Ind vs Eng 1st Test, Day 1 Live Score: ಇಂಗ್ಲೆಂಡ್ ಉತ್ತಮ ಆರಂಭ: ವಿಕೆಟ್​ಗಾಗಿ ಭಾರತ ಹರಸಾಹಸ

Chennai Test, India vs England Day 1 Live Cricket Score: ಮೊದಲ ಟೆಸ್ಟ್​ನಲ್ಲಿ ಪಾದರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದ ಅಕ್ಷರ್ ಪಟೇಲ್​ಗೆ ಹಿನ್ನಡೆಯಾಗಿದೆ. ಮೊಣಕಾಲು ನೋವಿನಿಂದಾಗಿ ಟೆಸ್ಟ್​ ಸರಣಿಯಿಂದಲೇ ಪಟೇಲ್ ಹೊರಗುಳಿದಿದ್ದಾರೆ. ಇವರ ಬದಲು ಶಹಬಾಜ್ ನದೀಂ ಮತ್ತು ರಾಹುಲ್ ಚಹಾರ್ ತಂಡ ಸೇರಿಕೊಂಡಿದ್ದಾರೆ.

Ind vs Eng Live

Ind vs Eng Live

 • Share this:
  ಚೆನ್ನೈ (ಫೆ. 05): ಸರಿಸುಮಾರು ಒಂದು ವರ್ಷದ ಬಳಿಕ ಭಾರತದಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಚಾಲನೆ ಸಿಕ್ಕಿದೆ. ಇಲ್ಲಿನ ಎಂ. ಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್​ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  ಸದ್ಯ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ತಂಡ ಉತ್ತಮ ರನ್ ಕಲೆಹಾಕುತ್ತಿದೆ. ಓಪನರ್​ಗಳಾದ ಡಾಮಿನಿಕ್ ಸಿಬ್ಲೀ ಹಾಗೂ ರಾರಿ ಬರ್ನ್ಸ್ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದ್ದಾರೆ. ಇತ್ತ ಭಾರತ ವಿಕೆಟ್​ಗಾಗಿ ಪರದಾಡುತ್ತಿದೆ.

  ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​​ಗೇರಲು ಉಭಯ ತಂಡಗಳಿಗೆ ಈ ಟೆಸ್ಟ್​ ಸರಣಿ ಬಹುಮುಖ್ಯ. ಎರಡೂ ತಂಡಗಳು ಆತ್ಮವಿಶ್ವಾಸದ ಅಲೆಯಲ್ಲಿವೆ. ಭಾರತ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಸೀಸ್‌ ಎದುರು 2-1 ಅಂತರದ ಟೆಸ್ಟ್‌ ಸರಣಿ ಗೆದ್ದು ಬೀಗಿದ್ದರೆ ಮತ್ತೊಂದೆಡೆ ಜೋ ರೂಟ್‌ ಸಾರಥ್ಯದ ಇಂಗ್ಲೆಂಡ್ ತಂಡ ಶ್ರೀಲಂಕಾ ಪ್ರವಾಸದಲ್ಲಿ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ವೈಟ್‌ವಾಶ್ ಮಾಡಿ ಭಾರತಕ್ಕೆ ಆಗಮಿಸಿದೆ.

  ಹೀಗಾಗಿ ಭರ್ಜರಿ ಫಾರ್ಮ್​ನಲ್ಲಿರುವ ಎರಡು ತಂಡಗಳ ಕಾದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಉಭಯ ತಂಡಗಳು ಮೊದಲ ಟೆಸ್ಟ್​ಗೆ ಬಲಿಷ್ಠ ಆಟಗಾರರನ್ನೇ ಕಣಕ್ಕಿಳಿಸಿದೆ.

  ಭಾರತ: ಶುಭ್ಮನ್ ಗಿಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯಾ ರಹಾನೆ (ಉಪ ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಆರ್. ಅಶ್ವಿನ್, ಜಸ್​ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಶಹಬಾಜ್ ನದೀಂ.

  ಇಂಗ್ಲೆಂಡ್‌: ಡಾಮಿನಿಕ್ ಸಿಬ್ಲೀ, ರಾರಿ ಬರ್ನ್ಸ್​, ಡ್ಯಾನ್‌ ಲಾರೆನ್ಸ್‌, ಜೋ ರೂಟ್‌ (ನಾಯಕ), ಬೆನ್‌ ಸ್ಟೋಕ್ಸ್, ಓಲಿ ಪೋಪ್,  ಜೋಸ್‌ ಬಟ್ಲರ್‌ (ವಿಕೆಟ್‌ ಕೀಪರ್‌), ಡಾಮ್‌ ಬೆಸ್, ಜೋಫ್ರ ಆರ್ಚರ್, ಜ್ಯಾಕ್ ಲೀಚ್, ಜೇಮ್ಸ್‌ ಆಂಡರ್ಸನ್‌, ‌.

  ಮೊದಲ ಟೆಸ್ಟ್​ನಲ್ಲಿ ಪಾದರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದ ಅಕ್ಷರ್ ಪಟೇಲ್​ಗೆ ಹಿನ್ನಡೆಯಾಗಿದೆ. ಮೊಣಕಾಲು ನೋವಿನಿಂದಾಗಿ ಮೊದಲ ಟೆಸ್ಟ್​ನಿಂದ ಪಟೇಲ್ ಹೊರಗುಳಿದಿದ್ದಾರೆ. ಇವರ ಬದಲು ಶಹಬಾಜ್ ನದೀಂ ಮತ್ತು ರಾಹುಲ್ ಚಹಾರ್ ತಂಡ ಸೇರಿಕೊಂಡಿದ್ದಾರೆ.

  ಈ ಟೆಸ್ಟ್​ ಪಂದ್ಯ ಸಾಕಷ್ಟು ವಿಚಾರಗಳಿಂದ ವಿಶೇಷತೆ ಪಡೆದಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಒಂದು ಕಡೆಯಾದರೆ, ವಿರಾಟ್‌ ಕೊಹ್ಲಿ ಮರಳಿ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ್ದಾರೆ. ಜಸ್​ಪ್ರೀತ್ ಬುಮ್ರಾ ತವರಲ್ಲಿ ಮೊದಲ ಟೆಸ್ಟ್‌ ಆಡುತ್ತಿದ್ದಾರೆ. ಇತ್ತ ಇಂಗ್ಲೆಂಡ್‌ ನಾಯಕ ಜೋ ರೂಟ್​ಗೆ ಇದು 100ನೇ ಟೆಸ್ಟ್‌ ಪಂದ್ಯ. ಇನ್ನೂ 2013ರ ನಂತರ ಟೀಂ ಇಂಡಿಯಾ ತವರು ನೆಲದಲ್ಲಿ ಟೆಸ್ಟ್​ ಸರಣಿ ಸೋತಿಲ್ಲ ಎಂಬುದು ಭಾರತದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸಿದೆ.
  Published by:Vinay Bhat
  First published: