ಬೆಂಗಳೂರು (ಜ. 19): ಟೀಂ ಇಂಡಿಯಾ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು ಕೊನೆಯ ಟೆಸ್ಟ್ನ ಅಂತಿಮ ದಿನದಾಟ ನಡೆಯುತ್ತಿದೆ. ಈ ನಡುವೆ ಇಂದು ಫೆಬ್ರವರಿ ತಿಂಗಳಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟವಾಗಲಿದೆ. ಆಸೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡುವ ಬಳಿಕ ಪಿತೃತ್ವ ರಜೆಯಲ್ಲಿ ಭಾರತಕ್ಕೆ ಬಂದಿರುವ ನಾಯಕ ವಿರಾಟ್ ಕೊಹ್ಲಿ ಕಮ್ಬ್ಯಾಕ್ ಮಾಡಲಿದ್ದಾರೆ. ಜೊತೆಗೆ ಇಶಾಂತ್ ಶರ್ಮಾ ಕೂಡ ತಂಡ ಸೇರಿಕೊಳ್ಳುವುದು ಖಚಿತ.
ಜೂಮ್ ಕಾಲ್ ಮೂಲಕ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ ಶರ್ಮಾ, ಸುನೀಲ್ ಜೋಶಿ, ಹರೀವಿಂದರ್ ಸಿಂಗ್ ಇಂದು ತಂಡ ಆಯ್ಕೆ ಮಾಡಲಿದೆ. ಆಸ್ಟ್ರೇಲಿಯಾದಲ್ಲಿರುವ ಟೀಂ ಇಂಡಿಯಾದ ಕೆಲವು ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಯುವ ಪ್ಲೇಯರ್ಸ್ಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.
India vs Australia: ಶತಕದ ಅಂಚಿನಲ್ಲಿ ಎಡವಿದ ಶುಭ್ಮನ್ ಗಿಲ್: ಗೆಲುವಿಗೆ ಭಾರತ ಕಠಿಣ ಹೋರಾಟ
ಪ್ರಮುಖವಾಗಿ ಜಸ್ಪ್ರೀತ್ ಬುಮ್ರಾ, ಆರ್. ಅಶ್ವಿನ್ ಅವರ ಫಿಟ್ನೆಸ್ ನೋಡಿಕೊಂಡು ಸೂಕ್ತ ನಿರ್ಧಾರಕ್ಕೆ ಬರಲು ಆಯ್ಕೆ ಸಮಿತಿ ನಿರ್ಧರಿಸಿದೆ. ಗಾಯಾಳಾಗಿರುವ ಮೊಹಮ್ಮದ್ ಶಮಿ, ರವೀಂದ್ರ ಜಡೇಜ, ಉಮೇಶ್ ಯಾದವ್ ಮತ್ತು ಹನುಮ ವಿಹಾರಿ ಆಯ್ಕೆಗೆ ಲಭ್ಯರಾಗುವುದಿಲ್ಲ. ಇದು ಚೇತನ್ ಶರ್ಮ ನೇತೃತ್ವದ ಆಯ್ಕೆ ಸಮಿತಿ ಆರಿಸಲಿರುವ ಮೊದಲ ತಂಡವೆಂಬುದು ವಿಶೇಷ.
ಫೆಬ್ರವರಿ 5 ರಿಂದ 9 ವರೆಗೆ ಮೊದಲ ಟೆಸ್ಟ್ ಪಂದ್ಯ ಮತ್ತು ಫೆಬ್ರವರಿ 13 ರಿಂದ 17ರ ವರೆಗೆ ಎರಡನೇ ಟೆಸ್ಟ್ ಪಂದ್ಯಗಳು ನಡೆಯಲಿವೆ. 3 ಮತ್ತು 4ನೇ ಪಂದ್ಯಗಳು ಅಹಮದಾಬಾದ್ನಲ್ಲಿ ಫೆಬ್ರವರಿ 24ರಿಂದ 28 ಮತ್ತು ಮಾರ್ಚ್ 4ರಿಂದ 8ರವರೆಗೆ ನಡೆಯಲಿವೆ. ಬಳಿಕ ಅಹಮದಾಬಾದ್ನಲ್ಲೇ 5 ಟಿ-20 ಪಂದ್ಯಗಳ (ಮಾ. 12, 14, 16, 18, 20) ಸರಣಿ ಮತ್ತು ಪುಣೆಯಲ್ಲಿ 3 ಏಕದಿನ ಪಂದ್ಯಗಳ (ಮಾ. 23, 26, 28) ಸರಣಿ ನಡೆಯಲಿದೆ.
ಟೀಂ ಇಂಡಿಯಾ ಜನವರಿ 27ರಂದು ಬಯೋ ಬಬಲ್ ಪ್ರವೇಶಿಸಲಿದೆ. ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದರೆ, ಇಂಗ್ಲೆಂಡ್ ತಂಡ ಶ್ರೀಲಂಕಾ ನೆಲದಲ್ಲಿ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಿದೆ.
ಸಂಭಾವ್ಯ ತಂಡ:
ಆರಂಭಿಕರು: ಶುಭಮಾನ್ ಗಿಲ್, ರೋಹಿತ್ ಶರ್ಮ, ಮಯಾಂಕ್ ಅಗರ್ವಾಲ್.
ಮಧ್ಯಮ ಕ್ರಮಾಂಕ: ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ).
ವಿಕೆಟ್ ಕೀಪರ್: ರಿಷಭ್ ಪಂತ್, ವೃದ್ಧಿಮಾನ್ ಸಾಹ.
ಆಲ್ರೌಂಡರ್: ವಾಷಿಂಗ್ಟನ್ ಸುಂದರ್.
ವೇಗಿಗಳು: ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮ, ಶಾರ್ದೂಲ್ ಠಾಕೂರ್, ಮೊಹಮದ್ ಸಿರಾಜ್, ಟಿ. ನಟರಾಜನ್.
ಸ್ಪಿನ್ನರ್: ಆರ್. ಅಶ್ವಿನ್, ಶಾಬಾಜ್ ನದೀಂ, ಕುಲದೀಪ್ ಯಾದವ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ