ಭಾರತ-ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟಿ20 ಸರಣಿಯು ಇಂದಿನಿಂದ (ಮಾರ್ಚ್.12) ಆರಂಭವಾಗಲಿದೆ. ಎಲ್ಲಾ ಪಂದ್ಯಗಳು ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಡೇಡಿಯಂ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿದೆ. ಕೊರೋನಾ ಕಾರಣದಿಂದ ಈ ಪಂದ್ಯಗಳ ವೀಕ್ಷಣೆಗೆ ಸೀಮಿತ ಪ್ರೇಕ್ಷಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಟಿ20 ಕದನದಲ್ಲಿ ಇಂಗ್ಲೆಂಡ್ ತಂಡವು ಇಯಾನ್ ಮೋರ್ಗನ್ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ. ಇತ್ತ ಭಾರತ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು 3-1 ಅಂತರದಿಂದ ಮಣಿಸಿದ್ದು, ಇದೇ ಆತ್ಮ ವಿಶ್ವಾಸದಲ್ಲಿ ಇಂದು ಕೂಡ ಕಣಕ್ಕಿಳಿಯಲಿದೆ. ಅತ್ತ ಟಿ20 ಕ್ರಿಕೆಟ್ನ ನಂಬರ್ 1 ಬ್ಯಾಟ್ಸ್ಮನ್ ಡೇವಿಡ್ ಮಲಾನ್ ಅವರ ಆಗಮನ, ಇಯಾನ್ ಮೋರ್ಗನ್ ಅವರ ನೇತೃತ್ವ ಹಾಗೂ ಕೆಲ ಸ್ಟಾರ್ ಆಟಗಾರ ರಿಎಂಟ್ರಿಯಿಂದ ಇಂಗ್ಲೆಂಡ್ ಕೂಡ ಬಲಿಷ್ಠವಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಇನ್ನು ಈ ಐದು ಟಿ20 ಪಂದ್ಯಗಳ ಸರಣಿಯು ಐಸಿಸಿ ಟಿ 20 ವಿಶ್ವಕಪ್ಗಾಗಿ ಪೂರ್ವಾಭ್ಯಾಸದಂತಿದೆ. ಏಕೆಂದರೆ ಐಸಿಸಿ ಟಿ 20 ವಿಶ್ವಕಪ್ ಈ ವರ್ಷಾಂತ್ಯದಲ್ಲಿ ಕೊನೆಯಲ್ಲಿ ಭಾರತದಲ್ಲಿ ನಡೆಯಲಿದೆ. ಹೀಗಾಗಿ ಎರಡು ತಂಡಗಳಿಗೂ ಈ ಸರಣಿ ಮಹತ್ವದೆನಿಸಿಕೊಂಡಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ 20 ಪಂದ್ಯ ಎಲ್ಲಿ ನಡೆಯಲಿದೆ?
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (ಮೊಟೆರಾ ಕ್ರಿಕೆಟ್ ಮೈದಾನ) ನಡೆಯಲಿದೆ.
ಪಂದ್ಯಾವಳಿಯ ದಿನಾಂಕ?
ಭಾರತ- ಇಂಗ್ಲೆಂಡ್ ನಡುವಣ ಮೊದಲ ಟಿ-20 ಪಂದ್ಯ ಮಾರ್ಚ್ 12ರಂದು ಅಹ್ಮದಾಬಾದ್ನಲ್ಲಿ ಆರಂಭವಾಗಲಿದ್ದು, ಎರಡನೇ ಪಂದ್ಯ ಮಾರ್ಚ್ 14ರಂದು, ಮೂರನೇ ಪಂದ್ಯ ಮಾರ್ಚ್ 16ರಂದು, ನಾಲ್ಕನೇ ಪಂದ್ಯ ಮಾರ್ಚ್ 18ರಂದು ಮತ್ತು ಕೊನೆ ಪಂದ್ಯ ಮಾರ್ಚ್ 20ರಂದು ಇದೇ ಮೈದಾನದಲ್ಲಿ ಜರುಗಲಿದೆ.
ಪಂದ್ಯ ಆರಂಭವಾಗುವ ಸಮಯ?ಸಂಜೆ 7.00 ಕ್ಕೆ ಪ್ರಾರಂಭವಾಗಲಿದೆ.
ಪಂದ್ಯದ ನೇರ ಪ್ರಸಾರ?
ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಪ್ರಸಾರವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿರುತ್ತದೆ. ಇದಲ್ಲದೆ ಜಿಯೋ ಟಿವಿ ಮತ್ತು ಏರ್ಟೆಲ್ ಟಿವಿ ಹಾಗೂ ಹಾಟ್ ಸ್ಟಾರ್ನಲ್ಲಿ ನೋಡಬಹುದು.
ಎರಡು ತಂಡಗಳು ಹೀಗಿವೆ:
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಲೋಕೇಶ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಯಜ್ವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ , ನವದೀಪ್ ಸೈನಿ, ದೀಪಕ್ ಚಹರ್, ರಾಹುಲ್ ತಿವಾಠಿಯಾ, ಇಶಾನ್ ಕಿಶನ್ (ವಿಕೆಟ್ ಕೀಪರ್).
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ