Ind vs Eng 1st Test, Day 2 Live Score: ಕೊನೆಗೂ ರೂಟ್-ಸ್ಟೋಕ್ಸ್ ಜೊತೆಯಾಟಕ್ಕೆ ಬ್ರೇಕ್ ಹಾಕಿದ ಭಾರತ

Chennai Test, India vs England Day 3 Live Cricket Score: ಇಂಗ್ಲೆಂಡ್ ಪ್ರಥಮ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 263 ರನ್ ಕಲೆಹಾಕಿ ಪರಾಕ್ರಮ ಮೆರೆಯಿತು. ಇಂದು ಎರಡನೇ ದಿನ ಟೀಂ ಇಂಡಿಯಾ ಕಮ್​ಬ್ಯಾಕ್ ಮಾಡಬೇಕಿದೆ. ಆದಷ್ಟು ಬೇಗ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳಿಗೆ ಪೆವಿಲಿಯನ್ ಹಾದಿ ತೋರಿಸಬೇಕಿದೆ.

Ind vs Eng Live

Ind vs Eng Live

 • Share this:
  ಚೆನ್ನೈ (ಫೆ. 06): ಇಲ್ಲಿನ ಎಂ. ಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್​ನ ಎರಡನೇ ದಿನ ಆಂಗ್ಲರು ತಮ್ಮ ಬ್ಯಾಟಿಂಗ್ ಆರ್ಭಟ ಮುಂದುವರೆಸಿದ್ದಾರೆ. ನಾಯಕ ಜೋ ರೂಟ್ ದ್ವಿಶತಕದತ್ತ ದಾಪು ಗಾಲಿಡುತ್ತಿದ್ದರೆ, ಬೆನ್ ಸ್ಟೋಕ್ಸ್ ಶತಕದ ಸಮೀಪ ಔಟ್ ಆದರು. ಇಂಗ್ಲೆಂಡ್ ತಂಡದ ಮೊತ್ತ 400ರ ಅಂಚಿನಲ್ಲಿದೆ.

  ಮೊದಲ ದಿನ ಭಾರತೀಯ ಬೌಲರ್​ಗಳು ಆಂಗ್ಲರ ವಿಕೆಟ್ ಕೀಳುವಲ್ಲಿ ವೈಫಲ್ಯ ಅನುಭವಿಸಿದರು. ಹೀಗಾಗಿ ಇಂಗ್ಲೆಂಡ್ ಪ್ರಥಮ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 263 ರನ್ ಕಲೆಹಾಕಿ ಪರಾಕ್ರಮ ಮೆರೆಯಿತು.

  ಎರಡನೇ ದಿನವೂ ರೂಟ್ ಬ್ಯಾಟ್ ಸದ್ದು ಮಾಡುತ್ತಲೇ ಇದೆ. ಬೆನ್ ಸ್ಟೋಕ್ಸ್ ಜೊತೆ ಎರಡನೇ ದಿನದಾಟ ಆರಂಭಿಸಿದ ರೂಟ್ ಮತ್ತೊಂದು ಅಮೋಘ ಇನ್ನಿಂಗ್ಸ್ ಕಟ್ಟಿದರು. ಭಾರತೀಯರು ವಿಕೆಟ್ ಕೀಳಲು ಎಷ್ಟೇ ಪ್ಲ್ಯಾನ್ ಮಾಡಿದರು ವಿಫಲಯಿತು. ಸ್ಟೋಕ್ಸ್ ಬಿರುಸಿನ ಆಟವಾಡಿದರೆ, ರೂಟ್ ತಮ್ಮದೇ ಶೈಲಿಯ ಕ್ಲಾಸಿಕ್ ಆಟ ಪ್ರದರ್ಶಿಸಿದರು.

  ಈ ಜೋಡಿ 124 ರನ್​ಗಳ ಜೊತೆಯಾಟ ಆಡಿತು. ಸ್ಟೋಕ್ಸ್ 118 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಿಡಿಸಿ 82 ರನ್​ಗೆ ನದೀಂ ಬೌಲಿಂಗ್​ನಲ್ಲಿ ಔಟ್ ಆದರು. ಸದ್ಯ ರೂಟ್ ದ್ವಿಶತಕದತ್ತ ದಾಪುಗಾಲಿಡುತ್ತಿದ್ದರೆ, ಓಲಿ ಪೋಪ್ ಸಾತ್ ನೀಡುತ್ತಿದ್ದಾರೆ.

  ಇದಕ್ಕೂ ಮುನ್ನ ಮೊದಲ ದಿನ ಟಾಸ್ ಗೆದ್ದು ಬ್ಯಾಟಿಂಗ್​ಗೆ ಇಳಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಡಾಮಿನಿಕ್ ಸಿಬ್ಲೀ ಹಾಗೂ ರಾರಿ ಬರ್ನ್ಸ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ಅರ್ಧಶತಕದ ಜೊತೆಯಾಟ ಆಡಿದರು. ವಿಕೆಟ್​ಗಾಗಿ ಹುಡುಕುತ್ತಿದ್ದ ಭಾರತಕ್ಕೆ ಅಶ್ವಿನ್ ಬ್ರೇಕ್ ಕೊಟ್ಟರು.

  60 ಎಸೆತಗಳಲ್ಲಿ 33 ರನ್ ಗಳಿಸಿದ್ದ ಬರ್ನ್ಸ್​ ಪಂತ್​ಗೆ ಕ್ಯಾಚ್ ನೀಡಿ ಔಟ್ ಆದರು. ಇನ್ನೂ ಬಂದ ಬೆನ್ನಲ್ಲೇ ಡ್ಯಾನ್‌ ಲಾರೆನ್ಸ್‌ ಅವರು ಬುಮ್ರಾ ಬೌಲಿಂಗ್​ನಲ್ಲಿ ಶೂನ್ಯಕ್ಕೆ ಎಲ್​ಬಿ ಬಲೆಗೆ ಸಿಲುಕಿದರು. ಬಳಿಕ ಶುರುವಾಗಿದ್ದು ಡಾಮಿನಿಕ್ ಸಿಬ್ಲೀ ಹಾಗೂ ನಾಯಕ ಜೋ ರೂಟ್ ಆಟ. ಈ ಜೋಡಿ ದ್ವಿಶತಕದ ಜೊತೆಯಾಟ ಆಡಿತು.

  286 ಎಸೆತಗಳಲ್ಲಿ 87 ರನ್ ಗಳಿಸಿ ಶತಕದತ್ತ ದಾಪುಗಾಲಿಟ್ಟಿದ್ದ ಆರಂಭಿಕ ಆಟಗಾರ ಡೊಮಿನಿಕ್ ಸಿಬ್ಲಿಯನ್ನು ಎಲ್​ಬಿ ಬಲೆಗೆ ಕೆಡವಿದ ಬುಮ್ರಾ 90ನೇ ಓವರ್​ನಲ್ಲಿ ಭಾರತಕ್ಕೆ 3ನೇ ಯಶಸ್ಸು ತಂದುಕೊಟ್ಟರು. ಇದರೊಂದಿಗೆ ಮೊದಲ ದಿನದಾಟ ಕೂಡ ಅಂತ್ಯವಾಯಿತು. ಅತ್ತ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ರೂಟ್ 197 ಎಸೆತಗಳಲ್ಲಿ ಅಜೇಯ 128 ರನ್​ಗಳಿಸಿ ಕ್ರೀಸ್​ನಲ್ಲಿದ್ದರು.

  ಭಾರತ: ಶುಭ್ಮನ್ ಗಿಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯಾ ರಹಾನೆ (ಉಪ ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಆರ್. ಅಶ್ವಿನ್, ಜಸ್​ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಶಹಬಾಜ್ ನದೀಂ.

  ಇಂಗ್ಲೆಂಡ್‌: ಡಾಮಿನಿಕ್ ಸಿಬ್ಲೀ, ರಾರಿ ಬರ್ನ್ಸ್​, ಡ್ಯಾನ್‌ ಲಾರೆನ್ಸ್‌, ಜೋ ರೂಟ್‌ (ನಾಯಕ), ಬೆನ್‌ ಸ್ಟೋಕ್ಸ್, ಓಲಿ ಪೋಪ್,  ಜೋಸ್‌ ಬಟ್ಲರ್‌ (ವಿಕೆಟ್‌ ಕೀಪರ್‌), ಡಾಮ್‌ ಬೆಸ್, ಜೋಫ್ರ ಆರ್ಚರ್, ಜ್ಯಾಕ್ ಲೀಚ್, ಜೇಮ್ಸ್‌ ಆಂಡರ್ಸನ್‌, ‌.
  Published by:Vinay Bhat
  First published: