HOME » NEWS » Sports » CRICKET INDIA VS ENGLAND 1ST TEST INDIA 257 6 AT STUMPS ON DAY 3 ZP

India vs England: ಇಂಗ್ಲೆಂಡ್ ಬೌಲರುಗಳ ಪರಾಕ್ರಮ: ಫಾಲೋ-ಆನ್ ಭೀತಿಯಲ್ಲಿ ಟೀಮ್ ಇಂಡಿಯಾ

ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಪೂಜಾರ 143 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ 73 ರನ್ ಕಲೆಹಾಕಿದರು. ಇನ್ನೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಿಷಭ್ ಪಂತ್ ಇಂಗ್ಲೆಂಡ್ ಬೌಲರುಗಳನ್ನು ಚೆಂಡಾಡಿದರು

news18-kannada
Updated:February 7, 2021, 6:48 PM IST
India vs England: ಇಂಗ್ಲೆಂಡ್ ಬೌಲರುಗಳ ಪರಾಕ್ರಮ: ಫಾಲೋ-ಆನ್ ಭೀತಿಯಲ್ಲಿ ಟೀಮ್ ಇಂಡಿಯಾ
India vs England
  • Share this:
ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ನ ಮೊದಲ ಇನಿಂಗ್ಸ್​ನಲ್ಲಿ 3ನೇ ದಿನದಾಟದ ಮುಕ್ತಾಯದ ವೇಳೆ ಭಾರತ 6 ವಿಕೆಟ್ ನಷ್ಟಕ್ಕೆ 257 ರನ್​ಗಳಿಸಿದೆ. ಇಂಗ್ಲೆಂಡ್ ನೀಡಿದ 578 ರನ್ ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತ ತಂಡ ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕ ಬ್ಯಾಟ್ಸ್ ಮನ್​ಗಳಾದ ರೋಹಿತ್ ಶರ್ಮಾ (6) ಹಾಗೂ ಶುಭಮನ್ ಗಿಲ್ (29) ಬೇಗನೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ (11) ಹಾಗೂ ಉಪ ನಾಯಕ ಅಜಿಂಕ್ಯ ರಹಾನೆ(1) ಕೂಡ ಪೆವಿಲಿಯನ್ ಕಡೆ ಮುಖ ಮಾಡಿದ್ದರು. ತಂಡದ ಮೊತ್ತ 74 ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್​ಗಳನ್ನು ಕಳೆದುಕೊಂಡ ಟೀಮ್ ಇಂಡಿಯಾಗೆ ಆಪತ್ಭಾಂಧವನಾಗಿ ಚೇತೇಶ್ವರ ಪೂಜಾರ ಕಾಣಿಸಿಕೊಂಡರು.

ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಪೂಜಾರ 143 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ 73 ರನ್ ಕಲೆಹಾಕಿದರು. ಇನ್ನೊಂದೆಡೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಿಷಭ್ ಪಂತ್ ಇಂಗ್ಲೆಂಡ್ ಬೌಲರುಗಳನ್ನು ಚೆಂಡಾಡಿದರು. ಪರಿಣಾಮ 5ನೇ ವಿಕೆಟ್​ಗೆ 119 ರನ್​ಗಳ ಜೊತೆಯಾಟ ಮೂಡಿಬಂತು. ಇದೇ ವೇಳೆ ಕೇವಲ 88 ಎಸೆತಗಳಲ್ಲಿ 9 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್​ಗಳೊಂದಿಗೆ 91 ರನ್ ಗಳಿಸಿದ್ದ ಪಂತ್ ವಿಕೆಟ್ ಒಪ್ಪಿಸಿ ಶತಕ ವಂಚಿತರಾದರು. ಸದ್ಯ ಕ್ರೀಸ್​ನಲ್ಲಿ ವಾಷಿಂಗ್ಟನ್ ಸುಂದರ್ (33) ಹಾಗೂ ರವಿಚಂದ್ರನ್ ಅಶ್ವಿನ್ (8) ಆಡುತ್ತಿದ್ದಾರೆ. ಇಂಗ್ಲೆಂಡ್ ಪರ ಡಾಮ್ ಬೆಸ್ 55 ರನ್ ಗೆ 4 ವಿಕೆಟ್ ಉರುಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.

3ನೇ ದಿನದಾಟದ ಮುಕ್ತಾಯದ ವೇಳೆ 6 ವಿಕೆಟ್ ನಷ್ಟಕ್ಕೆ 257 ರನ್​ಗಳಿಸಿರುವ ಟೀಮ್ ಇಂಡಿಯಾ 321 ರನ್ ಗಳ ಹಿನ್ನಡೆಯನ್ನು ಅನುಭವಿಸಿದ್ದು, ಹಾಗೆಯೇ ಫಾಲೋಆನ್ ಭೀತಿ ಎದುರಿಸುತ್ತಿದೆ. ನಾಲ್ಕನೇ ದಿನ ಭಾರತ ತಂಡವು 200 ರನ್​ಗಳ ಅಂತರದಿಂದ ಆಲೌಟ್ ಆದರೆ, ಫಾಲೋಆನ್​ನಂತೆ ಮತ್ತೆ 2ನೇ ಇನಿಂಗ್ಸ್ ಆರಂಭಿಸಬೇಕಾಗಿ ಬರಬಹುದು.
Published by: zahir
First published: February 7, 2021, 6:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories