ಪ್ರಮುಖ ವಿಕೆಟ್ ಕಿತ್ತಿದ್ದರು. ಇತ್ತ ಕುಲ್ದೀಪ್ ಕಳೆದ ಜನವರಿ 2019 ರಿಂದ ಯಾವುದೇ ಟೆಸ್ಟ್​ ಪಂದ್ಯವನ್ನು ಆಡಿಲ್ಲ. ತಂಡದಲ್ಲಿ ಸ್ಥಾನ ಸಿಕ್ಕರೂ ಆಡುವ ಬಳಗದಲ್ಲಿ ಇವರು ಕಾಣಿಸಿಕೊಳ್ಳಲಿಲ್ಲ.


  ಸದ್ಯ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಆಲೌಟ್ ಭೀತಿಯಲ್ಲಿದೆ. ಮೊದಲು ಬ್ಯಾಟ್ ಮಾಡಿರುವ ಇಂಗ್ಲೆಂಡ್ ತಂಡ ನಾಯಕ ಜೋ ರೂಟ್(218) ಅವರ ಅಮೋಘ ದ್ವಿಶತಕ, ಬೆನ್ ಸ್ಟೋಕ್ಸ್ ಹಾಗೂ ಡೋಮಿನಿಕ್ ಸಿಬ್ಲೀ ಅವರ ಅರ್ಧಶತಕದ ನೆರವಿನಿಂದ 578 ರನ್ ಕಲೆಹಾಕಿತು.


  ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಶುರುಮಾಡಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ರಿಷಭ್ ಪಂತ್ 91 ಹಾಗೂ ಚೇತೇಶ್ವರ್ ಪೂಜಾರ 73 ರನ್ ಗಳಿಸಿ ಭಾರತಕ್ಕೆ ಚೇತರಿಕೆ ನೀಡಿದರು. ಸದ್ಯ ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡಿದ್ದು ವಾಷಿಂಗ್ಟನ್ ಸುಂದರ್ ಅರ್ಧಶತಕ ಸಿಡಿಸಿ ಆಸರೆಯಾಗಿದ್ದಾರೆ.

  Published by:Vinay Bhat
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು