ಚೆನ್ನೈ (ಫೆ. 09): ಎಂ. ಎ ಚಿದಂಬರಂ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲಿನ ಸುಳಿಗೆ ಸಿಲುಕಿದೆ. ಭಾರತದ ಗೆಲುವಿಗೆ 381 ರನ್ಗಳ ಅವಶ್ಯಕತೆಯಿತ್ತು. ಆದರೆ, ಅಂತಿಮ ದಿನದಾಟದ ಆರಂಭದಲ್ಲೇ ಟೀಂ ಇಂಡಿಯಾ ದೊಡ್ಡ ವಿಕೆಟ್ ಕಳೆದುಕೊಂಡಿತು. ಭಾರತದ ಒಟ್ಟು 7 ವಿಕೆಟ್ ಪತನಗೊಂಡಿದ್ದು ನಾಯಕ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಈ ಪಂದ್ಯ ಡ್ರಾ ಆದಲ್ಲಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರಲು ಮುಂದಿನ 3 ಟೆಸ್ಟ್ ಪೈಕಿ ಎರಡರಲ್ಲಿ ಗೆಲುವು ಸಾಧಿಸಲೇ ಬೇಕಾಗಿದೆ. ಹೀಗಾಗಿ ಅಂತಿಮ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದೆ.
ನಿನ್ನೆ ಎರಡನೇ ಇನ್ನಿಂಗ್ಸ್ನಲ್ಲಿ ಆರ್. ಅಶ್ವಿನ್ (61 ರನ್ಗೆ 6 ವಿಕೆಟ್) ಸ್ಪಿನ್ ಮೋಡಿಗೆ ತತ್ತರಿಸಿದ ಆಂಗ್ಲರು 178 ರನ್ಗಳಿಗೆ ಸರ್ವಪತನ ಕಂಡಿತು. ಹೀಗಾಗಿ ಪ್ರಥಮ ಇನಿಂಗ್ಸ್ನಲ್ಲಿ 241 ರನ್ ಮುನ್ನಡೆ ಪಡೆದಿದ್ದ ಇಂಗ್ಲೆಂಡ್ ತಂಡ, ಭಾರತಕ್ಕೆ ಗೆಲ್ಲಲು 420 ರನ್ಗಳ ಟಾರ್ಗೆಟ್ ನೀಡಿತು.
IND vs ENG: ಮ್ಯಾಜಿಕ್ ಮಾಡುವುದೇ ಭಾರತ?: ಪಂದ್ಯ ಗೆಲ್ಲಿಸಿ ಕೊಡುವ ಇಬ್ಬರು ಆಟಗಾರರು ಇವರೇ ನೋಡಿ
ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ(12) ವಿಕೆಟ್ ಕಳೆದುಕೊಂಡಿತು. 31ರನ್ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾ ನಾಲ್ಕನೇ ದಿನದಾಟವನ್ನು ಅಂತ್ಯಗೊಳಿಸಿತ್ತು. ಚೇತೇಶ್ವರ್ ಪೂಜಾರ(12) ಹಾಗೂ ಶುಭ್ಮನ್ ಗಿಲ್(15) ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
ಅದರಂತೆ ದೊಡ್ಡ ಮೊತ್ತ ಚೇಸ್ ಮಾಡಲು ಭಾರತ ಅಂತಿಮ ದಿನದಾಟ ಶುರು ಮಾಡಿತು. ಆದರೆ, ಆರಂಭದಲ್ಲೇ ಚೇತೇಶ್ವರ್ ಪೂಜಾರ 15 ರನ್ ಗಳಿಸಿ ಔಟ್ ಆಗಿದ್ದು ಹಿನ್ನಡೆ ಉಂಟುಮಾಡಿತು. ಶುಭ್ಮನ್ ಗಿಲ್ ಮತ್ತೆ ಅರ್ಧಶತಕಕ್ಕೆ ಸೀಮಿತರಾದರು. ಜೇಮ್ಸ್ ಆ್ಯಂಡರ್ಸನ್ ಮಾರಕ ಸ್ವಿಂಗ್ ದಾಳಿಗೆ ತತ್ತರಿಸಿದ ಭಾರತ ಒಂದರ ಹಿಂದೆ ಒಂದು ವಿಕೆಟ್ ಕಳೆದುಕೊಂಡಿತು.
ಗಿಲ್ ಬೆನ್ನಲ್ಲೇ ಉಪ ನಾಯಕ ಅಜಿಂಕ್ಯಾ ರಹಾನೆ ಕ್ಲೀನ್ ಬೌಲ್ಡ್ ಆದರೆ, ಮೊದಲ ಇನ್ನಿಂಗ್ಸ್ನಲ್ಲಿ ಮಿಂಚಿದ್ದ ರಿಷಭ್ ಪಂತ್ ಆಟ 11 ರನ್ಗೆ ಅಂತ್ಯವಾಯಿತು. ವಾಷಿಂಗ್ಟನ್ ಸುಂದರ್ ಕೂಡ ಸೊನ್ನೆ ಸುತ್ತಿದ್ದರು. ಈ ಸಂದರ್ಭ ನಾಯಕ ವಿರಾಟ್ ಕೊಹ್ಲಿ ಜೊತೆಯಾದ ಆರ್. ಅಶ್ವಿನ್ ತಂಡಕ್ಕೆ ಕೊಂಚ ಚೇತರಿಕೆ ನೀಡಿದರು. ಈ ಜೋಡಿ ಅರ್ಧಶತಕದ ಕಾಣಿಕೆ ನೀಡಿತು.
ಅಶ್ವಿನ್ 46 ಎಸೆತಗಳಲ್ಲಿ 9 ರನ್ ಗಳಿಸಿ ಕೀಪರ್ಗೆ ಕ್ಯಾಚಿತ್ತು ನಿರ್ಗಮಿಸಿದರು.
IPL 2021: IPL ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ ದೇಶೀಯ ಟಿ20 ಟೂರ್ನಿಯಲ್ಲಿ ಮಿಂಚಿದ ಈ ನಾಲ್ವರು..!
ಭಾರತ ತಂಡ 2008ರಲ್ಲಿ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 387 ರನ್ಗಳನ್ನು ಯಶಸ್ವಿಯಾಗಿ ಚೇಸ್ ಮಾಡಿ ಗೆಲುವು ಸಾಧಿಸಿತ್ತು. ಆಗ ಗಂಭೀರ್ 66 ರನ್, ವಿರೇಂದ್ರ ಸೆಹ್ವಾಗ್ 83 ಸಚಿನ್ ಅಜೇಯ 103, ಯುವರಾಜ್ ಸಿಂಗ್ ಅಜೇಯ 85 ರನ್ಗಳಿಸಿ ಗೆಲುವು ತಂದಿಟ್ಟಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ