ಬೆಂಗಳೂರು (ಫೆ. 02): ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಗೆ ದಿನಗಣನೆ ಶುರುವಾಗಿದೆ. ಫೆಬ್ರವರಿ 5 ರಂದು ಚೆನ್ನೈನ ಎಂ. ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಆರಂಭವಾಗುವ ಮೂಲಕ ಚಾಲನೆ ಸಿಗಲಿದೆ. ಈಗಾಗಲೇ ಉಭಯ ತಂಡದ ಆಟಗಾರರ ಕೋವಿಡ್ ವರದಿ ನೆಗೆಟಿವ್ ಬಂದಿದ್ದು ಇಂದಿನಿಂದ ಭರ್ಜರಿ ಅಭ್ಯಾಸದಲ್ಲಿ ನಿರತರಾಗಲಿದ್ದಾರೆ. ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿ ಆತ್ಮವಿಶ್ವಾಸದಲ್ಲಿದ್ದರೆ, ಇತ್ತ ಆಂಗ್ಲರು ಶ್ರೀಲಂಕಾ ವಿರುದ್ಧ ಕ್ಲೀನ್ ಸ್ವಿಪ್ ಮಾಡಿ ಪರಾಕ್ರಮ ಮೆರೆದು ಭರ್ಜರಿ ಫಾರ್ಮ್ನಲ್ಲಿದ್ದಾರೆ.
ಹೀಗಿರುವಾಗ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರು ಭಾರತ ವಿರುದ್ಧದ 4 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಒಂದು ಪಂದ್ಯವನ್ನೂ ಗೆಲ್ಲೋದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ವಿಜಯ್ ಹಜಾರೆ ಟೂರ್ನಿಗೆ ಕರ್ನಾಟಕ ತಂಡ ಪ್ರಕಟ: ಹೊಸ ನಾಯಕನ ಆಯ್ಕೆ..!
ಇಂಗ್ಲೆಂಡ್ ತಂಡದಲ್ಲಿ ಮೊಯಿನ್ ಅಲಿ, ಡೊಮ್ ಬೆಸ್ ಮತ್ತು ಜ್ಯಾಕ್ ಲೀಚ್ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. ಅಲಿ 60 ಟೆಸ್ಟ್ ಪಂದ್ಯಗಳಿಂದ 181 ವಿಕೆಟ್ ಗಳಿಸಿದ ಅನುಭವಿ ಆಟಗಾರರಾಗಿದ್ದರೆ, ಬೆಸ್ ಮತ್ತು ಲೀಚ್ ತಲಾ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 31 ಮತ್ತು 44 ವಿಕೆಟ್ ಪಡೆದಿದ್ದಾರೆ. 'ಈ ರೀತಿಯ ಸ್ಪಿನ್ ದಾಳಿಯಿಂದಾಗಿ ಇಂಗ್ಲೆಂಡ್ ತಂಡವು ಯಾವುದೇ ರೀತಿಯ ಟೆಸ್ಟ್ ಪಂದ್ಯಗೆಲ್ಲಲಿದೆ ಅನಿಸುತ್ತಿಲ್ಲ ಎಂದು ಎಂದು ಗಂಭೀರ್ ಹೇಳಿದ್ದಾರೆ.
ಶ್ರೀಲಂಕಾದಲ್ಲಿ 2-0 ಗಳಿಂದ ಜಯಗಳಿಸಿದ ಇಂಗ್ಲೆಂಡ್ ನಾಯಕ ಜೋ ರೂಟ್ ಭಾರತದಲ್ಲಿ ಸಂಪೂರ್ಣವಾಗಿ ವಿಭಿನ್ನ ಸವಾಲನ್ನು ಎದುರಿಸಲಿದ್ದಾರೆ ಎಂದಿರುವ ಗಂಭೀರ್, ಇದು ರೂಟ್ನಂತವರಿಗೆ ಸಂಪೂರ್ಣವಾಗಿ ವಿಭಿನ್ನ ಸವಾಲಾಗಿ ಪರಿಣಮಿಸುತ್ತದೆ ಎಂಬುದು ಅವರ ಅಭಿಪ್ರಾಯ.
ಇದನ್ನೆಲ್ಲ ಗಮನಿಸಿ ಗಂಭೀರ್ ಅವರು "ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ಗೆಲ್ಲಲಿದೆ. ಅಥವಾ 3-1 ಅಂತರದ ಫಲಿತಾಂಶ ಬರಲಿದೆ. ಪಿಂಕ್ ಬಾಲ್ ಟೆಸ್ಟ್ನಲ್ಲಿ ಮಾತ್ರವೇ ಇಂಗ್ಲೆಂಡ್ಗೆ ಗೆಲ್ಲುವ ಅಲ್ಪ ಅವಕಾಶವಿದೆ," ಎಂದು ಹೇಳಿದ್ದಾರೆ.
ಮೊದಲ 2 ಟೆಸ್ಟ್ಗಳಿಗೆ ಇಂಗ್ಲೆಂಡ್ ತಂಡ:
ಜೋ ರೂಟ್ (ನಾಯಕ), ಜೋಫ್ರ ಆರ್ಚರ್, ಮೊಯೀನ್ ಅಲಿ, ಜೇಮ್ಸ್ ಆಂಡರ್ಸನ್, ಡಾಮ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಜಾಕ್ ಕ್ರಾವ್ಲೀ, ಬೆನ್ ಪೋಕ್ಸ್, ಡ್ಯಾನ್ ಲಾರೆನ್ಸ್, ಜಾಕ್ ಲೀಚ್, ಡಾಮ್ ಸಿಬ್ಲೀ, ಬೆನ್ ಸ್ಟೋಕ್ಸ್, ಓಲಿ ಸ್ಟೋನ್, ಕ್ರಿಸ್ ವೋಕ್ಸ್.
Nicholas Pooran: 26 ಎಸೆತ, 12 ಸಿಕ್ಸ್: ಪೂರನ್ ಸಿಡಿಲಬ್ಬರಕ್ಕೆ ನಲುಗಿದ ಬಾಂಗ್ಲಾ ಟೈಗರ್ಸ್
ಕಾಯ್ದಿರಿಸಿದ ಆಟಗಾರರು: ಜೇಮ್ಸ್ ಬ್ರೇಸಿ, ಮೇಸನ್ ಕ್ರೇನ್, ಸಕಿಬ್ ಮಹ್ಮೂದ್, ಮ್ಯಾಥ್ಯೂ ಪಾರ್ಕಿನ್ಸನ್, ಓಲೀ ರಾಬಿನ್ಸನ್, ಅಮರ್ ವಿರ್ಡಿ.
ಟೆಸ್ಟ್ ಸರಣಿ ವೇಳಾಪಟ್ಟಿ:
1ನೇ ಟೆಸ್ಟ್, ಚೆನ್ನೈ: ಫೆಬ್ರವರಿ 5 ರಿಂದ 9
2ನೇ ಟೆಸ್ಟ್, ಚೆನ್ನೈ: ಫೆಬ್ರವರಿ 13 ರಿಂದ 17
3ನೇ ಟೆಸ್ಟ್, ಅಹಮದಾಬಾದ್ (ಹಗಲು ರಾತ್ರಿ): ಫೆಬ್ರವರಿ 24 ರಿಂದ 28 ರವರೆಗೆ
4ನೇ ಟೆಸ್ಟ್, ಅಹಮದಾಬಾದ್: ಮಾರ್ಚ್ 4 ರಿಂದ 8
ಭಾರತ ತಂಡ:
ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ (ನಾಯಕ), ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್, ವೃದ್ಧಿಮಾನ್ ಸಹಾ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಆರ್.ಅಶ್ವಿನ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ