India vs England: ಬುಮ್ರಾ ಬೆಂಕಿಯ ಯಾರ್ಕರ್​ಗೆ ಕಕ್ಕಾಬಿಕ್ಕಿಯಾದ ಸ್ಟೋಕ್ಸ್: ವಿರಾಟ್ ಕೊಹ್ಲಿಯೂ ಶಾಕ್

ಸ್ಟೋಕ್ಸ್​-ರೂಟ್ ಜೊತೆಯಾಟವನ್ನು ಅಂತ್ಯಗೊಳಿಸಲು ಟೀಂ ಇಂಡಿಯಾ ನಾನಾ ಪ್ರಯೋಗ ನಡೆಸಿತು. ಜಸ್​ಪ್ರೀತ್ ಬುಮ್ರಾ ಅಂತೂ ತಮ್ಮ ಮಾರಕ ಯಾರ್ಕರ್ ಮೂಲಕ ಪ್ರಯತ್ನಿಸಿದೂ ಸಾಧ್ಯವಾಗಲಿಲ್ಲ. ಆದರೆ...

India vs England

India vs England

 • Share this:
  ಚೆನ್ನೈನ ಎಂ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತೀಯ ಬೌಲರ್​ಗಳು ವಿಕೆಟ್ ಕೀಳಲು ಹರಸಾಹಸ ಪಡುತ್ತಿದ್ದಾರೆ. ಇತ್ತ ಆಂಗ್ಲರು ನಾಯಕ ಜೋ ರೂಟ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಬೃಹತ್ 500 ರನ್​ಗಳತ್ತ ಸಾಗುತ್ತಿದೆ. ಇಂದು ಬೆನ್ ಸ್ಟೋಕ್ಸ್ ಜೊತೆ ಎರಡನೇ ದಿನದಾಟ ಆರಂಭಿಸಿದ ರೂಟ್ ಮತ್ತೊಂದು ಅಮೋಘ ಇನ್ನಿಂಗ್ಸ್​ ಕಟ್ಟಿದರು. ಈ ಜೋಡಿ ಶತಕದ ಜೊತೆಯಾಟ ಆಡಿತು. ಇವರ ಜೊತೆಯಾಟಕ್ಕೆ ಬ್ರೇಕ್ ಹಾಕೋದೆ ಭಾರತಕ್ಕೆ ಸವಾಲಿನ ಕೆಲಸವಾಯಿತು.

  ಸ್ಟೋಕ್ಸ್​-ರೂಟ್ ಜೊತೆಯಾಟವನ್ನು ಅಂತ್ಯಗೊಳಿಸಲು ಟೀಂ ಇಂಡಿಯಾ ನಾನಾ ಪ್ರಯೋಗ ನಡೆಸಿತು. ಜಸ್​ಪ್ರೀತ್ ಬುಮ್ರಾ ಅಂತೂ ತಮ್ಮ ಮಾರಕ ಯಾರ್ಕರ್ ಮೂಲಕ ಪ್ರಯತ್ನಿಸಿದೂ ಸಾಧ್ಯವಾಗಲಿಲ್ಲ. ಆದರೆ, ಬುಮ್ರಾ ಅವರ ಒಂದು ಯಾರ್ಕರ್ ಬಾಲ್​ಗೆ ಸ್ವತಃ ಬೆನ್ ಸ್ಟೋಕ್ಸ್​ ಕಕ್ಕಾಬಿಕ್ಕಿಯಾಗಿದ್ದು ಸುಳ್ಳಲ್ಲ.

  Ind vs Eng 1st Test, Day 2 Live Score:

  ಹೌದು, 92ನೇ ಓವರ್​ನಲ್ಲಿ ಬುಮ್ರಾ ಅವರು ಬೆನ್ ಸ್ಟೋಕ್ಸ್​ಗೆ ಬೆಂಕಿಯ ಯಾರ್ಕರ್ ಎಸೆತದರು. ಚೆಂಡನ್ನು ಬ್ಯಾಟ್ಸ್​ಮನ್​ ಫೇಸ್ ಮಾಡಲು ಸಾಧ್ಯವಾಗದೆ ವಿಕೆಟ್ ಹತ್ತಿರದಿಂದ ಸಾಗಿ ಕೀಪರ್ ಕೈಸೇರಿತು. ಆದರೂ ವಿಕೆಟ್​ಗೆ ತಾಗಿಲ್ಲವಲ್ಲ ಎಂದು ಬುಮ್ರಾ ಬೇಸರವಾದರೆ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಯಾರ್ಕರ್ ನೋಡಿ ಒಮ್ಮೆ ಶಾಕ್ ಆದರು. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

  ಸದ್ಯ ಎರಡು ವಿಕೆಟ್ ಕಿತ್ತಿರುವ ಜಸ್​ಪ್ರೀತ್ ಬುಮ್ರಾ ಭಾರತದಲ್ಲಿ ಆಡುತ್ತಿರುವ ಚೊಚ್ಚಲ ಟೆಸ್ಟ್​ ಪಂದ್ಯ ಇದಾಗಿದೆ. ಈ ಮೂಲಕ ಪದಾರ್ಪಣೆ ಬಳಿಕ ಅತೀ ಹೆಚ್ಚು ಟೆಸ್ಟ್ ಪಂದ್ಯವನ್ನಾಡಿ ತವರಿನಲ್ಲಿ ಆಡಿದ ಆಟಗಾರ ಎಂಬ ಹಿರಿಮೆಗೆ ಟೀಂ ಇಂಡಿಯಾ ವೇಗಿ ಪಾತ್ರರಾಗಿದ್ದಾರೆ.

  ಜಸ್​ಪ್ರೀತ್ ಬುಮ್ರಾ ಇದುವರೆಗೆ 17 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಎಲ್ಲಾ ಪಂದ್ಯಗಳು ನಡೆದಿರುವುದು ವಿದೇಶದಲ್ಲಿ ಎಂಬುದು ವಿಶೇಷ. ಇದೀಗ ಚೊಚ್ಚಲ ಬಾರಿ ತವರಿನಲ್ಲಿ ಬುಮ್ರಾ ಕಣಕ್ಕಿಳಿದಿದ್ದಾರೆ. ಈ ಮೂಲಕ ವಿದೇಶದಲ್ಲಿ ಹೆಚ್ಚು ಟೆಸ್ಟ್​ ಪಂದ್ಯವನ್ನಾಡಿ ಭಾರತದಲ್ಲಿ ಮೊದಲ ಟೆಸ್ಟ್ ಆಡಿದ ಆಟಗಾರರ ಪಟ್ಟಿಯಲ್ಲಿ ಬುಮ್ರಾ ಅಗ್ರಸ್ಥಾನಕ್ಕೇರಿದ್ದಾರೆ.

  IPL 2021 Auction: ಹರಾಜಿನಲ್ಲಿ 16 ವರ್ಷದ ಪೋರ; ಈತನನ್ನು ಖರೀದಿಸುವ ತಂಡ ಯಾವುದು ಗೊತ್ತಾ?

  ಅಷ್ಟೇ ಅಲ್ಲದೆ ಟೆಸ್ಟ್ ಇತಿಹಾಸದಲ್ಲೇ ವಿದೇಶದಲ್ಲಿ ಅತೀ ಹೆಚ್ಚು ಟೆಸ್ಟ್ ಪಂದ್ಯವನ್ನಾಡಿದ ಬಳಿಕ ತವರಿನಲ್ಲಿ ಕಣಕ್ಕಿಳಿದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಬುಮ್ರಾ ಪಾತ್ರರಾಗಿದ್ದಾರೆ.

  ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ನ ಎರಡನೇ ದಿನ ಆಂಗ್ಲರು ತಮ್ಮ ಬ್ಯಾಟಿಂಗ್ ಆರ್ಭಟ ಮುಂದುವರೆಸಿದ್ದಾರೆ. ನಾಯಕ ಜೋ ರೂಟ್ ಆಕರ್ಷಕ ದ್ವಿಶತಕ ಸಿಡಿಸಿ ಮಿಂಚಿದ್ದು ತಂಡದ ಮೊತ್ತ 500ರತ್ತ ಸಾಗುತ್ತಿದೆ. ಮೊದಲ ದಿನ ಭಾರತೀಯ ಬೌಲರ್​ಗಳು ಆಂಗ್ಲರ ವಿಕೆಟ್ ಕೀಳುವಲ್ಲಿ ವೈಫಲ್ಯ ಅನುಭವಿಸಿದರು. ಹೀಗಾಗಿ ಇಂಗ್ಲೆಂಡ್ ಪ್ರಥಮ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 263 ರನ್ ಕಲೆಹಾಕಿ ಪರಾಕ್ರಮ ಮೆರೆಯಿತು.
  Published by:Vinay Bhat
  First published: