Ind vs Eng 1st Test, Day 4 Live Score: ಭಾರತೀಯ ಬೌಲರ್​ಗಳ ಮಾರಕ ದಾಳಿ: ಇಂಗ್ಲೆಂಡ್ 6 ವಿಕೆಟ್ ಪತನ

Chennai Test, India vs England Day 4 Live Cricket Score: ಸದ್ಯ ಇಂದು ಬ್ಯಾಟಿಂಗ್ ಮುಂದುವರೆಸಿರುವ ಈ ಜೋಡಿ ಉತ್ತಮ ಬ್ಯಾಟಿಂಗ್ ನಡೆಸುತ್ತಿದೆ. ಅದರಲ್ಲೂ ವಾಷಿಂಗ್ಟನ್ ಸುಂದರ್ ಆಕರ್ಷಕ ಅರ್ಧಶತಕ ಸಿಡಿಸಿ ಫಾಲೋ ಭೀತಿಯಿಂದ ತಂಡವನ್ನು ಪಾರುಮಾಡುವತ್ತ ಚಿತ್ತ ನೆಟ್ಟಿದ್ದಾರೆ.

Ind vs Eng Live

Ind vs Eng Live

 • Share this:
  ಚೆನ್ನೈ (ಫೆ. 08): ಇಲ್ಲಿನ ಎಂ. ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ನಾಲ್ಕನೇ ದಿನದಾಟ ಆರಂಭದಲ್ಲೇ ಭಾರತ ಉಳಿದ ವಿಕೆಟ್ ಕಳೆದುಕೊಂಡು 337 ರನ್​ಗೆ ಆಲೌಟ್ ಆಗಿದೆ. 241 ರನ್​ಗಳ ಹಿನ್ನಡೆಯಲ್ಲಿದೆ. ಆರ್. ಅಶ್ವಿನ್ ಹಾಗೂ ವಾಷಿಂಗ್ಟನ್ ಸುಂದರ್ ಟೀಂ ಇಂಡಿಯಾವನ್ನು ಫಾಲೋ ಆನ್ ಭೀತಿಯಿಂದ ತಪ್ಪಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಸುಂದರ್ 85 ರನ್ ಗಳಿಸಿ ಅಜೇಯರಾಗಿ ಉಳಿದರಷ್ಟೆ.

  ಸದ್ಯ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇನ್ನಿಂಗ್ಸ್​ನ ಮೊದಲ ಎಸೆತದಲ್ಲೇ ಅಶ್ವಿನ್, ರಾರಿ ಬರ್ನ್ಸ್ ಅವರನ್ನು ಪೆವಿಲಿಯನ್​ಗೆ ಅಟ್ಟಿದರೆ ನಂತರದಲ್ಲಿ 16 ರನ್ ಗಳಿಸಿದ್ದ ಡೋಮಿನಿಕ್ ಸಿಬ್ಲೀ ಅವರನ್ನೂ ಔಟ್ ಮಾಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ಆರಂಭದಲ್ಲೇ ಓಪನರ್​ಗಳನ್ನ ಕಳೆದುಕೊಂಡಿದೆ.

  ಡೆನಿಯಲ್ ಲಾರೆನ್ಸ್ ಅವರನ್ನು 18 ರನ್ ಗಳಿಸಿದ್ದಾಗ ಇಶಾಂತ್ ಶರ್ಮಾ ಔಟ್ ಮಾಡಿದರೆ, ಬೆನ್ ಸ್ಟೋಕ್ಸ್(7) ಅಶ್ವಿನ್ ಸ್ಪಿನ್ ಬಲೆಗೆ ಬಲಿಯಾದರು. ಇತ್ತ ಮೊದಲ ಇನ್ನಿಂಗ್ಸ್​ನಲ್ಲಿ ದ್ವಿಶತಕ ಸಿಡಿಸಿ ಅಬ್ಬರಿಸಿದ್ದ ನಾಯಕ ಜೋ ರೂಟ್ 2ನೇ ಇನ್ನಿಂಗ್ಸ್​ನಲ್ಲಿ ಫೇಲ್ ಆದರು. 32 ಎಸೆತಗಳಲ್ಲಿ 40 ರನ್ ಬಾರಿಸಿ ಬ್ಯಾಟ್ ಕೆಳಗಿಟ್ಟರು.

  ಸದ್ಯ ಕ್ರೀಸ್​ನಲ್ಲಿ ಓಲಿ ಪೋಪ್ ಹಾಗೂ ಜಾಸ್ ಬಟ್ಲರ್ ಇದ್ದಾರೆ.

  ನಿನ್ನೆ ಇಂಗ್ಲೆಂಡ್ ತಂಡವನ್ನು 578 ರನ್​ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ ಕೇವಲ 6 ರನ್​ಗೆ ನಿರ್ಗಮಿಸಿದರೆ, ಶುಭ್ಮನ್ ಗಿಲ್ 29 ರನ್​ಗೆ ಔಟ್ ಆಗುವ ನಿರಾಸೆ ಮೂಡಿಸಿದರು. ನಾಯಕ ವಿರಾಟ್ ಕೊಹ್ಲಿ(11) ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆ(1) ಆಟವೂ ನಡೆಯಲಿಲ್ಲ.

  Yash-Chahal: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಜೊತೆ ಫೋಟೋ ತೆಗೆಸಿಕೊಂಡ ಯಜುವೇಂದ್ರ ಚಹಾಲ್

  ಆದರೆ, ಈ ಸಂದರ್ಭ ಒಂದಾದ ಟೆಸ್ಟ್​ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಜೊತೆಯಾದ ರಿಷಭ್ ಪಂತ್ ಎಚ್ಚರಿಕೆಯ ಆಟವಾಡಿದರು. 73 ರನ್‍ಗಳಿಗೆ 4 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಇವರಿಬ್ಬರು ಆಸರೆಯಾದರು.

  ಪಂತ್ ಮತ್ತು ಪೂಜಾರ 119 ರನ್​ಗಳ ಜೊತೆಯಾಟ ಚೇತರಿಕೆ ನೀಡಿತು. ಈ ವೇಳೆ ದಾಳಿಗೆ ಇಳಿದ ಬೆಸ್ 73 ರನ್​ ಗಳಿಸಿದ್ದ ಪೂಜಾರರನ್ನು ಬಲಿ ಪಡೆದರು. ನೈಜ ಆಟ ಮುಂದುವರೆಸಿದ್ದ ರಿಷಭ್ ಪಂತ್ 88 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್​ ಸೇರಿದಂತೆ 91 ರನ್​ ಗಳಿಸಿ ಬೆಸ್​ಗೆ ವಿಕೆಟ್​ ಒಪ್ಪಿಸಿ ಶತಕ ವಂಚಿತರಾದರು.

  ಈ ಮೂಲಕ ನಿನ್ನೆ ಮೂರನೇ ದಿನದ ಅಂತ್ಯಕ್ಕೆ ವಾಷಿಂಗ್ಟನ್​​​ ಸುಂದರ್​ 33 ಹಾಗೂ ಆರ್​.ಅಶ್ವಿನ್​ 8 ರನ್​ ಗಳಿಸಿ ಭಾರತ 6 ವಿಕೆಟ್ ನಷ್ಟಕ್ಕೆ 257 ರನ್ ಕಲೆಹಾಕಿತ್ತು.

  Team India: 2023ರವರೆಗಿನ ವೇಳಾಪಟ್ಟಿ ಪ್ರಕಟ: ಬಿಡುವಿಲ್ಲದೆ ಕ್ರಿಕೆಟ್ ಆಡಲಿದೆ ಟೀಮ್ ಇಂಡಿಯಾ..!

  ಸದ್ಯ ಇಂದು ಬ್ಯಾಟಿಂಗ್ ಮುಂದುವರೆಸಿರುವ ಈ ಜೋಡಿ ದಿಟ್ಟತನದಿಂದ ಬ್ಯಾಟ್ ಬೀಸಿತು. ಆದರೆ, ಅಶ್ವಿನ್ 91 ಎಸೆತಗಳಲ್ಲಿ 31 ರನ್ ಗಳಿಸಿ ಔಟ್ ಆದರು. ಬಳಿಕ ಸುಂದರ್ ಏಕಾಂಗಿ ಹೋರಾಟ ನಡೆಸಿದರು. ಆದರೆ, ನಂತರ ಬಂದ ಬ್ಯಾಟ್ಸ್​ಮನ್​ಗಳು ಯಾರು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ ಭಾರತ 337 ರನ್​ಗೆ ಆಲೌಟ್ ಆಯಿತು.

  ಸುಂದರ್ 138 ಎಸೆತಗಳಲ್ಲಿ 12 ಬೌಂಡರಿ, 2 ಸಿಕ್ಸರ್ ಸಿಡಿಸಿ 85 ರನ್ ಬಾರಿಸಿ ಅಜೇಯರಾಗಿ ಉಳಿದರು. ಆಸ್ಟ್ರೇಲಿಯಾ ಪರ ಡೋಮಿನಿಕ್ ಬೆಸ್ 4 ವಿಕೆಟ್ ಕಿತ್ತರೆ, ಜೇಮ್ಸ್ ಆ್ಯಂಡರ್ಸನ್, ಆರ್ಚೆರ್ ಹಾಗೂ ಜ್ಯಾಕ್ ಲೀಚ್ ತಲಾ 2 ವಿಕೆಟ್ ಪಡೆದರು.
  Published by:Vinay Bhat
  First published: