HOME » NEWS » Sports » CRICKET INDIA VS ENGLAND 1ST TEST INDIA NEED 381 MORE RUNS TO WIN ZP

India Vs England 1st Test: ಅಶ್ವಿನ್ ಸ್ಪಿನ್ ಮೋಡಿ: ಟೀಮ್ ಇಂಡಿಯಾಗೆ ಗೆಲ್ಲಲು 381 ರನ್​ಗಳ ಅವಶ್ಯಕತೆ

ಮೊದಲ ಇನಿಂಗ್ಸ್​ನ 241 ರನ್​ಗಳ ಹಿನ್ನಡೆಯೊಂದಿಗೆ 420 ರನ್​ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾಗೆ ಆಘಾತ ನೀಡುವಲ್ಲಿ ಜಾಕ್ ಲೀಚ್ ಯಶಸ್ವಿಯಾದರು. ಭಾರತದ 2ನೇ ಇನಿಂಗ್ಸ್​ನ 6 ಓವರ್​ನಲ್ಲಿ ರೋಹಿತ್ ಶರ್ಮಾ (12) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಇಂಗ್ಲೆಂಡ್​ಗೆ ಮೊದಲ ಯಶಸ್ಸು ತಂದುಕೊಟ್ಟರು.

news18-kannada
Updated:February 8, 2021, 5:27 PM IST
India Vs England 1st Test: ಅಶ್ವಿನ್ ಸ್ಪಿನ್ ಮೋಡಿ: ಟೀಮ್ ಇಂಡಿಯಾಗೆ ಗೆಲ್ಲಲು 381 ರನ್​ಗಳ ಅವಶ್ಯಕತೆ
Ashwin
  • Share this:
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯವು ರೋಚಕಘಟ್ಟದತ್ತ ಸಾಗಿದೆ. ಮೊದಲ ಇನಿಂಗ್ಸ್​ನಲ್ಲಿ 578 ರನ್​ ಕಲೆಹಾಕಿದ್ದ ಇಂಗ್ಲೆಂಡ್, ತಂಡ ದ್ವಿತೀಯ ಇನಿಂಗ್ಸ್​ನಲ್ಲಿ ರವಿಚಂದ್ರನ್​ ಅಶ್ವಿನ್ ಸ್ಪಿನ್ ಮೋಡಿಗೆ ನಲುಗಿ ಕೇವಲ 178 ರನ್​ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಮೊದಲ ಇನಿಂಗ್ಸ್​ನ 241 ರನ್​ಗಳ ಮುನ್ನಡೆಯೊಂದಿಗೆ ಟೀಮ್ ಇಂಡಿಯಾಗೆ 420 ರನ್​ಗಳ ಕಠಿಣ ಗುರಿ ನೀಡಿದೆ.

ಪ್ರಥಮ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ನೀಡಿದ 578 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಭಾರತ 337 ರನ್​ಗಳಿಗೆ ಆಲೌಟ್ ಆಗಿತ್ತು. ಬಳಿಕ ದ್ವಿತೀಯ ಇನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ಗೆ ಮೊದಲ ಎಸೆತದಲ್ಲೇ ಅಶ್ವಿನ್ ಆಘಾತ ನೀಡಿದರು. ಆರಂಭಿಕ ಬ್ಯಾಟ್ಸ್‌ಮನ್‌ ರೋರಿ ಬರ್ನ್ಸ್ ಅವರನ್ನು ಮೊದಲ ಎಸೆತದಲ್ಲೇ ಔಟ್‌ ಮಾಡುವ ಮೂಲಕ 114 ವರ್ಷಗಳ ಬಳಿಕ ಟೆಸ್ಟ್​ನಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ದಾಖಲೆಯನ್ನು ಅಶ್ವಿನ್ ನಿರ್ಮಿಸಿದರು.

ಇದರ ಬೆನ್ನಲ್ಲೇ ಡೊಮಿನಿಕ್‌ ಸಿಬ್ಲಿ(16) ಅವರಿಗೂ ಅಶ್ವಿನ್ ಪೆವಿಲಿಯನ್ ಹಾದಿ ತೋರಿಸಿದರು. ಅತ್ತ ಅಶ್ವಿನ್​ಗೆ ಸಾಥ್ ನೀಡಿದ ಇಶಾಂತ್ ಶರ್ಮಾ ಡೇನಿಯಲ್‌ ಲಾರೆನ್ಸ್(18) ವಿಕೆಟ್ ಪಡೆಯುವ ಮೂಲಕ ಟೀಮ್ ಇಂಡಿಯಾಗೆ ಮೂರನೇ ಯಶಸ್ಸು ತಂದುಕೊಟ್ಟರು. 58 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಇಂಗ್ಲೆಂಡ್​ಗೆ ನಾಯಕ ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ಆಸರೆಯಾಗುವ ಸೂಚನೆ ನೀಡಿದರು. ಆದರೆ 7 ರನ್​ಗಳಿಸಿದ್ದ ಸ್ಟೋಕ್ಸ್​ ವಿಕೆಟ್ ಪಡೆಯುವಲ್ಲಿ ಅಶ್ವಿನ್ ಯಶಸ್ವಿಯಾದರು.

ಇದಾಗ್ಯೂ ಮತ್ತೊಂದೆಡೆ ಜೋ ರೂಟ್ ಬಿರುಸಿನ ಆಟ ಪ್ರದರ್ಶಿಸಿದರು. ಆದರೆ ಬುಮ್ರಾ ಎಸೆತವನ್ನು ಗುರುತಿಸುವಲ್ಲಿ ಎಡವಿದ ರೂಟ್ (40) ಎಲ್​ಬಿಡಬ್ಲ್ಯೂ ಆಗಿ ಹೊರನಡೆದರು. ಈ ಹಂತದಲ್ಲಿ ಶದಾಬ್ ನದೀಮ್ 2 ವಿಕೆಟ್ ಉರುಳಿಸುವ ಮೂಲಕ ಇಂಗ್ಲೆಂಡ್​ ಬ್ಯಾಟ್ಸ್​ಮನ್​ಗಳನ್ನು ಬ್ಯಾಕ್ ಟು ಬ್ಯಾಕ್ ಪೆವಿಲಿಯನ್​ ಕಡೆ ಕಳುಹಿಸಿದರು. ಅಂತಿಮ ಮೂರು ವಿಕೆಟ್​ಗಳನ್ನು ಕಬಳಿಸಿದ ಅಶ್ವಿನ್ ಇಂಗ್ಲೆಂಡ್ ತಂಡವನ್ನು 178 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಟೀಮ್ ಇಂಡಿಯಾ ಪರ ಅತ್ಯುತ್ತಮ ದಾಳಿ ನಡೆಸಿದ ಅಶ್ವಿನ್ 17.3 ಓವರ್​ನಲ್ಲಿ 61 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರು. ಅಲ್ಲದೆ ನದೀಮ್ 2 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ ಹಾಗೂ ಬುಮ್ರಾ ತಲಾ 1 ವಿಕೆಟ್ ಕಿತ್ತರು.

ಮೊದಲ ಇನಿಂಗ್ಸ್​ನ 241 ರನ್​ಗಳ ಹಿನ್ನಡೆಯೊಂದಿಗೆ 420 ರನ್​ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾಗೆ ಆಘಾತ ನೀಡುವಲ್ಲಿ ಜಾಕ್ ಲೀಚ್ ಯಶಸ್ವಿಯಾದರು. ಭಾರತದ 2ನೇ ಇನಿಂಗ್ಸ್​ನ 6 ಓವರ್​ನಲ್ಲಿ ರೋಹಿತ್ ಶರ್ಮಾ (12) ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಇಂಗ್ಲೆಂಡ್​ಗೆ ಮೊದಲ ಯಶಸ್ಸು ತಂದುಕೊಟ್ಟರು. ಇದಾಗ್ಯೂ ನಾಲ್ಕನೇ ದಿನದಾಟದ ಅಂತ್ಯದ ವೇಳೆಗೆ 13 ಓವರ್​ ಬ್ಯಾಟ್ ಮಾಡಿರುವ ಟೀಮ್ ಇಂಡಿಯಾ 39 ರನ್​ಗಳಿಸಿದೆ. ಕ್ರೀಸ್​ನಲ್ಲಿ ಶುಭ್​ಮನ್ (12) ಹಾಗೂ ಚೇತೇಶ್ವರ್ ಪೂಜಾರ (12) ಬ್ಯಾಟ್ ಮಾಡುತ್ತಿದ್ದು, ಟೀಮ್ ಇಂಡಿಯಾ ಗೆಲ್ಲಲು ಅಂತಿಮ ದಿನ 381 ರನ್​ ಕಲೆಹಾಕಬೇಕಿದೆ.
Published by: zahir
First published: February 8, 2021, 5:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories