HOME » NEWS » Sports » CRICKET INDIA VS ENGLAND 4TH TEST DAY 1 LIVE CRICKET SCORE ENG ALL OUT FOR 205 ZP

India vs England 4th Test: ಭಾರತ-ಇಂಗ್ಲೆಂಡ್ ಟೆಸ್ಟ್: ಅಲ್ಪ ಮೊತ್ತಕ್ಕೆ ಆಂಗ್ಲರು ಆಲೌಟ್..!

ಟೀಮ್ ಇಂಡಿಯಾ ಪರ ಅಕ್ಷರ್ ಪಟೇಲ್ 4 ವಿಕೆಟ್ ಪಡೆದು ಮಿಂಚಿದರೆ, 3 ವಿಕೆಟ್ ಉರುಳಿಸಿ ಅಶ್ವಿನ್ ಗಮನ ಸೆಳೆದರು. ಇನ್ನು ಸಿರಾಜ್ 2 ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.

news18-kannada
Updated:March 4, 2021, 4:02 PM IST
India vs England 4th Test: ಭಾರತ-ಇಂಗ್ಲೆಂಡ್ ಟೆಸ್ಟ್: ಅಲ್ಪ ಮೊತ್ತಕ್ಕೆ ಆಂಗ್ಲರು ಆಲೌಟ್..!
ind vs eng
  • Share this:
ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್​ನಲ್ಲಿ 205 ರನ್​ಗಳಿಗೆ ಸರ್ವಪತನ ಕಂಡಿದೆ. ಅಕ್ಷರ್ ಪಟೇಲ್ ಪಟೇಲ್ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ತಡಕಾಡಿದ ಆಂಗ್ಲರು ಮೂರನೇ ಸೆಷನ್ ವೇಳೆಗೆ ಮೊದಲ ಇನಿಂಗ್ಸ್ ಅಂತ್ಯಗೊಳಿಸಿತು.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 30 ರನ್ ಪೇರಿಸುವಷ್ಟರಲ್ಲಿ ಪ್ರಮುಖ ಮೂರು ದೊಡ್ಡ ವಿಕೆಟ್‌ಗಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಜ್ಯಾಕ್ ಕ್ರಾಲೆ (02). ಡೊಮಿನಿಕ್ ಸಿಬ್ಲಿ (09) ಮತ್ತು ನಾಯಕ ಜೋ ರೂಟ್ (05) ಅವರನ್ನು ಟೀಮ್ ಇಂಡಿಯಾ ಬೌಲರುಗಳು ಬೇಗನೆ ಪೆವಿಲಿಯನ್ ಕಡೆ ಕಳುಹಿಸಿ ಆರಂಭಿಕ ಯಶಸ್ಸು ಪಡೆಯಿತು.

6ನೇ ಓವರ್​ನಲ್ಲಿ ಅಕ್ಷರ್ ಪಟೇಲ್ ಮೊದಲ ಯಶಸ್ಸು ತಂದುಕೊಟ್ಟರು. ಅದರ ಬೆನ್ನಲ್ಲೇ ಸಿಬ್ಲಿಯನ್ನು 8ನೇ ಓವರ್​ನಲ್ಲಿ ಔಟ್ ಮಾಡಿ ಅಕ್ಷರ್ ಮತ್ತೊಂದು ವಿಕೆಟ್ ಪಡೆದರು. ಈ ವೇಳೆ ದಾಳಿಗಿಳಿದ ಮೊಹಮ್ಮದ್ ಸಿರಾಜ್ ಅಪಾಯಕಾರಿ ಜೋ ರೂಟ್ ಅವರನ್ನು ಎಲ್​ಬಿಡಬ್ಲ್ಯೂ ಮಾಡಿ ಮಿಂಚಿದರು. ಅಲ್ಲದೆ ತಂಡದ ಮೊತ್ತ 78 ಆಗಿದ್ದ ವೇಳೆ ಕ್ರೀಸ್ ಕಚ್ಚಿ ಆಡುತ್ತಿದ್ದ ಜಾನಿ ಬೈರ್​ಸ್ಟೋ (28) ಅವರನ್ನು ಸಹ ಎಲ್​ಬಿ ಬಲೆಗೆ ಕೆಡವಿ ಸಿರಾಜ್ ಟೀಮ್ ಇಂಡಿಯಾಗೆ ನಾಲ್ಕನೇ ಯಶಸ್ಸು ತಂದಿಟ್ಟರು.

ಈ ಹಂತದಲ್ಲಿ ಜೊತೆಗೂಡಿದ ಬೆನ್ ಸ್ಟೋಕ್ಸ್ ಹಾಗೂ ಒಲಿ ಪೋಪ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಆದರೆ ವಾಷಿಂಗ್ಟನ್ ಸುಂದರ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಸ್ಟೋಕ್ಸ್ (55) ಅರ್ಧಶತಕ ಬಾರಿಸಿ ವಿಕೆಟ್ ಒಪ್ಪಿಸಿದರು. ಸ್ಟೋಕ್ಸ್ ನಿರ್ಗಮನದ ಬೆನ್ನಲ್ಲೇ ಅಶ್ವಿನ್, ಪೋಪ್ (29) ವಿಕೆಟ್ ಪಡೆದರು. ಈ ವೇಳೆ ಕ್ರೀಸ್​ನಲ್ಲಿ ಗಟ್ಟಿಯಾಗಿ ನೆಲೆಯೂರಿದ ಡೇನಿಯಲ್ ಲಾರೆನ್ಸ್​ 46 ರನ್ ಬಾರಿಸಿ ತಂಡದ ಮೊತ್ತವನ್ನು ಹೆಚ್ಚಿಸುವ ಕಾಯಕಕ್ಕೆ ಕೈಹಾಕಿದರು.

ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಲಾರೆನ್ಸ್​ರನ್ನು ಅಕ್ಷರ್ ಪಟೇಲ್ ಎಸೆತದಲ್ಲಿ ರಿಷಭ್ ಪಂತ್ ಸ್ಟಂಪ್ ಮಾಡುವ ಮೂಲಕ ಪೆವಿಲಿಯನ್​ಗೆ ಕಳುಹಿಸಿದರು. ಅಲ್ಲಗೆ 188 ರನ್​ಗಳಿಗೆ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡಾಂತಾಗಿತ್ತು. ಇನ್ನೂರರ ಗಡಿದಾಟುವುದು ಕಷ್ಟಕರ ಎನ್ನಲಾಗಿದ್ದರೂ, ಜ್ಯಾಕ್ ಲೀಚ್ (7) ಹಾಗೂ ಜೇಮ್ಸ್ ಅ್ಯಂಡರ್ಸನ್ (10) ರನ್​ಗಳಿಸುವ ಮೂಲಕ ತಂಡದ ಮೊತ್ತವನ್ನು 205ಕ್ಕೆ ತಂದು ನಿಲ್ಲಿಸಿದರು. ಈ ವೇಳೆ ಲೀಚ್ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಸರ್ವಪತನಕ್ಕೆ ಅಶ್ವಿನ್ ಕಾರಣರಾದರು.
Youtube Video

ಟೀಮ್ ಇಂಡಿಯಾ ಪರ ಅಕ್ಷರ್ ಪಟೇಲ್ 4 ವಿಕೆಟ್ ಪಡೆದು ಮಿಂಚಿದರೆ, 3 ವಿಕೆಟ್ ಉರುಳಿಸಿ ಅಶ್ವಿನ್ ಗಮನ ಸೆಳೆದರು. ಇನ್ನು ಸಿರಾಜ್ 2 ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.
Published by: zahir
First published: March 4, 2021, 4:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories