ಬೆಂಗಳೂರು (ಫೆ. 04): ದೇಶದಲ್ಲಿ ಕೋವಿಡ್ ಬಿಸಿ ತಣ್ಣಗಾಗುತ್ತಿದ್ದಂತೆ ಸುಮಾರು ಒಂದು ವರ್ಷದ ಬಳಿಕ ಭಾರತದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಮತ್ತೆ ಚಾಲನೆ ಸಿಗುತ್ತಿದೆ. ಪ್ರವಾಸಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ನಾಳೆ (ಫೆ. 05) ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೇರಲು ಉಭಯ ತಂಡಗಳು ಇಲ್ಲಿ ಹೋರಾಟ ನಡೆಸಲಿವೆ. ಇದರ ಜೊತೆಗೆ ಅನೇಕ ವಿಚಾರಗಳಿಗೆ ಈ ಟೆಸ್ಟ್ ಸರಣಿ ಮಹತ್ವದ ಪಡೆದಿದೆ.
ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿ ಆತ್ಮವಿಶ್ವಾಸದಲ್ಲಿದ್ದರೆ, ಇತ್ತ ಆಂಗ್ಲರು ಶ್ರೀಲಂಕಾ ವಿರುದ್ಧ ಕ್ಲೀನ್ ಸ್ವಿಪ್ ಮಾಡಿ ಪರಾಕ್ರಮ ಮೆರೆದು ಭರ್ಜರಿ ಫಾರ್ಮ್ನಲ್ಲಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಮ್ಬ್ಯಾಕ್ ಮಾಡಿದ್ದು ತಂಡದ ಆತ್ವವಿಶ್ವಾಸ ಮತ್ತಷ್ಟು ಹೆಚ್ಚಿದೆ.
India Playing XI: 2 ಸ್ಟಾರ್ ಆಟಗಾರರಿಗಿಲ್ಲ ಅವಕಾಶ: ಮೊದಲ ಟೆಸ್ಟ್ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ
ಇನ್ನೂ ಕೊರೋನಾ ವೈರಸ್ ಪ್ರಕರಣಗಳು ಭಾರತದಲ್ಲಿ ಗಣನೀಯ ಮಟ್ಟದಲ್ಲಿ ಕಡಿಮೆ ಆಗದ ಕಾರಣ ಪ್ರೇಕ್ಷಕರ ಪ್ರವೇಶಕ್ಕೆ ತಮಿಳುನಾಡು ಸರ್ಕಾರ ಅವಕಾಶ ನೀಡುತ್ತಿಲ್ಲ. ಆದರೆ, ಭಾರತೀಯ ಕ್ರಿಕೆಟ್ ಮಂಡಳಿ ಹಾಗೂ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಮಧ್ಯೆ ನಡೆದ ಮಾತುಕತೆ ಯಶಸ್ವಿಯಾಗಿ ಎರಡನೇ ಟೆಸ್ಟ್ ಪಂದ್ಯ ವೀಕ್ಷಣೆ ಮಾಡಲು ಶೇ. 50ರಷ್ಟು ಕ್ರೀಡಾಭಿಮಾನಿಗಳಿಗೆ ಅವಕಾಶ ನೀಡಲಾಗಿದೆ.
ದ್ವಿತೀಯ ಟೆಸ್ಟ್ ಪಂದ್ಯದ ಮೂಲಕ ವೀಕ್ಷಕರಿಗೆ ಮಾತ್ರವಲ್ಲದೆ ಮಾಧ್ಯಮದವರಿಗೆ ಸ್ಟೇಡಿಯಂ ಬಾಗಿಲು ತೆರೆಯಲ್ಪಡಲಿದೆ. ಇದರೊಂದಿಗೆ ಕೊರೋನೋತ್ತರದ ಬಳಿಕ ಮೊದಲ ಬಾರಿಗೆ ಭಾರತದ ಅಂತರಾಷ್ಟ್ರೀಯ ಪಂದ್ಯದಲ್ಲಿ ಕ್ರೀಡಾಂಗಣ ಪ್ರವೇಶಕ್ಕೆ ಪ್ರೇಕ್ಷಕರಿಗೆ ಅನುಮತಿ ಲಭಿಸಿದಂತಾಗುತ್ತದೆ.
ನಾಳೆಯಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯ ಎಲ್ಲಿ?, ಎಷ್ಟು ಗಂಟೆಗೆ ಯಾವುದರಲ್ಲಿ ನೇರಪ್ರಸಾರ ಎಂಬ ಮಾಹಿತಿ ಇಲ್ಲಿದೆ.
ಎಲ್ಲಿ?: ಫೆಬ್ರವರಿ 5, ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣ.
ನಾಳೆಯಿಂದ ಭಾರತ-ಇಂಗ್ಲೆಂಡ್ ಟೆಸ್ಟ್: ನೂತನ ದಾಖಲೆಯ ಹೊಸ್ತಿಲಲ್ಲಿ ಬರೋಬ್ಬರಿ 5 ಆಟಗಾರರು
ನೇರಪ್ರಸಾರ: ಭಾರತ – ಇಂಗ್ಲೆಂಟ್ ಮೊದಲ ಟೆಸ್ಟ್ ಪಂದ್ಯವನ್ನು ನೀವು ಸ್ಟಾರ್ ಸ್ಫೋರ್ಟ್ಸ್ ನೆಟ್ವರ್ಕ್ನಲ್ಲಿ ವೀಕ್ಷಿಸಬಹುದು. ಸ್ಟಾರ್ ಸ್ಪೋರ್ಟ್ಸ್ 1 ಮತ್ತು ಸ್ಟಾರ್ ಸ್ಪೋರ್ಟ್ಸ್ 3ರಲ್ಲಿ ನೇರಪ್ರಸಾರವಾಗಲಿದೆ.
ಇನ್ನೂ ಆನ್ಲೈನ್ನಲ್ಲಾದರೆ ಹಾಟ್ಸ್ಟಾರ್ನಲ್ಲಿ ಲೈವ್ಸ್ಟ್ರೀಮ್ ಆಗಲಿದೆ.
ಸಮಯ: ಭಾರತದ ಕಾಲಮಾನದ ಪ್ರಕಾರ ಪಂದ್ಯ ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ. 9 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಸಂಭಾವ್ಯ ಪ್ಲೇಯಿಂಗ್ ಇಲೆವೆನ್:
ಭಾರತ: ಶುಭ್ಮನ್ ಗಿಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯಾ ರಹಾನೆ (ಉಪ ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ.
ಇಂಗ್ಲೆಂಡ್: ಡಾಮ್ ಸಿಬ್ಲೀ, ಜಾಕ್ ಕ್ರಾವ್ಲಿ, ಜೋ ರೂಟ್ (ನಾಯಕ), ಡ್ಯಾನ್ ಲಾರೆನ್ಸ್, ಬೆನ್ ಫೋಕ್ಸ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್, ಜೋಫ್ರ ಆರ್ಚರ್, ಮೊಯೀನ್ ಅಲಿ, ಜೇಮ್ಸ್ ಆಂಡರ್ಸನ್, ಡಾಮ್ ಬೆಸ್.