India vs England 4th T20: ಇಂಗ್ಲೆಂಡ್​ಗೆ 186 ರನ್​ಗಳ ಟಾರ್ಗೆಟ್ ನೀಡಿದ ಭಾರತ

India vs England

India vs England

ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ವೀಕ್ಷೀಸಲು ಪ್ರೇಕ್ಷಕರಿಗೆ ಅವಕಾಶವಿಲ್ಲ. ಗುಜರಾತ್​ನ ವಿವಿಧೆಡೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೀಗಾಗಿ ಟಿ20 ಸರಣಿಯ ಉಳಿದ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ನಿರ್ಬಂಧಿಸಲಾಗಿದೆ. ಹೀಗಾಗಿ ಇಂದು ಭಾರತ-ಇಂಗ್ಲೆಂಡ್ ಖಾಲಿ ಮೈದಾನದಲ್ಲಿ ಮುಖಾಮುಖಿಯಾಗಲಿದೆ.

ಮುಂದೆ ಓದಿ ...
 • Share this:

  ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಇಂಗ್ಲೆಂಡ್ 4ನೇ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಟಾಸ್ ಗೆದ್ದಿರುವ ಇಂಗ್ಲೆಂಡ್ ನಾಯಕ ಇಯಾನ್ ಮೋರ್ಗನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.


  ಅದರಂತೆ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದರು. ಆದಿಲ್ ರಶೀದ್ ಅವರ ಮೊದಲ ಎಸೆತದಲ್ಲೇ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಹಿಟ್​ಮ್ಯಾನ್ ತಂಡದ ಖಾತೆ ತೆರೆದರು. ಹಾಗೆಯೇ 3 ಎಸೆತದಲ್ಲಿ ಮತ್ತೊಂದು ಬೌಂಡರಿ ಬಾರಿಸಿದರು. ಅಲ್ಲದೆ ಮೊದಲ ಓವರ್​ನಲ್ಲಿ 12 ರನ್​ ಕಲೆಹಾಕಿದರು.


  ಹಾಗೆಯೇ ಜೋಫ್ರಾ ಆರ್ಚರ್ ಎಸೆದ 2ನೇ ಓವರ್​ನಲ್ಲಿ ಟೀಮ್ ಇಂಡಿಯಾ ಓಪನರುಗಳು 6 ರನ್​ ಕಲೆಹಾಕಿದರು. ಅದರೊಂದಿಗೆ ತಂಡದ ಮೊತ್ತ 18ಕ್ಕೆ ಬಂದು ನಿಂತಿತು. ನಾಲ್ಕನೇ ಓವರ್​ನಲ್ಲಿ ರೋಹಿತ್ ಶರ್ಮಾ (12) ಜೋಫ್ರಾ ಆರ್ಚರ್​ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು ಚೊಚ್ಚಲ ಬಾರಿ ಟೀಮ್ ಇಂಡಿಯಾ ಪರ ಬ್ಯಾಟಿಂಗ್​ಗೆ ಇಳಿದ ಸೂರ್ಯಕುಮಾರ್ ಯಾದವ್ ಭರ್ಜರಿ ಸಿಕ್ಸರ್​ನೊಂದಿಗೆ ತಮ್ಮ ಅಂತಾರಾಷ್ಟ್ರೀಯ ಖಾತೆ ತೆರೆದಿದ್ದು ವಿಶೇಷ.


  ಅಲ್ಲದೆ ರಾಹುಲ್ ಜೊತೆಗೂಡಿ ಸೂರ್ಯಕುಮಾರ್ ಯಾದವ್ ಪವರ್​ಪ್ಲೇ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 45 ಕ್ಕೆ ತಂದು ನಿಲ್ಲಿಸಿದರು. ಪವರ್​ಪ್ಲೇ ಬಳಿಕ ಸೂರ್ಯ ಅಬ್ಬರಿಸಲಾರಂಭಿಸಿದರೆ, ಕೆಎಲ್ ರಾಹುಲ್ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರು. ಇದಾಗ್ಯೂ 8ನೇ ಓವರ್​ನಲ್ಲಿ ಬೆನ್​ ಸ್ಟೋಕ್ಸ್​ಗೆ ವಿಕೆಟ್ ಒಪ್ಪಿಸಿ ರಾಹುಲ್ (14) ನಿರಾಸೆ ಮೂಡಿಸಿದರು.


  ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (2) ಆದಿಲ್ ರಶೀದ್ ಎಸೆತದಲ್ಲಿ ಮುನ್ನುಗ್ಗಿ ಹೊಡೆಯಲು ಬಂದು ಸ್ಟಂಪ್ ಆಗಿ ಹೊರನಡೆದರು. ಇದರ ಬಳಿಕ ಜೊತೆಯಾಟ ಸೂರ್ಯಕುಮಾರ್ ಯಾದವ್-ರಿಷಭ್ ಪಂತ್ ತಂಡದ ಮೊತ್ತವನ್ನು 10 ಓವರ್​ ಮುಕ್ತಾಯದ ವೇಳೆ 75 ಕ್ಕೇರಿಸಿದರು.


  ಅಲ್ಲದೆ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಸೂರ್ಯುಕುಮಾರ್ ಯಾದವ್ ಬ್ಯಾಟ್ ಮೇಲೆಕ್ಕೆತ್ತಿದರು. ಅದರೊಂದಿಗೆ 13 ಓವರ್​ನಲ್ಲಿ ಟೀಮ್ ಇಂಡಿಯಾ ಸ್ಕೋರ್ 100ರ ಗಡಿದಾಟಿತು. ಆದರೆ 14ನೇ ಓವರ್​ನಲ್ಲಿ ಡೇವಿಡ್ ಮಲಾನ್ ಹಿಡಿದ ಕ್ಯಾಚ್​ಗೆ ಸೂರ್ಯಕುಮಾರ್ ಯಾದವ್ ಹೊರ ನಡೆಯಬೇಕಾಯಿತು. ಚೊಚ್ಚಲ ಬ್ಯಾರಿ ಇಂಡಿಯಾ ಪರ ಬ್ಯಾಟ್ ಬೀಸಿದ ಸೂರ್ಯ 31 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ 57 ರನ್​ ಕಲೆಹಾಕಿದರು.


  ಈ ಹಂತದಲ್ಲಿ ಜೊತೆಗೂಡಿದ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 5ನೇ ವಿಕೆಟ್​ಗೆ 18 ಎಸೆತಗಳಲ್ಲಿ 34 ರನ್​ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು. ಈ ವೇಳೆ ದಾಳಿಗಿಳಿದ ಜೋಫ್ರಾ ಆರ್ಚರ್ ರಿಷಭ್ ಪಂತ್​ (30) ರನ್ನು ಕ್ಲೀನ್ ಬೌಲ್ಡ್ ಮಾಡಿ, ಭಾರತಕ್ಕೆ 5ನೇ ಶಾಕ್ ನೀಡಿದರು.


  ಮತ್ತೊಂದೆಡೆ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ ತಂಡದ ಸ್ಕೋರ್​ ಗಳಿಕೆಯ ವೇಗ ಹೆಚ್ಚಿಸಿದರು. ಅದರಲ್ಲೂ ಜೋರ್ಡನ್​ ಎಸೆದ 18ನೇ ಓವರ್​ನಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗೂಡಿ 18 ರನ್​ಗಳನ್ನು ಕಲೆಹಾಕಿದರು.


  19ನೇ ಓವರ್​ನಲ್ಲಿ ಮಾರ್ಕ್​ವುಡ್ ಕೇವಲ 7 ರನ್​ ನೀಡಿ ಹಾರ್ದಿಕ್ ಪಾಂಡ್ಯ (11) ವಿಕೆಟ್ ಪಡೆದರು. ಅಲ್ಲದೆ ಅಂತಿಮ ಓವರ್​ನ ಮೊದಲ ಎಸೆತದಲ್ಲೇ 18 ಬಾಲ್​ನಲ್ಲಿ 37 ರನ್​ ಬಾರಿಸಿದ್ದ ಶ್ರೇಯಸ್ ಅಯ್ಯರ್ ಅನ್ನು ಔಟ್ ಮಾಡುವಲ್ಲಿ ಜೋಫ್ರಾ ಆರ್ಚರ್ ಯಶಸ್ವಿಯಾದರು. ಕೊನೆಯ ಓವರ್​ನಲ್ಲಿ 11 ರನ್​ ಕಲೆಹಾಕುವ ಮೂಲಕ ಭಾರತ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 185 ರನ್​ ಕಲೆಹಾಕಿತು. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 4 ಓವರ್​ನಲ್ಲಿ 33 ರನ್​ ನೀಡಿ 4 ವಿಕೆಟ್ ಪಡೆದರು.


  ಸ್ಕೋರ್:  ಭಾರತ- 185/8


  ಓವರ್: 20


  ಈಗಾಗಲೇ ಐದು ಪಂದ್ಯಗಳ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿರುವ ಇಂಗ್ಲೆಂಡ್ ತಂಡವು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿದ್ದರೆ, ಟೀಮ್ ಇಂಡಿಯಾ ಇಂದಿನ ಪಂದ್ಯದಲ್ಲಿ ಜಯಗಳಿಸುವ ಮೂಲಕ ಸಮಬಲ ಸಾಧಿಸುವ ಇರಾದೆಯಲ್ಲಿದೆ.


  India vs England 4th T20 Playing 11: ಭಾರತ-ಇಂಗ್ಲೆಂಡ್ 4ನೇ ಟಿ20: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ..!


  ಸರಣಿಯಲ್ಲಿ ಮೂರು ಜಯಗಳು ಮೊದಲು ಬ್ಯಾಟಿಂಗ್ ಮಾಡಿದ ತಂಡಗಳಿಗೆ ಒಲಿದಿರುವುದರಿಂದ ಇಂದು ಕೂಡ ಟಾಸ್ ನಿರ್ಣಾಯಕ ಪಾತ್ರವಹಿಸಲಿದೆ ಎಂದೇ ಹೇಳಬಹುದು. ಏಕೆಂದರೆ ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ ಟಾಸ್ ಗೆಲ್ಲುವ ಮೂಲಕ ಬೌಲಿಂಗ್ ಆಯ್ದುಕೊಂಡಿತು. 2ನೇ ಪಂದ್ಯದಲ್ಲಿ ಭಾರತ ಕೂಡ ಟಾಸ್ ಗೆದ್ದು ಫೀಲ್ಡಿಂಗ್ ತೆಗೆದುಕೊಂಡಿತು. ಹಾಗೆಯೇ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟಾಸ್ ಸೋಲುವ ಮೂಲಕ ಮೊದಲು ಬ್ಯಾಟಿಂಗ್ ಮಾಡುವ ಅನಿವಾರ್ಯ ಒದಗಿತ್ತು. ಈ ಪಂದ್ಯದಲ್ಲಿ ಭಾರತ ಸೋಲನುಭವಿಸಿತು. ಈ ಮೂರು ಪಂದ್ಯಗಳೂ ಚೇಸಿಂಗ್ ಮೂಲಕ ಗೆದ್ದಿರುವ ಕಾರಣ ಇಂದು ಕೂಡ ಟಾಸ್ ಫಲಿತಾಂಶವನ್ನು ನಿರ್ಧರಿಸಲಿದೆ ಎಂದು ಹೇಳಲಾಗುತ್ತಿದೆ.


  ಪಂದ್ಯದ ಸಮಯ: ಸಂಜೆ 7
  ಸ್ಥಳ: ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ.
  ನೇರ ಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಟಿವಿ, ಏರ್​ಟೆಲ್ ಟಿವಿ, ಹಾಟ್​ಸ್ಟಾರ್

  Published by:zahir
  First published: