ಕ್ರೀಡಾ ಸ್ಪೂರ್ತಿ ಮೆರೆಯದ ಟೀಂ ಇಂಡಿಯಾ: ಪಾಕ್ ದಿಗ್ಗಜ ಕ್ರಿಕೆಟಿಗನ ವಿವಾದಾತ್ಮಕ ಟ್ವೀಟ್

ಇನ್ನು ಭಾರತದಲ್ಲೂ ಟೀಂ ಇಂಡಿಯಾ ಆಟದ ಬಗ್ಗೆ ವಿಶ್ಲೇಷಿಸಲಾಗುತ್ತಿದ್ದು, ಅದರಲ್ಲೂ ಕೊನೆಯ ಹತ್ತು ಓವರ್​ನ ವೇಳೆ ಎಂಎಸ್ ಧೋನಿ ಮತ್ತು ಕೇದರ್ ಜಾಧವ್ ಆಟದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.

zahir | news18
Updated:July 1, 2019, 5:36 PM IST
ಕ್ರೀಡಾ ಸ್ಪೂರ್ತಿ ಮೆರೆಯದ ಟೀಂ ಇಂಡಿಯಾ: ಪಾಕ್ ದಿಗ್ಗಜ ಕ್ರಿಕೆಟಿಗನ ವಿವಾದಾತ್ಮಕ ಟ್ವೀಟ್
India-pakistan
  • News18
  • Last Updated: July 1, 2019, 5:36 PM IST
  • Share this:
ಬರ್ಮಿಂಗ್​ ಹ್ಯಾಮ್​ನಲ್ಲಿ ಭಾನುವಾರ ನಡೆದ ಇಂಗ್ಲೆಂಡ್​ ವಿರುದ್ಧ ಭಾರತ ತಂಡ ಮುಗ್ಗರಿಸಿದೆ. ಅದ್ಭುತ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಟೀಂ ಇಂಡಿಯಾ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ ಎಂಬ ಮಾತುಗಳು ಸಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿವೆ. ಅದರಲ್ಲೂ ಪಾಕಿಸ್ತಾನ ತಂಡವನ್ನು ವಿಶ್ವಕಪ್​ನಿಂದ ಹೊರಗಿಡಲು ವಿರಾಟ್ ಕೊಹ್ಲಿ ಪಡೆ ಸೋಲನ್ನು ಅಪ್ಪಿಕೊಂಡಿತು ಎಂದು ಪಾಕ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಖಾರ್ ಯೂನಿಸ್


ಕ್ರೀಡಾಭಿಮಾನಿಗಳ ಮಾತಿಗೆ ಬೆಂಬಲ ಎಂಬಂತೆ ಇದೀಗ ಪಾಕ್ ಕ್ರಿಕೆಟ್ ದಿಗ್ಗಜ ವಖಾರ್ ಯೂನಿಸ್ ಸಹ ಟ್ವೀಟ್ ಮಾಡಿದ್ದಾರೆ. 'ಇದು ನೀವು ಯಾರು, ಏನು ಮಾಡಿದ್ದೀರಿ ಎಂಬುದನ್ನು ವ್ಯಾಖ್ಯಾನಿಸಿದೆ. ಪಾಕಿಸ್ತಾನ ತಂಡವು ಸೆಮೀಸ್​ಗೆ ಹೋಗುತ್ತದೆಯೋ ಇಲ್ಲವೋ ಎಂಬುದು ವಿಷಯವಲ್ಲ. ಬದಲಾಗಿ ಕೆಲ ಚಾಂಪಿಯನ್ ತಂಡಗಳ ಕ್ರೀಡಾ ಸ್ಪೂರ್ತಿಯನ್ನು ಪರೀಕ್ಷಿಸಲಾಯಿತು. ಇಲ್ಲಿ ಆ ತಂಡವು ಹೀನಾಯವಾಗಿ ವಿಫಲವಾಗಿದೆ' ಎಂಬಾರ್ಥದಲ್ಲಿ ವಖಾರ್ ಯೂನಿಸ್ ಟ್ವೀಟಿಸಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಆಂಗ್ಲರ ವಿರುದ್ಧ ಬೇಕಂತಲೇ ಸೋತಿದ್ದು, ಕೊಹ್ಲಿ ಪಡೆಯು ಕ್ರೀಡಾಸ್ಪೂರ್ತಿಯನ್ನು ಮೆರೆಯಲಿಲ್ಲ ಎಂದು ಪಾಕ್ ಮಾಜಿ ವೇಗಿ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.


ಈ ವಿವಾದಾತ್ಮಕ ಟ್ವೀಟ್​ ಬಗ್ಗೆ ಭಾರತೀಯ ಅಭಿಮಾನಿಗಳು ಸಹ ಆಕ್ರೋಶ ವ್ಯಕ್ತಪಡಿಸಿದ್ದು, ಟೀಂ ಇಂಡಿಯಾ ತಕ್ಕ ಪ್ರದರ್ಶನ ನೀಡಿದೆ ಎಂದು ವಾದಿಸಿದ್ದಾರೆ. ಹಾಗೆಯೇ ಮತ್ತೊಂದು ತಂಡದ ಗೆಲುವಿಗಾಗಿ ಕಾಯದೇ ಸ್ವಯಂ ಪ್ರಯತ್ನದಿಂದ ಗೆಲ್ಲುವಂತೆ ತಂಡದ ಆಟಗಾರರಿಗೆ ತಿಳಿಸುವಂತೆ ವಖಾರ್ ಯೂನಿಸ್​ಗೆ ಕಿಚಾಯಿಸಿದ್ದಾರೆ.

ಇನ್ನು ಭಾರತದಲ್ಲೂ ಟೀಂ ಇಂಡಿಯಾ ಆಟದ ಬಗ್ಗೆ ವಿಶ್ಲೇಷಿಸಲಾಗುತ್ತಿದ್ದು, ಅದರಲ್ಲೂ ಕೊನೆಯ ಹತ್ತು ಓವರ್​ನ ವೇಳೆ ಎಂಎಸ್ ಧೋನಿ ಮತ್ತು ಕೇದರ್ ಜಾಧವ್ ಆಟದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಈ ಇಬ್ಬರು ಆಟಗಾರರು ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿರುವುದೇ ಸೋಲಿಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.
First published:July 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ