India vs England: ಸ್ಮಿತ್ ಆಯ್ತು ಈಗ ರೂಟ್ ಸರದಿ: ಆಂಗ್ಲರಿಗೆ ಮಣ್ಣುಮುಕ್ಕಿಸಲು ಭಾರತದ ಬೌಲಿಂಗ್ ಕೋಚ್ ರೆಡಿ

ಪ್ರಮುಖವಾಗಿ ರೂಟ್ ಲಂಕಾ ಪ್ರವಾಸದಲ್ಲಿ ಆಡಿದ 4 ಇನಿಂಗ್ಸ್‌ಗಳಲ್ಲಿ 106.50ರ ಸರಾಸರಿಯಲ್ಲಿ 426 ರನ್ ಸಿಡಿಸಿದ್ದರು. ಇದರಲ್ಲಿ 1 ದ್ವಿಶತಕ ಮತ್ತು 1 ಶತಕವೂ ಸೇರಿತ್ತು.

Team India

Team India

  • Share this:
    ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿಗೆ ಗೆದ್ದು ಬೀಗಿರುವ ಟೀಂ ಇಂಡಿಯಾ ಸದ್ಯ ಮತ್ತೊಂದು ದೊಡ್ಡ ಸರಣಿಗೆ ಸಜ್ಜಾಗುತ್ತಿದೆ. ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು, ಈ ಸುದೀರ್ಘ ಸರಣಿಯಲ್ಲಿ 4 ಟೆಸ್ಟ್ ಪಂದ್ಯ, 5 ಟಿ-20 ಪಂದ್ಯಗಳು ಮತ್ತು 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಫೆಬ್ರವರಿ 5 ರಿಂದ ಚೆನ್ನೈನ ಎಂ. ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್​ ಪಂದ್ಯ ಆರಂಭವಾಗುವ ಮೂಲಕ ಚಾಲನೆ ಸಿಗಲಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲೆರಡು ಟೆಸ್ಟ್​ ಪಂದ್ಯಗಳನ್ನಾಡುವುದಕ್ಕಾಗಿ ಚೆನ್ನೈಗೆ ಆಗಮಿಸಿದ್ದಾರೆ. ಇತ್ತ ಇಂಗ್ಲೆಂಡ್ ಆಟಗಾರರು ಕೂಡ ಚೆನ್ನೈಗೆ ಬಂದಿಳಿದಿದ್ದು, ಕ್ವಾರಂಟೈನ್​ನಲ್ಲಿದ್ದಾರೆ.

    ಭಾರತ ತಂಡ ಈಗಾಗಲೇ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕಲು ಕಾರ್ಯತಂತ್ರ ರೂಪಿಸುತ್ತಿದೆ. ಅದರಲ್ಲೂ ಭರ್ಜರಿ ಫಾರ್ಮ್​ನಲ್ಲಿರುವ ನಾಯಕ ಜೋ ರೂಟ್​ಗೆ ಪೆವಿಲಿಯನ್ ಹಾದಿ ತೋರಿಸಲು ಭಾರತದ ಬೌಲಿಂಗ್ ಕೋಚ್ ಸಿದ್ದರಾಗಿದ್ದಾರೆ. ಈ ಮೂಲಕ ಆಸೀಸ್‌ ಪ್ರವಾಸದಲ್ಲಿ ಸ್ಟೀವ್‌ ಸ್ಮಿತ್‌ ಬ್ಯಾಟಿಂಗ್‌ ಅಬ್ಬರಕ್ಕೆ ಯಶಸ್ವಿಯಾಗಿ ಬ್ರೇಕ್‌ ಹಾಕಿದ ಟೀಂ ಇಂಡಿಯಾ, ಇದೀಗ ರೂಟ್‌ ಅವರನ್ನು ಕಟ್ಟಿ ಹಾಕುವ ಲೆಕ್ಕಾಚಾರದಲ್ಲಿದೆ.

    Sourav Ganguly: ಸೌರವ್ ಗಂಗೂಲಿಗೆ ಮತ್ತೆರಡು ಸ್ಟಂಟ್ ಅಳವಡಿಕೆ: ಎರಡನೇ ಆಂಜಿಯೋಪ್ಲ್ಯಾಸ್ಟಿ ಯಶಸ್ವಿ

    ಇತ್ತೀಚೆಗಷ್ಟೆ ಶ್ರೀಲಂಕಾ ಪ್ರವಾಸ ಮುಗಿಸಿ ಬಂದಿರುವ ಇಂಗ್ಲೆಂಡ್ ತಂಡ, ಇಲ್ಲಿ ಭರ್ಜರಿ ರನ್‌ಪ್ರವಾಹವನ್ನೇ ಹರಿಸಿರುವ ರೂಟ್ ವಿರುದ್ಧದ ಕಾರ್ಯತಂತ್ರದಲ್ಲಿ ಯಶಸ್ಸು ಕಾಣುವುದು ಭಾರತ ತಂಡದ ಪಾಲಿಗೆ ನಿರ್ಣಾಯಕವೆನಿಸಲಿದೆ. ಕಾಂಗರೂ ನೆಲದಲ್ಲಿ ಹೊಸ ಇತಿಹಾಸ ರಚಿಸಿರುವ ಭಾರತ ತಂಡ, ಇದೀಗ ಪ್ರವಾಸಿ ಇಂಗ್ಲೆಂಡ್ ವಿರುದ್ಧವೂ ಗೆದ್ದು ತವರಿನ ಪ್ರಾಬಲ್ಯವನ್ನೂ ಉಳಿಸಿಕೊಳ್ಳುವತ್ತ ಗಮನಹರಿಸಿದೆ.

    ಪ್ರಮುಖವಾಗಿ ರೂಟ್ ಲಂಕಾ ಪ್ರವಾಸದಲ್ಲಿ ಆಡಿದ 4 ಇನಿಂಗ್ಸ್‌ಗಳಲ್ಲಿ 106.50ರ ಸರಾಸರಿಯಲ್ಲಿ 426 ರನ್ ಸಿಡಿಸಿದ್ದರು. ಇದರಲ್ಲಿ 1 ದ್ವಿಶತಕ ಮತ್ತು 1 ಶತಕವೂ ಸೇರಿತ್ತು. ಟೀಂ ಇಂಡಿಯಾದ ಬೌಲಿಂಗ್ ಕೋಚ್ ಭರತ್ ಅರುಣ್ ಅವರೇ ರೂಟ್ ವಿರುದ್ಧ ಕಾರ್ಯತಂತ್ರ ರೂಪಿಸುವ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ಆಸೀಸ್ ಪ್ರವಾಸದಲ್ಲಿ ಅವರ ಯೋಜನೆಯನ್ವಯ ಬೌಲಿಂಗ್ ಮಾಡಿದ್ದ ಭಾರತದ ಯುವ-ಅನುಭವಿ ಬೌಲರ್‌ಗಳು, 4 ಟೆಸ್ಟ್‌ಗಳಲ್ಲಿ ಒಟ್ಟಾರೆ 72 ವಿಕೆಟ್ ಕಬಳಿಸಿ ಆತಿಥೇಯರಿಗೆ ಕಡಿವಾಣ ಹಾಕಿದ್ದರು.

    IPL 2021 Auction: ಫಿಂಚ್ ಕೈಬಿಟ್ಟ ಬಳಿಕ ಈ 3 ಸ್ಟಾರ್ ಬ್ಯಾಟ್ಸ್​ಮನ್​ಗಳ ಮೇಲೆ ಕಣ್ಣಿಟ್ಟಿದೆ RCB

    "ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅಮೋಘ ಲಯದಲ್ಲಿರುವುದು ಆಂಗ್ಲರ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ. ಆದರೆ, ರೂಟ್‌ ವಿರುದ್ಧ ನಮ್ಮದೇ ರಣತಂತ್ರವನ್ನು ನಾವು ರೂಪಿಸಿದ್ದೇವೆ. ಈ ಸರಣಿಗೆ ಕೇವಲ ಮೊಹಮ್ಮದ್‌ ಶಮಿ ಮತ್ತು ರವೀಂದ್ರ ಜಡೇಜಾ ಸೇವೆಯನ್ನು ಮಾತ್ರ ಕಳೆದುಕೊಂಡಿದ್ದೇವೆ. ತವರಿನಲ್ಲಿ ಈ ಸರಣಿ ನಡೆಯುತ್ತಿರುವುದರಿಂದ ಉತ್ತಮ ಸವಾಲು ಎದುರಾಗಲಿದೆ" ಎಂದು ಭಾರತ ತಂಡ ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಹೇಳಿದ್ದಾರೆ.

    ಫೆಬ್ರವರಿ 5 ರಿಂದ ಚೆನ್ನೈನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, 13 ರಿಂದ 17 ರ ವರೆಗೆ 2ನೇ ಪಂದ್ಯ ನಡೆಯಲಿದೆ. ಫೆಬ್ರವರಿ 24 ರಿಂದ 28 ವರೆಗೆ ಅಹಮದಾವಾದ್​ನಲ್ಲಿ 3ನೇ ಟೆಸ್ಟ್ ಮತ್ತು ಮಾರ್ಚ್ 4 ರಿಂದ 8 ವರೆಗೆ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ನಂತರ ಅಹಮದಾಬಾದ್‌ನಲ್ಲಿ ಐದು ಪಂದ್ಯಗಳ ಟಿ-20 ಸರಣಿ ಮತ್ತು ಪುಣೆಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.
    First published: