India vs England 3rd Test| ಭಾರತಕ್ಕೆ ಇನ್ನಿಂಗ್ಸ್​ 76 ರನ್​ ಸೋಲು; ಸರಣಿ ಸಮಬಲ ಸಾಧಿಸಿದ ಆಂಗ್ಲರು

ನಾಲ್ಕನೇ ದಿನದ ಆಟದ ಮೊದಲ 10 ಓವರ್​ನಲ್ಲೇ ಎಲ್ಲಾ 8 ವಿಕೆಟ್​ ಕಳೆದುಕೊಳ್ಳುವ ಮೂಲಕ ಭಾರತ ತಂಡ ಹೀನಾಯ ಸೋಲನುಭವಿಸಿದೆ. ದಶಕಗಳ ನಂತರ ಇಂಗ್ಲೆಂಡ್​ನಲ್ಲಿ ಟೆಸ್ಟ್​ ಸರಣಿ ಗೆಲ್ಲುವ ತನ್ನ ಕನಸಿಗೆ ತಾನೇ ತಣ್ಣೀರೆರಚಿಕೊಂಡಿದೆ.

ಗೆಲುವಿನ ಸಂಭ್ರದಲ್ಲಿ ಇಂಗ್ಲೆಂಡ್ ತಂಡ.

ಗೆಲುವಿನ ಸಂಭ್ರದಲ್ಲಿ ಇಂಗ್ಲೆಂಡ್ ತಂಡ.

 • Share this:
  ಹೆಡಿಂಗ್ಲೆ​ (ಆಗಸ್ಟ್​ 28); ಮಹತ್ವದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ (India vs England 3rd test) ವಿರುದ್ಧ ಹೀನಾಯ ಸೋಲನುಭವಿಸಿದೆ. ಬ್ಯಾಟ್ಸ್​ಮನ್​ಗಳ ಭಾರೀ ವೈಫಲ್ಯದ ಪರಿಣಾಮ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಇನ್ನಿಂಗ್ಸ್​ ಮತ್ತು 76 ರನ್​ಗಳ ಸೋಲನುಭವಿಸಿದೆ. ಪರಿಣಾಮ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆಂಗ್ಲರು ಸಮಬಲ ಸಾಧಿಸಿತ್ತು. ಮುಂದಿನ ಎರಡು ಪಂದ್ಯಗಳು ಭಾರೀ ಮಹತ್ವ ಪಡೆದುಕೊಂಡಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಅಲ್ಪ ಮೊತ್ತಕ್ಕೆ ಕುಸಿದಿತ್ತು. ಕೇವಲ 78 ರನ್​ಗಳಿಗೆ ಸರ್ವ ಪತನ ಕಂಡಿತ್ತು. ಆದರೆ, ಮೊದಲ ಇನ್ನಿಂಗ್ಸ್​ನಲ್ಲಿ ಹಿಮಾಲಯ ರನ್ ಪೇರಿಸಿದ್ದ ಇಂಗ್ಲೆಂಡ್ 432 ರನ್​ಗಳನ್ನು ಪೇರಿಸುವ ಮೂಲಕ ಭಾರೀ ಮುನ್ನಡೆ ಗಳಿಸಿತ್ತು. ಆದರೆ, ಎರಡೇ ಇನ್ನಿಂಗ್ಸ್​ನಲ್ಲೂ ಭಾರತದ ಬ್ಯಾಟ್ಸ್​ಮನ್​ಗಳು ವೈಫಲ್ಯ ಅನುಭವಿಸಿದ್ದು ಸೋಲಿಗೆ ಮುಖ್ಯ ಕಾರಣವಾಗಿದೆ.

  ಅಸಲಿಗೆ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ಉತ್ತಮ ಆರಂಭವನ್ನೇ ಪಡೆದಿತ್ತು. ಆರಂಭಿಕ ಕೆ.ಎಲ್. ರಾಹುಲ್ ಕೇವಲ 8 ರನ್​ಗಳಿಗೆ ಆಟ ಕಳೆದುಕೊಂಡಿದ್ದರೂ ಸಹ ರೋಹಿತ್ ಶರ್ಮಾ ಮತ್ತು ಚೇತೇಶ್ವರ ಪೂಜಾರ ಉತ್ತಮ ಇನ್ನಿಂಗ್ಸ್​ ಕಟ್ಟಿದ್ದರು. ಈ ಜೋಡಿ 82 ರನ್​ಗಳ ಅಮೂಲ್ಯ ಜೊತೆಯಾಟ ನೀಡಿತ್ತು. ರೋಹಿತ್​ ಶರ್ಮಾ 59 ರನ್​ ಗಳಿಸಿ ಆಟ ಕಳೆದುಕೊಂಡರೂ ಸಹ ನಂತರ ಪೂಜಾರ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಉತ್ತಮ ಜೊತೆಯಾಟ ನೀಡಿದ್ದರು.

  ಈ ಜೊಡಿ ಮುರಿಯದ ಮೂರನೇ ವಿಕೆಟ್​ಗೆ 99 ರನ್​ ರನ್ ಪೇರಿಸಿತ್ತು. ಪರಿಣಾಮ ಮೂರನೇ ದಿನದ ಆಟದ ಅಂತ್ಯದ ವೇಳೆಗೆ ಭಾರತ ಕೇವಲ 2 ವಿಕೆಟ್​ ಕಳೆದುಕೊಂಡು 215 ರನ್​ ಗಳಿಸಿತ್ತು. ಹೀಗಾಗಿ ನಾಲ್ಕನೇ ದಿನದ ಆಟದಲ್ಲಿ ಉತ್ತಮ ರನ್ ಪೇರಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಸಾಧ್ಯತೆ ಭಾರತ ತಂಡದ ಮುಂದೆ ಇತ್ತು. ಆದರೆ, ಇಂದು ನಾಲ್ಕನೇ ದಿನದ ಆಟದ ಮೊದಲ 10 ಓವರ್​ನಲ್ಲೇ ಎಲ್ಲಾ 8 ವಿಕೆಟ್​ ಕಳೆದುಕೊಳ್ಳುವ ಮೂಲಕ ಭಾರತ ತಂಡ ಹೀನಾಯ ಸೋಲನುಭವಿಸಿದೆ. ದಶಕಗಳ ನಂತರ ಇಂಗ್ಲೆಂಡ್​ನಲ್ಲಿ ಟೆಸ್ಟ್​ ಸರಣಿ ಗೆಲ್ಲುವ ತನ್ನ ಕನಸಿಗೆ ತಾನೇ ತಣ್ಣೀರೆರಚಿಕೊಂಡಿದೆ.

  ಬ್ಯಾಟಿಂಗ್ ಸತತ ವೈಫಲ್ಯ:

  ಆಂಗ್ಲರ ನಾಡಿನಲ್ಲಿ ಭಾರತದ ಬೌಲರ್​ಗಳು ಈ ಟೆಸ್ಟ್​ ಸರಣಿಯಲ್ಲಿ ಉತ್ತಮ ನಿರ್ವಹಣೆ ತೋರಿದ್ದಾರೆ. ವೇಗದ ಬೌಲರ್​ಗಳಾದ ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್​ ಬುಮ್ರಾ ಸತತ ವಿಕೆಟ್ ಕಬಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ದಶಕಗಳ ನಂತರ ಲಾರ್ಡ್ಸ್​ನಲ್ಲಿ ಭಾರತ ಟೆಸ್ಟ್​ ಪಂದ್ಯ ಗೆದ್ದದ್ದಕ್ಕೆ ಈ ಬೌಲರ್​ಗಳ ಕೊಡುಗೆ ಅಪಾರ. ಆದರೆ, ಬ್ಯಾಟ್ಸ್​ಮನ್​ಗಳು ಮಾತ್ರ ಸತತ ವೈಫಲ್ಯವನ್ನು ಅನುಭವಿಸುತ್ತಿರುವುದು ತಂಡದ ತಲೆನೋವಿಗೆ ಕಾರಣವಾಗಿದೆ.

  ಇದನ್ನೂ ಓದಿ: Bhavinaben Patel: ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕದ ಭರವಸೆ ಹಸಿರಾಗಿಸಿದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಪಟೇಲ್!

  ಆರಂಭಿಕರಾಗಿ ಕೆ.ಎಲ್​. ರಾಹುಲ್ ಮತ್ತು ರೋಹಿತ್​ ಶರ್ಮಾ ಉತ್ತಮ ಫಾರ್ಮ್​ನಲ್ಲಿ ಇದ್ದರೂ ಸಹ ಅವರ ಬ್ಯಾಟಿಂಗ್ ನಿರ್ವಹಣೆಯನ್ನು ಅಸ್ಥಿರತೆ ಕಾಡುತ್ತಿದೆ. ಇಬ್ಬರೂ ಸಹ ಒಂದು ಪಂದ್ಯದಲ್ಲಿ ಉತ್ತಮವಾಗಿ ಆಡದರೆ, ಮತ್ತೊಂದು ಪಂದ್ಯದಲ್ಲಿ ವಿಫಲರಾಗು ತ್ತಿದ್ದಾರೆ. ಇನ್ನೂ ಮಂದ್ಯಮ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರಿ, ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ಅಜಿಂಕ್ಯಾ ರಹಾನೆ ಮೂವರೂ ರನ್ ಬರ ಎದುರಿಸುತ್ತಿದ್ದಾರೆ.

  ಕೆಳ ಕ್ರಮಾಂಕದಲ್ಲಿ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಮೇಲೆ ಹೆಚ್ಚಿನ ನಿರೀಕ್ಷೆಗಳು ಇಲ್ಲದಾಗಿದೆ. ಭಾರತ ಬ್ಯಾಟಿಂಗ್ ಪಡೆ ಈ ಮಟ್ಟದ ವಿಫಲ ಪ್ರದರ್ಶನ ನೀಡುತ್ತಿರುವುದೇ ಭಾರತದ ಸೋಲಿಗೆ ಕಾರಣವಾಗಿದೆ. ಹೀಗಾಗಿ ಮುಂದಿನ ಎರಡು ಟೆಸ್ಟ್​ ಪಂದ್ಯದಲ್ಲಿ ಭಾರತದ ಬ್ಯಾಟ್ಸ್​ಮನ್​ಗಳು ಉತ್ತಮ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ, ದಶಕಗಳ ನಂತರ ಆಂಗ್ಲರ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲುವ ಭಾರತ ಮಹತ್ವಾಕಾಂಕ್ಷೆ ಮಣ್ಣುಪಾಲಾಗುವುದು ಖಚಿತ.
  Published by:MAshok Kumar
  First published: