India vs England 2nd T20: ಭಾರತಕ್ಕೆ ಸ್ಪರ್ಧಾತ್ಮಕ ಸವಾಲು ನೀಡಿದ ಇಂಗ್ಲೆಂಡ್..!

ಕೆ.ಎಲ್. ರಾಹುಲ್ , ಇಶಾನ್ ಕಿಶನ್ , ವಿರಾಟ್ ಕೊಹ್ಲಿ (ನಾಯಕ) , ರಿಷಭ್ ಪಂತ್ (ವಿಕೆಟ್ ಕೀಪರ್) , ಶ್ರೇಯಸ್ ಅಯ್ಯರ್ , ಸೂರ್ಯಕುಮಾರ್ ಯಾದವ್ , ಹಾರ್ದಿಕ್ ಪಾಂಡ್ಯ

India vs England

India vs England

 • Share this:
  ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ 165 ರನ್​ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ  ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸರ್ಮಥಿಸುವಂತೆ ಮೊದಲ ಓವರ್​ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ ಮೂರನೇ ಎಸೆತದಲ್ಲಿ ಜೋಸ್ ಬಟ್ಲರ್​ನ್ನು ಎಲ್​ಬಿಡಬ್ಲ್ಯೂ ಮಾಡಿ ಶೂನ್ಯದೊಂದಿಗೆ ಪೆವಿಲಿಯನ್​ಗೆ ಕಳುಹಿಸಿದರು.

  ಇದಾಗ್ಯೂ ಪವರ್​ಪ್ಲೇನಲ್ಲಿ 44 ರನ್​ ಕಲೆಹಾಕಿದ ಜೇಸನ್ ರಾಯ್-ಡೇವಿಡ್ ಮಲಾನ್ ಜೋಡಿ, ಇಂಗ್ಲೆಂಡ್​ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು.  ಪವರ್ ಪ್ಲೇ ಬಳಿಕ ಕೊಂಚ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಸ್ಪಿನ್ನರ್ ಯಜ್ವೇಂದ್ರ ಚಹಲ್ ಹಾಗೂ ಮಧ್ಯಮ ವೇಗಿ ಹಾರ್ದಿಕ್ ಪಾಂಡ್ಯ ರನ್​ ಗತಿಯನ್ನು ನಿಯಂತ್ರಿಸಿದರು.

  ಅಲ್ಲದೆ ಚಹಲ್ ತಮ್ಮ 2ನೇ ಓವರ್​ನಲ್ಲಿ ಅಪಾಯಕಾರಿ ಬ್ಯಾಟ್ಸ್​ಮನ್​ ಡೇವಿಡ್ ಮಲಾನ್ (24) ಅವರನ್ನು ಎಲ್​ಬಿಗೆ ಕೆಡವಿ ಟೀಮ್ ಇಂಡಿಯಾಗೆ 2ನೇ ಯಶಸ್ಸು ತಂದುಕೊಟ್ಟರು. ಆದರೆ ಮತ್ತೊಂದೆಡೆ ಜೇಸನ್ ರಾಯ್ ಆರ್ಭಟ ಮುಂದುವರೆದಿತ್ತು.

  ಟೀಮ್ ಇಂಡಿಯಾ ಬೌಲರುಗಳನ್ನು ಆತ್ಮ ವಿಶ್ವಾಸದಿಂದಲೇ ಎದುರಿಸಿದ ರಾಯ್ ಮೊದಲ ಹತ್ತು ಓವರ್​ನಲ್ಲಿ 2 ಸಿಕ್ಸ್ ಹಾಗೂ 4 ಬೌಂಡರಿಗಳನ್ನು ಬಾರಿಸಿದರು. ಪರಿಣಾಮ 10 ಓವರ್​ ಮುಕ್ತಾಯಕ್ಕೆ ಇಂಗ್ಲೆಂಡ್ ತಂಡದ ಮೊತ್ತವು 83ಕ್ಕೆ ಬಂದು ನಿಂತಿತು.

  ಆದರೆ ಪಂದ್ಯದ 12ನೇ ಓವರ್​ನಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಜೇಸನ್ ರಾಯ್ (46) ಭುವನೇಶ್ವರ್ ಕುಮಾರ್ ಹಿಡಿದ ಉತ್ತಮ ಕ್ಯಾಚ್​ಗೆ ಬಲಿಯಾಗಬೇಕಾಯಿತು.

  12.2 ಓವರ್​ನಲ್ಲಿ ನೂರು ರನ್​ಗಳ ಗಡಿದಾಟಿದ ಇಂಗ್ಲೆಂಡ್​ಗೆ ಈ ಹಂತದಲ್ಲಿ ನಾಯಕ ಇಯಾನ್ ಮೋರ್ಗನ್ ಹಾಗೂ ಜಾನಿ ಬೈರ್​ಸ್ಟೋವ್ ಆಸೆಯಾಗಿ ನಿಂತರು.

  ಅದರಲ್ಲೂ ಬೈರ್​ಸ್ಟೋವ್ ಬಿರುಸಿನ ಆಟಕ್ಕೆ ಮುಂದಾದರು. ಅದರಂತೆ ಒಂದು ಸಿಕ್ಸರ್ ಹಾಗೂ ಒಂದು ಫೋರ್​ನೊಂದಿಗೆ 20 ರನ್​ಗಳಿಸಿದರು. ಈ ವೇಳೆ ವಾಷಿಂಗ್ಟನ್​ ಸುಂದರ್​ ಎಸೆತವನ್ನು ಸಿಕ್ಸರ್​ಗಟ್ಟಲು ಯತ್ನಿಸಿ ಸೂರ್ಯಕುಮಾರ್ ಯಾದವ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

  ಇನ್ನು 15 ಓವರ್ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡವು 129 ರನ್​ ಕಲೆಹಾಕಿತ್ತು. 16ನೇ ಓವರ್​ನಲ್ಲಿ ಮತ್ತೆ ದಾಳಿಗಿಳಿದ ಭುವನೇಶ್ವರ್ ಕುಮಾರ್ 7 ರನ್​ ಮಾತ್ರ ನೀಡಿದರು. ಹಾಗೆಯೇ ಹಾರ್ದಿಕ್ ಪಾಂಡ್ಯ 17ನೇ ಓವರ್​ನಲ್ಲಿ  ಕೇವಲ 6 ರನ್​ ನೀಡುವಲ್ಲಿ ಯಶಸ್ವಿಯಾದರು. 17 ಓವರ್ ಮುಕ್ತಾಯದ ವೇಳೆಗೆ ಇಂಗ್ಲೆಂಡ್ ತಂಡದ ಮೊತ್ತ 142.

  18ನೇ ಓವರ್​ ಎಸೆದ ಶಾರ್ದುಲ್ ಠಾಕೂರ್ ಮೊದಲ ಎಸೆತದಲ್ಲೇ ಇಯಾನ್ ಮೋರ್ಗನ್ (28) ವಿಕೆಟ್ ಪಡೆಯುವಲ್ಲಿ ಯಶಸ್ಸಿಯಾದರು. ಅಲ್ಲದೆ ಈ ಓವರ್​ನಲ್ಲಿ ನೀಡಿದ್ದು 7 ರನ್​ಗಳನ್ನು ಮಾತ್ರ.  18.1 ಓವರ್​ನಲ್ಲಿ 150 ರನ್​ಗಳ ಗಡಿದಾಟಿಸಿದ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳು ಭುವನೇಶ್ವರ್ ಕುಮಾರ್ ಎಸೆದ 19ನೇ ಓವರ್​ನಲ್ಲಿ 9 ರನ್​ ಕಲೆಹಾಕುವಲ್ಲಿ ಶಕ್ತರಾದರು. ಇನ್ನು ಶಾರ್ದುಲ್ ಠಾಕೂರ್ ಅಂತಿಮ ಓವರ್​ನಲ್ಲಿ ಬೆನ್ ಸ್ಟೋಕ್ಸ್​ (24) ವಿಕೆಟ್ ಪಡೆದರಲ್ಲದೆ, ನೀಡಿದ್ದು ಕೇವಲ 6 ರನ್​ಗಳು ಮಾತ್ರ.

  ಕೊನೆಯ ಓವರ್​ಗಳಲ್ಲಿ ಟೀಮ್ ಇಂಡಿಯಾ ಬೌಲರುಗಳ ಪರಾಕ್ರಮದ ಮುಂದೆ ಮಂಡಿಯೂರಿದ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳು ಅಂತಿಮವಾಗಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್​ಗಳನ್ನು ಕಲೆಹಾಕಿತು.

  ಟೀಮ್ ಇಂಡಿಯಾ ಪರ ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್ ತಲಾ 2 ವಿಕೆಟ್ ಪಡೆದರೆ, ಚಹಲ್ ಹಾಗೂ ಭುವನೇಶ್ವರ್ ಕುಮಾರ್ ಒಂದು ವಿಕೆಟ್ ಪಡೆದರು.

  India vs England Playing 11: ಭಾರತ-ಇಂಗ್ಲೆಂಡ್ ಟಿ20: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ..!

  Team India:  ಕೆ.ಎಲ್. ರಾಹುಲ್ , ಇಶಾನ್ ಕಿಶನ್ , ವಿರಾಟ್ ಕೊಹ್ಲಿ (ನಾಯಕ) , ರಿಷಭ್ ಪಂತ್ (ವಿಕೆಟ್ ಕೀಪರ್) , ಶ್ರೇಯಸ್ ಅಯ್ಯರ್ , ಸೂರ್ಯಕುಮಾರ್ ಯಾದವ್ , ಹಾರ್ದಿಕ್ ಪಾಂಡ್ಯ , ವಾಷಿಂಗ್ಟನ್ ಸುಂದರ್ , ಶಾರ್ದುಲ್ ಠಾಕೂರ್ , ಭುವನೇಶ್ವರ್ ಕುಮಾರ್ , ಯಜ್ವೇಂದ್ರ ಚಹಲ್

  England: ಜೇಸನ್ ರಾಯ್ , ಜೋಸ್ ಬಟ್ಲರ್ (ವಿಕೆಟ್ ಕೀಪರ್) , ಡೇವಿಡ್ ಮಲನ್ , ಜಾನಿ ಬೈರ್‌ಸ್ಟೋವ್ , ಇಯೊನ್ ಮೋರ್ಗಾನ್ (ನಾಯಕ) , ಬೆನ್ ಸ್ಟೋಕ್ಸ್ , ಸ್ಯಾಮ್ ಕರ್ರನ್ , ಜೋಫ್ರಾ ಆರ್ಚರ್ , ಟಾಮ್ ಕುರ್ರನ್ , ಕ್ರಿಸ್ ಜೋರ್ಡಾನ್ , ಆದಿಲ್ ರಶೀದ್
  Published by:zahir
  First published: