India Vs England| ಕ್ರಿಕೆಟ್ ಅಂಗಳದಲ್ಲಿ ಕೊರೋನಾ ಭೀತಿ; ಭಾರತ-ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ ರದ್ದು!
ಆಟಗಾರರ ಡ್ರೆಸ್ಸಿಂಗ್ ರೂಮ್ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗುವ ಭಯದಿಂದಾಗಿ ಈ ಪಂದ್ಯ ರದ್ದುಗೊಳಿಸಲಾಗಿದೆ. ಅಲ್ಲದೆ, ಈ ಪಂದ್ಯವನ್ನು ಮತ್ತೆ ಆಡಿಸುವ ಕುರಿತು ಶೀಘ್ರದಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ ಎಂದು ಇಸಿಬಿ ಮಾಹಿತಿ ನೀಡಿದೆ.
ಮ್ಯಾಂಚೆಸ್ಟರ್ (ಸೆಪ್ಟೆಂಬರ್ 10); ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ಮ್ಯಾಂಚೆಸ್ಟರ್ (Manchester) ಅಂಗಳದಲ್ಲಿ ನಡೆಯಬೇಕಿದ್ದ ನಿರ್ಣಾಯಕ ಟೆಸ್ಟ್ ಪಂದ್ಯ ಈಗಾಗಲೇ ಆರಂಭವಾಗಬೇಕಿತ್ತು. ಆದರೆ, ಕೊರೋನಾ ಭೀತಿಯ (CoronaVirus) ಕಾರಣಕ್ಕೆ ಮಹತ್ವದ ಪಂದ್ಯವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ (ECB and Wales Cricket Board) ಮಂಡಳಿ ರದ್ದು ಮಾಡಿದೆ. ಮೂರನೇ ಟೆಸ್ಟ್ ಪಂದ್ಯದ ವೇಳೆಗೆ ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri) ಸೇರಿದಂತೆ ಮೂವರು ಸಹಾಯಕ ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ಆಗಿತ್ತು. ಅದರ ಬೆನ್ನಿಗೆ ನಿನ್ನೆ ಸಂಜೆ ಜೂನಿಯರ್ ಫಿಸಿಯೋ ಯೋಗೀಶ್ ಪರ್ಮಾರ್ ಅವರಿಗೂ ಕೊರೋನಾ ಪಾಸಿಟಿವ್ ಇರುವುದು ಧೃಡವಾಗಿತ್ತು. ಹೀಗಾಗಿ ಕೊರೋನಾ ಇತರೆ ಆಟಗಾರರಿಗೂ ಹರಡುವ ಸಾಧ್ಯತೆ ಇರುವ ಕಾರಣಕ್ಕೆ ಈ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಬಿಸಿಸಿಐ ಜೊತೆ ಮಾತುಕತೆ ನಡೆಸಿದ ನಂತರ ಈ ಬಗ್ಗೆ ಹೇಳಿಕೆ ನೀಡಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್, "ಇಂಗ್ಲೆಂಡ್ ಮತ್ತು ಭಾರತದ ನಡುವೆ ಇಂದು ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ನಲ್ಲಿ ಆರಂಭವಾಗಬೇಕಿದ್ದ 5ನೇ ಟೆಸ್ಟ್ ಪಂದ್ಯವನ್ನು ಕೊರೋನಾ ಭೀತಿಯ ಕಾರಣಕ್ಕೆ ರದ್ದುಗೊಳಿಸಲಾಗಿದೆ" ಎಂದು ಸ್ಪಷ್ಟನೆ ನೀಡಿದೆ.
ಅಲ್ಲದೆ, ಆಟಗಾರರ ಡ್ರೆಸ್ಸಿಂಗ್ ರೂಮ್ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗುವ ಭಯದಿಂದಾಗಿ ಈ ಪಂದ್ಯ ರದ್ದುಗೊಳಿಸಲಾಗಿದೆ. ಅಲ್ಲದೆ, ಈ ಪಂದ್ಯವನ್ನು ಮತ್ತೆ ಆಡಿಸುವ ಕುರಿತು ಶೀಘ್ರದಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲಾ ಗುತ್ತದೆ" ಎಂದು ಮಾಹಿತಿ ನೀಡಿದೆ.
ಭಾರತೀಯ ಫಿಸಿಯೋಥೆರಪಿಸ್ಟ್ ಯೋಗೇಶ್ ಪರ್ಮಾರ್ ಬುಧವಾರ ಕೋವಿಡ್ ಸೋಂಕಿಗೆ ಒಳಗಾದ ನಂತರ ಇಂದಿನ ಪಂದ್ಯ ನಡೆಯುವ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಇದು ಬಿಸಿಸಿಐ ಮತ್ತು ಇಸಿಬಿಯ ನಡುವೆ ತೀವ್ರ ಚರ್ಚೆಗೆ ಕಾರಣವಾಯಿತು. ಕೊರೋನಾ ವರದಿಗಳನ್ನು ಮುಂದಿಟ್ಟು ಇಂದಿನ ಪಂದ್ಯದಲ್ಲಿ ಭಾರತ ಮೈದಾನಕ್ಕೆ ಇಳಿಯದಿದ್ದರೆ ಪಂದ್ಯದ ಸೋಲು ಒಪ್ಪಿಕೊಳ್ಳುವಂತೆ ಬಿಸಿಸಿಐ ಮೇಲೆ ತಾಕೀತು ಮಾಡಲಾಗಿತ್ತು.
ಸರಣಿ 2-2ರ ಸಮಬಲ ಸಾಧಿಸಿದಂತೆ ಫಲಿತಾಂಶ ನೀಡಲಾಗುವುದು ಎಂದು ಇಸಿಬಿ ಎಚ್ಚರಿಕೆ ನೀಡಿತ್ತು. ಆದರೆ, ಬಿಸಿಸಿಐ ಈ ಮಾತುಕತೆಗೂ ಒಪ್ಪದ ಕಾರಣ ಪಂದ್ಯವನ್ನು ರದ್ದು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ ಈ ಪಂದ್ಯ ನಡೆಯುವ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿನ್ನೆಯೇ ಅನುಮಾನ ವ್ಯಕ್ತಪಡಿಸಿದ್ದರು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ