India vs England 3rd Test| ಮೂರನೇ ಟೆಸ್ಟ್​ ಪಂದ್ಯ; ಆಂಗ್ಲರ ಎದುರು ಅತ್ಯಲ್ಪ ಮೊತ್ತಕ್ಕೆ ಕುಸಿದ ಭಾರತ!

3ನೇ ಟೆಸ್ಟ್ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ಬ್ಯಾಟಿಂಗ್​ಗೆ ಮುಂದಾಗಿತ್ತು. ಆದರೆ, ಯಾವ ಬ್ಯಾಟ್ಸ್​ಮನ್ ಸಹ ನಿರೀಕ್ಷೆಯನ್ನು ಪೂರೈಸಲಿಲ್ಲ. ನೆಲಕಚ್ಚಿ ಆಡಲಿಲ್ಲ. ಎಲ್ಲರೂ ಪೆವಿಲಿಯನ್ ಪೆರೇಡ್ ಮಾಡಿದರು. ಇಂಗ್ಲೆಂಡ್ ದಾಳಿಗೆ ಟೀಂ ಇಂಡಿಯಾ ಅಕ್ಷರಶಃ ಇಂಡಿಯಾ ತತ್ತರಿಸಿತು.

ಭಾರತದ ವಿಕೆಟ್ ಗಳಿಸಿದ ಸಂತಸದಲ್ಲಿ ಆಂಗ್ಲ ಬೌಲರ್​ಗಳು.

ಭಾರತದ ವಿಕೆಟ್ ಗಳಿಸಿದ ಸಂತಸದಲ್ಲಿ ಆಂಗ್ಲ ಬೌಲರ್​ಗಳು.

 • Share this:
  ಲೀಡ್ಸ್​ (ಆಗಸ್ಟ್​. 25); ಆಂಗ್ಲರ ವಿರುದ್ಧದ ಮೊದಲ ಟೆಸ್ಟ್​ (India vs England 3rd Test) ಪಂದ್ಯದಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶ ಇತ್ತು. ಆದರೆ, ಪಂದ್ಯ ಮಳೆಯಿಂದಾಗಿ ಡ್ರಾ ಆಗಿತ್ತು. ಆದರೆ, ಭಾರತ ತಂಡ (Team India) ಎರಡನೇ ಪಂದ್ಯದಲ್ಲಿ ದಶಕಗಳ ನಂತರ ಲಾರ್ಡ್ಸ್​ನಲ್ಲಿ (Lords) ಮೊದಲ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿತ್ತು. ಅಲ್ಲದೆ, ಬ್ಯಾಟ್ಸ್​ಮನ್​ ಗಳು ಆಂಗ್ಲ ಬೌಲರ್​ಗಳ ವಿರುದ್ಧ ಎರಡನೇ ಪಂದ್ಯದಲ್ಲಿ ಪಾರಮ್ಯ ಸಾಧಿಸಿದ್ದರು. ಸ್ವಾಭಾವಿಕವಾಗಿ ಮೂರನೇ ಟೆಸ್ಟ್​ ಪಂದ್ಯದಲ್ಲೂ ಭಾರತವೇ ಗೆಲ್ಲುವ ಫೇವರಿಟ್ ಆಗಿತ್ತು. ಹೀಗಾಗಿ ನಿರೀಕ್ಷೆಗಳೂ ಅಧಿಕವಾಗಿತ್ತು. ಆದರೆ, ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 78 ರನ್‌ಗೆ ಕೊಹ್ಲಿ ತಂಡ ಸರ್ವ ಪತನ ಕಾಣುವ ಮೂಲಕ ನಿರಾಸೆ ಮೂಡಿಸಿದೆ.

  ಇದರೊಂದಿಗೆ 1974ರ ಬಳಿಕ ಇಂಗ್ಲೆಂಡ್ ವಿರುದ್ಧ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಅಪಖ್ಯಾತಿಗೆ ಟೀಂ ಇಂಡಿಯಾ ಗುರಿಯಾಗಿದೆ. 1974ರಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಕೇವಲ 42 ರನ್‌ಗೆ ಆಲೌಟ್ ಆಗಿತ್ತು. ಇದಾದ ಬಳಿಕ ಇಂಗ್ಲೆಂಡ್ ವಿರುದ್ಧ ಟೀಂ ಹಲವು ಪಂದ್ಯಗಳಲ್ಲಿ ಮೇಲು ಗೈ ಸಾಧಿಸಿದೆ. ಭಾರತದ ಬ್ಯಾಟ್ಸ್​ಮನ್​ಗಳು ಇಂಗ್ಲೆಂಡ್ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಆದರೆ, ಇದೀಗ ನಾಯಕ ಕಿಂಗ್ ಕೊಹ್ಲಿ ತಂಡ ಕೇವಲ 78 ರನ್‌ಗೆ ಅಲೌಟ್ ಆಗುವ ಮೂಲಕ ಆಂಗರ ವಿರುದ್ಧ 2ನೇ ಅತೀ ಕಡಿಮೆ ಮೊತ್ತ ದಾಖಲಿಸಿದೆ.

  ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಭಾರತ ದಾಖಲಿಸಿದ ಅತ್ಯಲ್ಪ ಮೊತ್ತಗಳ ವಿವರ;

  75v ವೆಸ್ಟ್ ಇಂಡೀಸ್ (ದೆಹಲಿ, 1987/88)

  76v ಸೌತ್ ಆಫ್ರಿಕಾ (ಅಹಮ್ಮದಾಬಾದ್ 2007/08) 78 v ಇಂಗ್ಲೆಂಡ್​ (ಲೀಡ್ 20211)

  83 v ನ್ಯೂಜಿಲೆಂಡ್ (ಮೊಹಾಲಿ 1999/00)

  3ನೇ ಟೆಸ್ಟ್ ಪಂದ್ಯದಲ್ಲಿ ಟಾಸ್​ ಗೆದ್ದ ಭಾರತ ಬ್ಯಾಟಿಂಗ್​ಗೆ ಮುಂದಾಗಿತ್ತು. ಆದರೆ, ಯಾವ ಬ್ಯಾಟ್ಸ್​ಮನ್ ಸಹ ನಿರೀಕ್ಷೆಯನ್ನು ಪೂರೈಸಲಿಲ್ಲ. ನೆಲಕಚ್ಚಿ ಆಡಲಿಲ್ಲ. ಎಲ್ಲರೂ ಪೆವಿಲಿಯನ್ ಪೆರೇಡ್ ಮಾಡಿದರು. ಇಂಗ್ಲೆಂಡ್ ದಾಳಿಗೆ ಟೀಂ ಇಂಡಿಯಾ ಅಕ್ಷರಶಃ ಇಂಡಿಯಾ ತತ್ತರಿಸಿತು. ರೋಹಿತ್ ಶರ್ಮಾ 19 ದಾಖಲಿಸಿರುವುದು ಅತ್ಯಧಿಕ ವ್ಯಯಕ್ತಿಕ ಮೊತ್ತವಾಗಿದೆ. ಇನ್ನೂ ಕಳೆದ ಪಂದ್ಯದಲ್ಲಿ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾಗಿದ್ದ ಕನ್ನಡಿಗ ಕೆಎಲ್ ರಾಹುಲ್ ಶೂನ್ಯ ಸಾಧನೆ ಮಾಡಿದ್ದರೆ, ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್ ಪೂಜಾರ 1 ರನ್​ ಗಳಿಗೆ ತೃಪ್ತಿಪಟ್ಟಿದ್ದಾರೆ.

  ಇದನ್ನೂ ಓದಿ: Basavaraja Bommai| ರೈತರ ಆದಾಯ ದ್ವಿಗುಣ, ಕಾರ್ಯತಂತ್ರ ರೂಪಿಸಲು ರೈತರ ಸಮಿತಿ ರಚನೆ; ಸಿಎಂ ಘೋಷಣೆ

  ನಾಯಕ ವಿರಾಟ್ ಕೊಹ್ಲಿ 7, ಅಜಿಂಕ್ಯಾ ರಹಾನೆ 18, ರಿಷಬ್ ಪಂತ್ 2 ಹಾಗೂ ರವೀಂದ್ರ ಜಡೇಜಾ 4 ಗಳಿಸುವುದರ ಜೊತೆಗೆ ಭಾರತ ಸರ್ವ ಪತನ ಅನುಭವಿಸಿದೆ. ಈ ಮೂಲಕ ಟೀಂ ಇಂಡಿಯಾ ಕೇವಲ 78ರನ್‌ಗೆ ಆಲೌಟ್​ ಆಗಿದೆ. ಇಂಗ್ಲೆಂಡ್ ಪರ ಜೇಮ್ಸ್​ ಆಂಡರ್ಸನ್, ಕ್ರೈಗ್​ ಓವರ್ಟನ್ ತಲಾ 3, ರಾಬಿನ್ಸನ್  2, ಸ್ಯಾಮ್ ಕರನ್ 2 ವಿಕೆಟ್ ಕಬಳಿಸಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: