HOME » NEWS » Sports » CRICKET INDIA VS ENGLAND BCCI SET TO INVITE PM NARENDRA MODI AT MOTERA STADIUM FOR THIRD TEST AGAINST ENGLAND VB

India vs England: ವಿಶ್ವದ ಬೃಹತ್ ಕ್ರೀಡಾಂಗಣದಲ್ಲಿ ಮೂರನೇ ಟೆಸ್ಟ್: ಬರಲಿರುವ ವಿಶೇಷ ಅತಿಥಿ ಯಾರು ಗೊತ್ತೇ?

ಮೊಟೆರಾ ಕ್ರೀಡಾಂಗಣದಲ್ಲಿ ದುರಸ್ತಿ ಕಾರ್ಯ ಮುಗಿಸಿ, 6 ವರ್ಷಗಳ ಬಳಿಕ ಮತ್ತೆ ಕ್ರಿಕೆಟ್​ ಆಡಲು ಮೈದಾನ ಸಜ್ಜಾಗಿದೆ. ಈ ಟೆಸ್ಟ್‌ ವೇಳೆ ಇದರ ಉದ್ಘಾಟನಾ ಸಮಾರಂಭವೂ ನಡೆಯಲಿದೆ.

news18-kannada
Updated:February 2, 2021, 10:08 AM IST
India vs England: ವಿಶ್ವದ ಬೃಹತ್ ಕ್ರೀಡಾಂಗಣದಲ್ಲಿ ಮೂರನೇ ಟೆಸ್ಟ್: ಬರಲಿರುವ ವಿಶೇಷ ಅತಿಥಿ ಯಾರು ಗೊತ್ತೇ?
ಇಂಗ್ಲೆಂಡ್​-ಇಂಡಿಯಾ- ಫೈಲ್​ ಫೋಟೋ
  • Share this:
ಬೆಂಗಳೂರು (ಫೆ. 02): ಬಹುನಿರೀಕ್ಷಿತ ಭಾರತ ಹಾಗೂ ಇಂಗ್ಲೆಂಡ್ ನಡುವಣ ಸರಣಿ ಆರಂಭಕ್ಕೆ ಕೇವಲ ಮೂರು ದಿನಗಳಷ್ಟೆ ಬಾಕಿಯಿದೆ. ಈ ಸುದೀರ್ಘ ಸರಣಿಯಲ್ಲಿ 4 ಟೆಸ್ಟ್ ಪಂದ್ಯ, 5 ಟಿ-20 ಪಂದ್ಯಗಳು ಮತ್ತು 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಫೆಬ್ರವರಿ 5 ರಿಂದ ಚೆನ್ನೈನ ಎಂ. ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್​ ಪಂದ್ಯ ಆರಂಭವಾಗಲಿದೆ. ಕೊರೋನಾ ವೈರಸ್ ಪ್ರಕರಣಗಳು ಭಾರತದಲ್ಲಿ ಗಣನೀಯ ಮಟ್ಟದಲ್ಲಿ ಕಡಿಮೆ ಆಗದ ಕಾರಣ ಪ್ರೇಕ್ಷಕರ ಪ್ರವೇಶಕ್ಕೆ ತಮಿಳುನಾಡು ಸರ್ಕಾರ ಅವಕಾಶ ನೀಡುತ್ತಿಲ್ಲ. ಆದರೆ, ಭಾರತೀಯ ಕ್ರಿಕೆಟ್ ಮಂಡಳಿ ಹಾಗೂ ತಮಿಳುನಾಡು ಕ್ರಿಕೆಟ್​ ಅಸೋಸಿಯೇಷನ್​ ಮಧ್ಯೆ ನಡೆದ ಮಾತುಕತೆ ಯಶಸ್ವಿಯಾಗಿ ಎರಡನೇ ಟೆಸ್ಟ್​ ಪಂದ್ಯ ವೀಕ್ಷಣೆ ಮಾಡಲು ಶೇ. 50ರಷ್ಟು ಕ್ರೀಡಾಭಿಮಾನಿಗಳಿಗೆ ಅವಕಾಶ ನೀಡಲಾಗಿದೆ.

ದ್ವಿತೀಯ ಟೆಸ್ಟ್‌ ಪಂದ್ಯದ ಮೂಲಕ ವೀಕ್ಷಕರಿಗೆ ಮಾತ್ರವಲ್ಲದೆ ಮಾಧ್ಯಮದವರಿಗೆ ಸ್ಟೇಡಿಯಂ ಬಾಗಿಲು ತೆರೆಯಲ್ಪಡಲಿದೆ. ಇದರೊಂದಿಗೆ ಕೊರೋನೋತ್ತರದ ಬಳಿಕ ಮೊದಲ ಬಾರಿಗೆ ಭಾರತದ ಅಂತರಾಷ್ಟ್ರೀಯ ಪಂದ್ಯದಲ್ಲಿ ಕ್ರೀಡಾಂಗಣ ಪ್ರವೇಶಕ್ಕೆ ಪ್ರೇಕ್ಷಕರಿಗೆ ಅನುಮತಿ ಲಭಿಸಿದಂತಾಗುತ್ತದೆ.

India vs England: ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ ಒಂದೇ ಒಂದು ಟೆಸ್ಟ್​ ಪಂದ್ಯ ಗೆಲ್ಲಲ್ಲ ಎಂದು ಗಂಭೀರ್

ಇನ್ನೂ ಭಾರತ-ಇಂಗ್ಲೆಂಡ್‌ ನಡುವಿನ 3ನೇ ಟೆಸ್ಟ್‌ ಪಂದ್ಯ ಅಹ್ಮದಾಬಾದ್‌ನ ನವೀಕೃತ “ಸರ್ದಾರ್‌ ಪಟೇಲ್‌ ಸ್ಟೇಡಿಯಂ’ನಲ್ಲಿ ಅಹರ್ನಿಶಿಯಾಗಿ ನಡೆಯಲಿದೆ. ಇದು ವಿಶ್ವದ ಬೃಹತ್‌ ಕ್ರಿಕೆಟ್‌ ಕ್ರೀಡಾಂಗಣವಾಗಿದ್ದು, ಒಂದು ಲಕ್ಷದ ಹತ್ತು ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದೆ.

ಮೊಟೆರಾ ಕ್ರೀಡಾಂಗಣದಲ್ಲಿ ದುರಸ್ತಿ ಕಾರ್ಯ ಮುಗಿಸಿ, 6 ವರ್ಷಗಳ ಬಳಿಕ ಮತ್ತೆ ಕ್ರಿಕೆಟ್​ ಆಡಲು ಮೈದಾನ ಸಜ್ಜಾಗಿದೆ. ಈ ಟೆಸ್ಟ್‌ ವೇಳೆ ಇದರ ಉದ್ಘಾಟನಾ ಸಮಾರಂಭವೂ ನಡೆಯಲಿದೆ. ಈ ಸ್ಮರಣೀಯ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ನಾಯಕರನೇಕರು ಸಾಕ್ಷಿಯಾಗುವ ಸಾಧ್ಯತೆ ಇದೆ.

ಹೌದು, ಬಿಸಿಸಿಐ ಈಗಾಗಲೇ ಪ್ರಧಾನಿಯವರಿಗೆ ಆಹ್ವಾನ ನೀಡಿದೆ ಎಂದು ವರದಿಯಾಗಿದೆ. ಜತೆಗೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕ್ರೀಡಾ ಸಚಿವ ಕಿರಣ್‌ ರಿಜಿಜು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಆಹ್ವಾನಿಸುವ ಸಾಧ್ಯತೆ ಇದೆ.

ವಿಜಯ್ ಹಜಾರೆ ಟೂರ್ನಿಗೆ ಕರ್ನಾಟಕ ತಂಡ ಪ್ರಕಟ: ಹೊಸ ನಾಯಕನ ಆಯ್ಕೆ..!ಸದ್ಯ ಮೊದಲ ಟೆಸ್ಟ್​ ಪಂದ್ಯ ವೀಕ್ಷಣೆಗೆ ಅಭಿಮಾನಿಗಳ ಪ್ರವೇಶ ಸಂಪೂರ್ಣ ರದ್ದು ಮಾಡಲಾಗಿದ್ದು, ಎರಡನೇ ಟೆಸ್ಟ್​ನಲ್ಲಿ ಶೇ. 50ರಷ್ಟು ಮಂದಿ ಪ್ರವೇಶ ಪಡೆಯಬಹುದು. ಇನ್ನು ಮೊಟೆರಾದಲ್ಲಿ ನಡೆಯುವ ಪಂದ್ಯಕ್ಕೆ ಶೇ.50 ರಷ್ಟು ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಬಹುದು.
Published by: Vinay Bhat
First published: February 2, 2021, 10:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories