VIDEO: ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ಭಾರತ; ಇಲ್ಲಿದೆ ಪಂದ್ಯದ ಹೈಲೈಟ್ಸ್​​

ಈ ಗುರಿ ಬೆನ್ನತ್ತಿದ್ದ ಬಾಂಗ್ಲಾಗೆ ಹೇಳಿಕೊಳ್ಳುವಂಥ ಆರಂಭವೇನು ಸಿಗಲಿಲ್ಲ. ಬಾಂಗ್ಲಾ ಬಾಲಂಗೋಚಿಗಳನ್ನು ಪೆವಿಲಿಯನ್​ಗಟ್ಟಲು ಯಶಸ್ವಿಯಾದ ಬುಮ್ರಾ ಬ್ಯಾಕ್​ ಟು ಬ್ಯಾಕ್ ವಿಕೆಟ್ ಉರುಳಿಸಿದರು.

Rajesh Duggumane | news18
Updated:July 3, 2019, 7:46 AM IST
VIDEO: ಬಾಂಗ್ಲಾ ವಿರುದ್ಧ ಗೆದ್ದು ಬೀಗಿದ ಭಾರತ; ಇಲ್ಲಿದೆ ಪಂದ್ಯದ ಹೈಲೈಟ್ಸ್​​
ರೋಹಿತ್ ಶರ್ಮಾ
  • News18
  • Last Updated: July 3, 2019, 7:46 AM IST
  • Share this:
ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆದ ವಿಶ್ವಕಪ್​ನ 40ನೇ ಪಂದ್ಯದಲ್ಲಿ ಟೀಂ ಇಂಡಿಯಾ 28 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಟೀಂ ಇಂಡಿಯಾ ನೀಡಿದ 315 ರನ್​ ಗುರಿ ಬೆನ್ನತ್ತಿದ್ದ ಬಾಂಗ್ಲಾ 286 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಈ ಜಯದೊಂದಿಗೆ ಭಾರತ ತಂಡವು ಸೆಮಿ ಫೈನಲ್​ಗೆ ಲಗ್ಗೆಯಿಟ್ಟಿದೆ.

ರೋಹಿತ್​ ಶರ್ಮಾ ಶತಕ, ಕನ್ನಡಿಗ ಕೆಎಲ್​ ರಾಹುಲ್​ ಅವರ ಎಚ್ಚರಿಕೆಯ ಆಟದಿಂದಾಗಿ ಕೊಹ್ಲಿ ಪಡೆ ಉತ್ತಮ ಆರಂಭ ಕಂಡಿತು. ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಆಟ ಜಾದೂ ಮಾಡಲು ವಿಫಲವಾಯಿತು. ಈ ಹಂತದಲ್ಲಿ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ಯುವ ಆಟಗಾರ ರಿಷಭ್ ಪಂತ್ 41 ಎಸೆತಗಳಲ್ಲಿ 48 ರನ್​ ಬಾರಿಸಿದರು.

ಟೀಂ ಇಂಡಿಯಾ ಮುಂದಿಟ್ಟ ಬೃಹತ್ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾಗೆ ಎಚ್ಚರಿಕೆಯ ಆರಂಭ ಒದಗಿಸುವಲ್ಲಿ ತಮೀಮ್ ಇಕ್ಬಾಲ್ ಹಾಗೂ ಸೌಮ್ಯ ಸರ್ಕಾರ್ ಯಶಸ್ವಿಯಾಗಿದ್ದರು. ಆದರೆ  9ನೇ ಓವರ್​ನ್ನು ಎಸೆದ ಮೊಹಮ್ಮದ್ ಶಮಿ ತಮೀಮ್ ಇಕ್ಬಾಲ್(22)ರನ್ನು  ಕ್ಲೀನ್ ಬೌಲ್ಡ್​ ಮಾಡುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಮೊದಲ ವಿಕೆಟ್ ಪತನದ ಬಳಿಕವೂ ಉತ್ತಮವಾಗಿಯೇ ಬ್ಯಾಟ್ ಮಾಡುತ್ತಿದ್ದ ಸೌಮ್ಯ ಸರ್ಕಾರ್ (33) ​ರನ್ನು ಪೆವಿಲಿಯನ್​ಗೆ ಕಳುಹಿಸುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾದರು.ಬಾಂಗ್ಲಾ ಬಾಲಂಗೋಚಿಗಳನ್ನು ಪೆವಿಲಿಯನ್​ಗಟ್ಟಲು ಯಶಸ್ವಿಯಾದ ಬುಮ್ರಾ ಬ್ಯಾಕ್​ ಟು ಬ್ಯಾಕ್ ವಿಕೆಟ್ ಉರುಳಿಸಿದರು. ಒಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ಸೈಫುದ್ದೀನ್(51) ​ಅಜೇಯ ಹೋರಾಟದ ಹೊರತಾಗಿಯು ಬಾಂಗ್ಲಾದೇಶ 48 ಓವರ್​ಗಳಲ್ಲಿ 286 ರನ್​ಗಳಿಸಲಷ್ಟೇ ಶಕ್ತವಾಯಿತು.
First published:July 3, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...