ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಕೆಟ್ಟದಾಗಿ ಆರಂಭಿಸಿರುವ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯದಲ್ಲೇ ಹೀನಾಯ ಸೋಲುಕಂಡಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮೇಲೂ ದೊಡ್ಡ ಪರಿಣಾಮ ಬೀರಿದೆ. ಹೀಗಿರುವಾಗ ಭಾರತಕ್ಕೆ ಮತ್ತೊಂದು ಆಘಾತ ಉಂಟಾಗಿದೆ. ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಗಾಯದಿಂದಾಗಿ ಬೆರಳು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಜಡೇಜಾ ಅವರ ಚೇತರಿಕೆಗೆ ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜಡೇಜಾ ಅನುಪಸ್ಥಿತಿ ವಿರಾಟ್ ಕೊಹ್ಲಿ ಪಡೆಗೆ ಹಿನ್ನಡೆಯಾಗುವುದು ಖಚಿತ. ಜಡೇಜಾ ಕಳೆದ ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್ನ ಅಂತಿಮ ಪಂದ್ಯದಿಂದಲೂ ಹೊರಗುಳಿದಿದ್ದರು. ಇಂಗ್ಲೆಂಡ್ ಎದುರಿನ ಮೊದಲೆರಡು ಟೆಸ್ಟ್ ಪಂದ್ಯಗಳಿಗೂ ಆಯ್ಕೆ ಆಗಿರಲಿಲ್ಲ. ಆದರೆ, ಅಹ್ಮದಾಬಾದ್ನ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಬಹುದು ಎಂಬ ನಿರೀಕ್ಷೆ ಇತ್ತು. ಆದರೀಗ ಅದು ಹುಸಿಯಾಗಿದೆ.
T Natarajan: ತಮಿಳುನಾಡು ತಂಡದಿಂದ ಟಿ. ನಟರಾಜನ್ ಹೊರಕ್ಕೆ: ಕಾರಣವೇನು ಗೊತ್ತೇ?
ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೈ ಬೆರಳಿಗೆ ಗಾಯವಾಗಿತ್ತು. ಹೀಗಾಗಿ ಬ್ರಿಸ್ಬೇನ್ನಲ್ಲಿ ನಡೆದ ನಿರ್ಣಾಯ ಟೆಸ್ಟ್ ಪಂದ್ಯದಿಂದಲೂ ಅವರು ಹೊರಗುಳಿದಿದ್ದರು. ಆಸ್ಟ್ರೇಲಿಯಾದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿ ಭಾರತಕ್ಕೆ ಮರಳಿದ್ದರು.
ಇನ್ನೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಆರಂಭವಾಗಲಿರುವ ಸೀಮಿತ ಓವರ್ಗಳ ಸರಣಿಯಲ್ಲಿ ಪಾಲ್ಗೊಳ್ಳುವ ಬಗ್ಗೆಯೂ ಸ್ಪಷ್ಟತೆಯಿಲ್ಲ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಅಂತಿಮವಾದ ಬಳಿಕ ಐದು ಪಂದ್ಯಗಳ ಟಿ-20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
ಇತ್ತ ರವೀಂದ್ರ ಜಡೇಜಾ ಜಾಗವನ್ನು ತುಂಬಲು ಅಕ್ಷರ್ ಪಟೇಲ್ರನ್ನು ಕಣಕ್ಕಿಳಿಸಲು ಭಾರತ ಸಿದ್ಧತೆ ನಡೆಸಿತ್ತು. ಆದರೆ, ಮೊದಲ ಟೆಸ್ಟ್ ಆರಂಭದ ಹಿಂದಿನ ದಿನ ಅಕ್ಷರ್ ಕೂಡ ಇಂಜುರಿಗೆ ತುತ್ತಾಗಿ ಮೊದಲ ಟೆಸ್ಟ್ಗೆ ಅಲಭ್ಯರಾದರು. ಇವರು ಬದಲು ಶಹ್ಬಾಜ್ ನದೀಂರನ್ನು ಆಡಿಸಲಾಯಿತು. ಆದರೆ, ಇವರ ಕಡೆಯಿಂದ ಭಾರತಕ್ಕೆ ಅಷ್ಟೊಂದು ಪ್ರಯೋಜನ ಸಿಗಲಿಲ್ಲ.
ಸದ್ಯ ಅಕ್ಷರ್ ಪಟೇಲ್ ಫಿಟ್ ಆಗಿದ್ದು ಎರಡನೇ ಟೆಸ್ಟ್ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಅಕ್ಷರ್ ಪಟೇಲ್ ಸಣ್ಣ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಅವರು ಈಗಾಗಲೇ ಸುಧಾರಿಸಿಕೊಂಡಿದ್ದು, ನೆಟ್ಸ್ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಬೌಲಿಂಗ್ ಕೂಡ ಆರಂಭಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಬಿಸಿಸಿಐ ಮೂಗಳು ತಿಳಿಸಿವೆ.
ಕ್ರಿಕೆಟ್ ಅಂಗಳದಲ್ಲಿ ಮತ್ತೊಂದು ಹೊಸ ಲೀಗ್: ನೂತನ T20 ಕದನಕ್ಕೆ ವೇದಿಕೆ ರೂಪಿಸಲಿದೆ ಯುಎಇ
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಈಗಾಗಲೇ ಮುಕ್ತಾಯಗೊಂಡಿದ್ದು ಭಾರತ ತಂಡ ಹೀನಾಯ ಸೋಲುಕಂಡಿದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಂಗ್ಲರು 1-0 ಮುನ್ನಡೆ ಸಾಧಿಸಿದ್ದಾರೆ. ಫೆ. 13 ರಿಂದ 17 ರ ವರೆಗೆ 2ನೇ ಟೆಸ್ಟ್ ಪಂದ್ಯ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ