India vs England: ಇಂಗ್ಲೆಂಡ್ ಬೌಲರ್​ಗಳ ಬಿರುಗಾಳಿಗೆ ತತ್ತರಿಸಿದ ಭಾರತ: ಆಂಗ್ಲರಿಗೆ ಬೃಹತ್ ಅಂತರದ ಗೆಲುವು

ದೊಡ್ಡ ಮೊತ್ತ ಚೇಸ್ ಮಾಡಲು ಭಾರತ ಅಂತಿಮ ದಿನದಾಟ ಶುರು ಮಾಡಿತು. ಆದರೆ, ಆರಂಭದಲ್ಲೇ ಚೇತೇಶ್ವರ್ ಪೂಜಾರ 15 ರನ್ ಗಳಿಸಿ ಔಟ್ ಆಗಿದ್ದು ಹಿನ್ನಡೆ ಉಂಟುಮಾಡಿತು. ಶುಭ್ಮನ್ ಗಿಲ್ ಮತ್ತೆ ಅರ್ಧಶತಕಕ್ಕೆ ಸೀಮಿತರಾದರು.

India vs England

India vs England

  • Share this:
    ಚೆನ್ನೈ (ಫೆ. 09): ಎಂ. ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಭಾರತದ ಗೆಲುವಿಗೆ ಇಂದು 381 ರನ್​ಗಳ ಅವಶ್ಯಕತೆಯಿತ್ತು. ಆದರೆ, ಅಂತಿಮ ದಿನದಾಟದ ಆರಂಭದಲ್ಲೇ ಟೀಂ ಇಂಡಿಯಾ ದೊಡ್ಡ ವಿಕೆಟ್ ಕಳೆದುಕೊಂಡಿತು. ನಾಯಕ ವಿರಾಟ್ ಕೊಹ್ಲಿ ಬಿಟ್ಟರೆ ಮತ್ತೆಲ್ಲಾ ಅನುಭವಿ ಬ್ಯಾಟ್ಸ್​ಮನ್​ಗಳು ಭಾರತದ ಪಿಚ್​ನಲ್ಲೂ ಘನತೆಗೆ ತಕ್ಕಂತೆ ಆಡಲೇಯಿಲ್ಲ. ಇಂಗ್ಲೆಂಡ್ ಬೌಲರ್​ಗಳ ಮಾರಕ ದಾಳಿಗೆ ನಲುಗಿದ ಟೀಂ ಇಂಡಿಯಾ 192 ರನ್​ಗೆ ಆಲೌಟ್ ಆಗುವ ಮೂಲಕ ಆಂಗ್ಲರು 227 ರನ್​ಗಳ ಭರ್ಜರಿ ಜಯ ಸಾಧಿಸಿದರು. ಈ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ.

    ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿರುವ ಇಂಗ್ಲೆಂಡ್ ತಂಡ, ನಾಯಕ ಜೋ ರೂಟ್(218) ಅವರ ಅಮೋಘ ದ್ವಿಶತಕ, ಬೆನ್ ಸ್ಟೋಕ್ಸ್ ಹಾಗೂ ಡೋಮಿನಿಕ್ ಸಿಬ್ಲೀ ಅವರ ಅರ್ಧಶತಕದ ನೆರವಿನಿಂದ 578 ರನ್ ಕಲೆಹಾಕಿತು. ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಶುರುಮಾಡಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ರಿಷಭ್ ಪಂತ್ 91, ವಾಷಿಂಗ್ಟನ್ ಸುಂದರ್ ಅಜೇಯ 85 ಹಾಗೂ ಚೇತೇಶ್ವರ್ ಪೂಜಾರ 73 ರನ್ ಗಳಿಸಿದ ಪರಿಣಾಮ ಭಾರತ 337 ರನ್ ಕಲೆಹಾಕಿತು.





    IPL 2021: IPL ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ ದೇಶೀಯ ಟಿ20 ಟೂರ್ನಿಯಲ್ಲಿ ಮಿಂಚಿದ ಈ ನಾಲ್ವರು..!

    241 ರನ್​ಗಳ ಮುನ್ನಡೆಯೊಂದಿಗೆ ನಿನ್ನೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್ ಆರ್.  ಅಶ್ವಿನ್‌ (61 ರನ್​ಗೆ 6 ವಿಕೆಟ್) ಸ್ಪಿನ್ ಮೋಡಿಗೆ ತತ್ತರಿಸಿ 178 ರನ್‌ಗಳಿಗೆ ಸರ್ವಪತನ ಕಂಡಿತು. ಹೀಗಾಗಿ ಪ್ರಥಮ ಇನಿಂಗ್ಸ್‌ನಲ್ಲಿ 241 ರನ್‌ ಮುನ್ನಡೆ ಪಡೆದಿದ್ದ ಇಂಗ್ಲೆಂಡ್‌ ತಂಡ, ಭಾರತಕ್ಕೆ ಗೆಲ್ಲಲು 420 ರನ್​ಗಳ ಟಾರ್ಗೆಟ್ ನೀಡಿತು.

    ನಿನ್ನೆ ಎರಡನೇ ಇನ್ನಿಂಗ್ಸ್​ನಲ್ಲಿ ಆರ್.  ಅಶ್ವಿನ್‌ (61 ರನ್​ಗೆ 6 ವಿಕೆಟ್) ಸ್ಪಿನ್ ಮೋಡಿಗೆ ತತ್ತರಿಸಿದ ಆಂಗ್ಲರು 178 ರನ್‌ಗಳಿಗೆ ಸರ್ವಪತನ ಕಂಡಿತು. ಹೀಗಾಗಿ ಪ್ರಥಮ ಇನಿಂಗ್ಸ್‌ನಲ್ಲಿ 241 ರನ್‌ ಮುನ್ನಡೆ ಪಡೆದಿದ್ದ ಇಂಗ್ಲೆಂಡ್‌ ತಂಡ, ಭಾರತಕ್ಕೆ ಗೆಲ್ಲಲು 420 ರನ್​ಗಳ ಟಾರ್ಗೆಟ್ ನೀಡಿತು.

    ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ(12) ವಿಕೆಟ್ ಕಳೆದುಕೊಂಡಿತು. 31ರನ್​ಗಳಿಗೆ ಒಂದು ವಿಕೆಟ್​ ಕಳೆದುಕೊಂಡು ಟೀಂ ಇಂಡಿಯಾ ನಾಲ್ಕನೇ ದಿನದಾಟವನ್ನು ಅಂತ್ಯಗೊಳಿಸಿತ್ತು. ಚೇತೇಶ್ವರ್ ಪೂಜಾರ(12) ಹಾಗೂ ಶುಭ್ಮನ್ ಗಿಲ್(15) ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

    ಅದರಂತೆ ದೊಡ್ಡ ಮೊತ್ತ ಚೇಸ್ ಮಾಡಲು ಭಾರತ ಅಂತಿಮ ದಿನದಾಟ ಶುರು ಮಾಡಿತು. ಆದರೆ, ಆರಂಭದಲ್ಲೇ ಚೇತೇಶ್ವರ್ ಪೂಜಾರ 15 ರನ್ ಗಳಿಸಿ ಔಟ್ ಆಗಿದ್ದು ಹಿನ್ನಡೆ ಉಂಟುಮಾಡಿತು. ಶುಭ್ಮನ್ ಗಿಲ್ ಮತ್ತೆ ಅರ್ಧಶತಕಕ್ಕೆ ಸೀಮಿತರಾದರು. ಜೇಮ್ಸ್ ಆ್ಯಂಡರ್ಸನ್ ಮಾರಕ ಸ್ವಿಂಗ್ ದಾಳಿಗೆ ತತ್ತರಿಸಿದ ಭಾರತ ಒಂದರ ಹಿಂದೆ ಒಂದು ವಿಕೆಟ್ ಕಳೆದುಕೊಂಡಿತು.

    Ishant Sharma: ಈ ಸಾಧನೆ ಮಾಡಿದ ಟೀಮ್ ಇಂಡಿಯಾದ 3ನೇ ವೇಗಿ, 6ನೇ ಬೌಲರ್ ಇಶಾಂತ್ ಶರ್ಮಾ..!

    ಗಿಲ್ ಬೆನ್ನಲ್ಲೇ ಉಪ ನಾಯಕ ಅಜಿಂಕ್ಯಾ ರಹಾನೆ ಕ್ಲೀನ್ ಬೌಲ್ಡ್ ಆದರೆ, ಮೊದಲ ಇನ್ನಿಂಗ್ಸ್​ನಲ್ಲಿ ಮಿಂಚಿದ್ದ ರಿಷಭ್ ಪಂತ್ ಆಟ 11 ರನ್​ಗೆ ಅಂತ್ಯವಾಯಿತು. ವಾಷಿಂಗ್ಟನ್ ಸುಂದರ್ ಕೂಡ ಸೊನ್ನೆ ಸುತ್ತಿದ್ದರು. ಈ ಸಂದರ್ಭ ನಾಯಕ ವಿರಾಟ್ ಕೊಹ್ಲಿ ಜೊತೆಯಾದ ಆರ್. ಅಶ್ವಿನ್ ತಂಡಕ್ಕೆ ಕೊಂಚ ಚೇತರಿಕೆ ನೀಡಿದರು. ಈ ಜೋಡಿ ಅರ್ಧಶತಕದ ಕಾಣಿಕೆ ನೀಡಿತು.

    ಅಶ್ವಿನ್ 46 ಎಸೆತಗಳಲ್ಲಿ 9 ರನ್ ಗಳಿಸಿ ಕೀಪರ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಇತ್ತ ವಿರಾಟ್ ಕೊಹ್ಲಿ ಕೂಡ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 104 ಎಸೆತಗಳಲ್ಲಿ 72 ರನ್ ಗಳಿಸಿ ಸ್ಟೋಕ್ಸ್ ಬೌಲಿಂಗ್​ನಲ್ಲಿ ಬೌಲ್ಡ್ ಆದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಬಂದ ಬೆನ್ನಲ್ಲೇ ಪೆವಿಲಿಯನ್ ಸೇರಿಕೊಂಡರು.

    ಭಾರತ 58.1 ಓವರ್​ನಲ್ಲಿ 192 ರನ್​ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜ್ಯಾಕ್ ಲೀಚ್ 4 ವಿಕೆಟ್ ಕಿತ್ತರೆ, ಜೇಮ್ಸ್ ಆ್ಯಂಡರ್ಸನ್ 3 ಹಾಗೂ ಜೋಫ್ರಾ ಆರ್ಚರ್ 2, ಡೋಮಿನಿಕ್ ಬೆಸ್ 1 ವಿಕೆಟ್ ಪಡೆದರು.

    ಈ ಪಂದ್ಯ ಡ್ರಾ ಆದಲ್ಲಿ ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ಗೇರಲು ಮುಂದಿನ 3 ಟೆಸ್ಟ್​ ಪೈಕಿ ಎರಡರಲ್ಲಿ ಗೆಲುವು ಸಾಧಿಸಲೇ ಬೇಕಾಗಿತ್ತು. ಆದರೆ, ಸದ್ಯ ಮೊದಲ ಪಂದ್ಯವೇ ಸೋಲುಂಡ ಪರಿಣಾಮ ಭಾರತ ಹಾದಿ ಕಬ್ಬಿಣದ ಕಡಲೆಯಂತಾಗಿದೆ.
    Published by:Vinay Bhat
    First published: