ಭಾರತ-ಇಂಗ್ಲೆಂಡ್ ನಡುವೆ ಪುಣೆಯಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದ ವೇಳೆ ಆಲ್ರೌಂಡರ್ ಬೆನ್ ಸ್ಟೋಕ್ಸ್ಗೆ ಆನ್-ಫೀಲ್ಡ್ ಅಂಪೈರ್ ಎಚ್ಚರಿಕೆ ನೀಡಿರುವ ಘಟನೆ ನಡೆದಿದೆ. ಪಂದ್ಯದ ನಾಲ್ಕನೇ ಓವರ್ ವೇಳೆ ಚೆಂಡು ಬೆನ್ ಸ್ಟೋಕ್ಸ್ ಕೈ ಸೇರಿತ್ತು. ಈ ವೇಳೆ ಸ್ಟೋಕ್ಸ್ ಚೆಂಡಿಗೆ ಎಂಜಲು ಸವರಿದರು. ಆದರೆ ಕೊರೋನಾ ಕಾರಣದಿಂದ ಚೆಂಡಿಗೆ ಎಂಜಲು ಸವರುವುದು ನಿಷೇಧಿಸಲಾಗಿದೆ. ಇದಾಗ್ಯೂ ಬಾಲ್ಗೆ ಎಂಜಲು ಹಾಕಿದ ಬೆನ್ ಸ್ಟೋಕ್ಸ್ಗೆ ಅಂಪೈರ್ ಎಚ್ಚರಿಕೆ ನೀಡಿದರು.
ಕಳೆದ ಒಂದು ವರ್ಷದಿಂದ ಚೆಂಡಿಗೆ ಎಂಜಲು ಸವರುವುದನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನಿಷೇಧಿಸಲಾಗಿದೆ. ಇದಾಗ್ಯೂ ಎಂಜಲು ಸವರಿದರೆ ಎದುರಾಳಿ ತಂಡಕ್ಕೆ ಪೆನಾಲ್ಟಿ ರನ್ ನೀಡಲಾಗುತ್ತದೆ. ಈ ಬಗ್ಗೆ ಬೆನ್ ಸ್ಟೋಕ್ಸ್ಗೆ ಎಚ್ಚರಿಕೆ ನೀಡಿದ ಆನ್-ಫೀಲ್ಡ್ ಅಂಪೈರ್, ಬಳಿಕ ನಾಯಕ ಜೋಸ್ ಬಟ್ಲರ್ಗೆ 2ನೇ ಬಾರಿ ಪುನಾರಾರ್ವತಿಸಿದರೆ ಪೆನಾಲ್ಟಿಯಾಗಿ ಭಾರತಕ್ಕೆ 5 ರನ್ ನೀಡುವುದು ಎಚ್ಚರಿಸಿದರು.
ಅಲ್ಲದೆ ಬೆನ್ ಸ್ಟೋಕ್ಸ್ ಎಂಜಲು ಸವರಿದ ಚೆಂಡನ್ನು ಸ್ಯಾನಿಟೈಸ್ ಮಾಡಿ ಸ್ವಚ್ಛಗೊಳಿಸಿ ಪಂದ್ಯವನ್ನು ಮುಂದುವರೆಸಲಾಯಿತು. ಕಳೆದ ಐಪಿಎಲ್ ಟೂರ್ನಿ ವೇಳೆಯೂ ಈ ನಿಯಮವನ್ನು ಜಾರಿಗೊಳಿಸಲಾಗಿತ್ತು. ಇದೇ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದ ರಾಬಿನ್ ಉತ್ತಪ್ಪ ಎಂಜಲು ಸವರಲು ಮುಂದಾಗಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ