Ind vs Eng 1st Test, Day 1 Live: ರೂಟ್-ಸಿಬ್ಲೀ ಅರ್ಧಶತಕ, ಶತಕದ ಜೊತೆಯಾಟ

60 ಎಸೆತಗಳಲ್ಲಿ 33 ರನ್ ಗಳಿಸಿದ್ದ ಬರ್ನ್ಸ್​ ಪಂತ್​ಗೆ ಕ್ಯಾಚ್ ನೀಡಿ ಔಟ್ ಆದರು. ಇನ್ನೂ ಬಂದ ಬೆನ್ನಲ್ಲೇ ಡ್ಯಾನ್‌ ಲಾರೆನ್ಸ್‌ ಅವರು ಬುಮ್ರಾ ಬೌಲಿಂಗ್​ನಲ್ಲಿ ಶೂನ್ಯಕ್ಕೆ ಎಲ್​ಬಿ ಬಲೆಗೆ ಸಿಲುಕಿದರು. ಸದ್ಯ ಕ್ರೀಸ್​ನಲ್ಲಿ ಡಾಮಿನಿಕ್ ಸಿಬ್ಲೀ ಹಾಗೂ ನಾಯಕ ಜೋ ರೂಟ್ ಇದ್ದಾರೆ.

Ind vs Eng Live

Ind vs Eng Live

  • Share this:
    ಚೆನ್ನೈ (ಫೆ. 05):  ಇಲ್ಲಿನ ಎಂ. ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತೀಯ ಬೌಲರ್​ಗಳು ಊಟದ ವಿರಾಮದ ವೇಳೆಗೆ ಇಂಗ್ಲೆಂಡ್ ತಂಡದ 2 ಪ್ರಮುಖ ವಿಕೆಟ್ ಕಿತ್ತರಾದರೂ ನಂತರದಲ್ಲಿ ಪರದಾಡುತ್ತಿದ್ದಾರೆ. ಡಾಮಿನಿಕ್ ಸಿಬ್ಲೀ ಹಾಗೂ ನಾಯಕ ಜೋ ರೂಟ್ ಕ್ರೀಸ್ ಕಚ್ಚಿ ಆಡುತ್ತಿದ್ದು, ಭಾರತೀಯರು ವಿಕೆಟ್​ಗಾಗಿ ಹುಡುಕಾಡುತ್ತಿದ್ದಾರೆ.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಡಾಮಿನಿಕ್ ಸಿಬ್ಲೀ ಹಾಗೂ ರಾರಿ ಬರ್ನ್ಸ್ ಎಚ್ಚರಿಕೆಯಿಂದ ಬ್ಯಾಟ್ ಬೀಸಿ ಅರ್ಧಶತಕದ ಜೊತೆಯಾಟ ಆಡಿದರು. ವಿಕೆಟ್​ಗಾಗು ಹುಡುಕುತ್ತಿದ್ದ ಭಾರತಕ್ಕೆ ಅಶ್ವಿನ್ ಬ್ರೇಕ್ ಕೊಟ್ಟರು.

    IND vs ENG: ಟೀಂ ಇಂಡಿಯಾಕ್ಕೆ ದೊಡ್ಡ ಶಾಕ್: ಸ್ಟಾರ್ ಆಟಗಾರನಿಗೆ ಇಂಜುರಿ, ಮೊದಲ ಟೆಸ್ಟ್​ನಿಂದ ಔಟ್





    60 ಎಸೆತಗಳಲ್ಲಿ 33 ರನ್ ಗಳಿಸಿದ್ದ ಬರ್ನ್ಸ್​ ಪಂತ್​ಗೆ ಕ್ಯಾಚ್ ನೀಡಿ ಔಟ್ ಆದರು. ಇನ್ನೂ ಬಂದ ಬೆನ್ನಲ್ಲೇ ಡ್ಯಾನ್‌ ಲಾರೆನ್ಸ್‌ ಅವರು ಬುಮ್ರಾ ಬೌಲಿಂಗ್​ನಲ್ಲಿ ಶೂನ್ಯಕ್ಕೆ ಎಲ್​ಬಿ ಬಲೆಗೆ ಸಿಲುಕಿದರು. ಸದ್ಯ ತಂಡದ ಮೊತ್ತ 200ರ ಅಂಚಿನಲ್ಲಿದ್ದು ಡಾಮಿನಿಕ್ ಸಿಬ್ಲೀ ಹಾಗೂ ನಾಯಕ ಜೋ ರೂಟ್ ಅರ್ಧಶತಕ ಸಿಡಿಸಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.

    ಭಾರತ: ಶುಭ್ಮನ್ ಗಿಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯಾ ರಹಾನೆ (ಉಪ ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಆರ್. ಅಶ್ವಿನ್, ಜಸ್​ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಶಹಬಾಜ್ ನದೀಂ.

    Video: ಈತನ ಬೌಲಿಂಗ್ ಶೈಲಿ ನೋಡಿ ಬ್ಯಾಟ್ಸ್​ಮನ್ ತಬ್ಬಿಬ್ಬು..!

    ಇಂಗ್ಲೆಂಡ್‌: ಡಾಮಿನಿಕ್ ಸಿಬ್ಲೀ, ರಾರಿ ಬರ್ನ್ಸ್​, ಡ್ಯಾನ್‌ ಲಾರೆನ್ಸ್‌, ಜೋ ರೂಟ್‌ (ನಾಯಕ), ಬೆನ್‌ ಸ್ಟೋಕ್ಸ್, ಓಲಿ ಪೋಪ್,  ಜೋಸ್‌ ಬಟ್ಲರ್‌ (ವಿಕೆಟ್‌ ಕೀಪರ್‌), ಡಾಮ್‌ ಬೆಸ್, ಜೋಫ್ರ ಆರ್ಚರ್, ಜ್ಯಾಕ್ ಲೀಚ್, ಜೇಮ್ಸ್‌ ಆಂಡರ್ಸನ್‌, ‌.

    ಮೊದಲ ಟೆಸ್ಟ್​ನಲ್ಲಿ ಪಾದರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದ ಅಕ್ಷರ್ ಪಟೇಲ್​ಗೆ ಹಿನ್ನಡೆಯಾಗಿದೆ. ಮೊಣಕಾಲು ನೋವಿನಿಂದಾಗಿ ಮೊದಲ ಟೆಸ್ಟ್​ನಿಂದ ಪಟೇಲ್ ಹೊರಗುಳಿದಿದ್ದಾರೆ. ಇವರ ಬದಲು ಶಹಬಾಜ್ ನದೀಂ ಮತ್ತು ರಾಹುಲ್ ಚಹಾರ್ ತಂಡ ಸೇರಿಕೊಂಡಿದ್ದಾರೆ.

    ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​​ಗೇರಲು ಉಭಯ ತಂಡಗಳಿಗೆ ಈ ಟೆಸ್ಟ್​ ಸರಣಿ ಬಹುಮುಖ್ಯ. ಎರಡೂ ತಂಡಗಳು ಆತ್ಮವಿಶ್ವಾಸದ ಅಲೆಯಲ್ಲಿವೆ. ಭಾರತ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಸೀಸ್‌ ಎದುರು 2-1 ಅಂತರದ ಟೆಸ್ಟ್‌ ಸರಣಿ ಗೆದ್ದು ಬೀಗಿದ್ದರೆ ಮತ್ತೊಂದೆಡೆ ಜೋ ರೂಟ್‌ ಸಾರಥ್ಯದ ಇಂಗ್ಲೆಂಡ್ ತಂಡ ಶ್ರೀಲಂಕಾ ಪ್ರವಾಸದಲ್ಲಿ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ವೈಟ್‌ವಾಶ್ ಮಾಡಿ ಭಾರತಕ್ಕೆ ಆಗಮಿಸಿದೆ.

    ಈ ಟೆಸ್ಟ್​ ಪಂದ್ಯ ಸಾಕಷ್ಟು ವಿಚಾರಗಳಿಂದ ವಿಶೇಷತೆ ಪಡೆದಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಒಂದು ಕಡೆಯಾದರೆ, ವಿರಾಟ್‌ ಕೊಹ್ಲಿ ಮರಳಿ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ್ದಾರೆ. ಜಸ್​ಪ್ರೀತ್ ಬುಮ್ರಾ ತವರಲ್ಲಿ ಮೊದಲ ಟೆಸ್ಟ್‌ ಆಡುತ್ತಿದ್ದಾರೆ. ಇತ್ತ ಇಂಗ್ಲೆಂಡ್‌ ನಾಯಕ ಜೋ ರೂಟ್​ಗೆ ಇದು 100ನೇ ಟೆಸ್ಟ್‌ ಪಂದ್ಯ. ಇನ್ನೂ 2013ರ ನಂತರ ಟೀಂ ಇಂಡಿಯಾ ತವರು ನೆಲದಲ್ಲಿ ಟೆಸ್ಟ್​ ಸರಣಿ ಸೋತಿಲ್ಲ ಎಂಬುದು ಭಾರತದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸಿದೆ.
    Published by:Vinay Bhat
    First published: