ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ 360 ಅಂಕ; ಆದರೂ ಬೇಸರ ಹೊರಹಾಕಿದ ಕೊಹ್ಲಿ!

ಈಗಾಗಲೇ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಡಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಆದರೆ, ನಾಯಕ ವಿರಾಟ್ ಕೊಹ್ಲಿ ಮಾತ್ರ ಟೆಸ್ಟ್​ ಚಾಂಪಿಯನ್​ಶಿಪ್​ ಫಾರ್ಮೆಟ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

2019ರ ನವೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊಹ್ಲಿ 136 ರನ್ ಗಳಿಸಿದ್ದು, ಇವರ ಬ್ಯಾಟ್ನಿಂದ ಬಂದ ಕೊನೆಯ ಶತಕವಾಗಿದೆ.

2019ರ ನವೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧ ಕೊಹ್ಲಿ 136 ರನ್ ಗಳಿಸಿದ್ದು, ಇವರ ಬ್ಯಾಟ್ನಿಂದ ಬಂದ ಕೊನೆಯ ಶತಕವಾಗಿದೆ.

  • Share this:
ಬೆಂಗಳೂರು (ನ. 25): ಬಾಂಗ್ಲಾದೇಶ ವಿರುದ್ಧದ ಐತಿಹಾಸಿಕ ಎರಡನೇ ಡೇ ನೈಟ್ ಟೆಸ್ಟ್​ನಲ್ಲಿ​ ಇನ್ನಿಂಗ್ಸ್​ನೊಂದಿಗೆ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಚೊಚ್ಚಲ ಪಿಂಕ್ ಬಾಲ್ ಟೆಸ್ಟ್​ ಪಂದ್ಯದಲ್ಲೇ ಜಯ ಕಾಣುವುದರೊಂದಿಗೆ ಕೊಹ್ಲಿ ಪಡೆ ಹೊಸ ಅಧ್ಯಾಯಕ್ಕೆ ಶುಭಾರಂಭ ಮಾಡಿದೆ.

ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಪುಣೆ ಮತ್ತು ರಾಂಚಿಯ ಪಂದ್ಯವನ್ನು ಇನ್ನಿಂಗ್ಸ್ ಅಂತರದಿಂದ ಗೆದ್ದು ಬೀಗಿದ್ದ ಭಾರತ, ಸದ್ಯ ಬಾಂಗ್ಲಾ ವಿರುದ್ಧ ಎರಡೂ ಪಂದ್ಯವನ್ನು ಇನ್ನಿಂಗ್ಸ್ ಅಂತರದಿಂದಲೇ ಜಯ ಸಾಧಿಸಿದೆ. ಈ ಮೂಲಕ ಸತತವಾಗಿ ನಾಲ್ಕು ಟೆಸ್ಟ್ ಪಂದ್ಯಗಳನ್ನು ಇನ್ನಿಂಗ್ಸ್ ಅಂತರದಿಂದ ಗೆದ್ದು, ಭಾರತ ಈ ಸಾಧನೆ ಮಾಡಿದ ಮೊದಲ ತಂಡವಾಗಿ ವಿಶ್ವದಾಖಲೆ ಬರೆದಿದೆ.

ಆರ್​ಸಿಬಿ ತಂಡಕ್ಕೆ ನಾಚಿಕೆಯಾಗಬೇಕು!; ಕೊಹ್ಲಿ ತಂಡದ ವಿರುದ್ಧ ತಿರುಗಿ ಬಿದ್ದ ಕನ್ನಡಿಗರು; ಅಷ್ಟಕ್ಕೂ ಆಗಿದ್ದೇನು?

 ಈ ಅಮೋಘ ಗೆಲುವಿನೊಂದಿಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ 60 ಅಂಕ ತನ್ನ ಖಾತೆಗೆ ಸೇರಿಸಿಕೊಂಡಿದೆ. ಒಟ್ಟು 360 ಪಾಯಿಂಟ್ಸ್​ ಕಲೆಹಾಕಿ ಟೀಂ ಇಂಡಿಯಾ ಅಗ್ರಸ್ಥಾನ ಭದ್ರ ಪಡಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ(116 ಅಂಕ) ತಂಡವಿದ್ದರೆ, ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್(60), ಶ್ರೀಲಂಕಾ (60), ಇಂಗ್ಲೆಂಡ್​(56) ತಂಡವಿದೆ.

 ದಾಖಲೆಯೊಂದಿಗೆ ಅಂತ್ಯಕಂಡ ಡೇ ನೈಟ್ ಟೆಸ್ಟ್; 3 ದಿನ ನಡೆದ ಐತಿಹಾಸಿಕ ಪಂದ್ಯ ಹೀಗಿತ್ತು!

ಈಗಾಗಲೇ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಡಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. 2021ರಲ್ಲಿ ಅಂತಿಮ ಕಾದಾಟ ನಡೆಯಲಿದ್ದು ಫೈನಲ್​ಗೇರುವ ವಿಶ್ವಾಸದಲ್ಲಿದೆ. ಆದರೆ, ನಾಯಕ ವಿರಾಟ್ ಕೊಹ್ಲಿ ಮಾತ್ರ ಟೆಸ್ಟ್​ ಚಾಂಪಿಯನ್​ಶಿಪ್​ ಫಾರ್ಮೆಟ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

"ಟೆಸ್ಟ್​ ಚಾಂಪಿಯನ್​ಶಿಪ್​ ಈವರೆಗೆ  ನಾವು ಮೂರು ಸರಣಿಗಳಲ್ಲಿ ಒಟ್ಟು ಏಳು ಪಂದ್ಯಗಳನ್ನು ಆಡಿದ್ದೇವೆ. ಆದರೆ, ಕೇವಲ ಎರಡು ಪಂದ್ಯಗಳನ್ನು ಮಾತ್ರ ವಿದೇಶದಲ್ಲಿ ಆಡಿದ್ದೇವೆ. ತವರಿನಲ್ಲಿ ಮತ್ತು ವಿದೇಶದಲ್ಲಿ ಸಮವಾಗಿ ಟೆಸ್ಟ್​ ಸರಣಿ ಆಡಿದರೆ ಮಾತ್ರ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಬ್ಯಾಲೆನ್ಸ್​ ಕಾಣಬಹುದು" ಎಂದು ಕೊಹ್ಲಿ ಹೇಳಿದ್ದಾರೆ.

ಇನ್ನು ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ 360 ಅಂಕದೊಂದಿ ಇತರೆ ತಂಡದೆದರು ಪ್ರಾಬಲ್ಯ ಮೆರೆಯುತ್ತಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, "ಕೇವಲ ಏಳು ಪಂದ್ಯಗಳಿಂದ ಒಂದು ತಂಡದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. 15 ವರ್ಷಗಳ ಕಾಲ ವೆಸ್ಟ್ ಇಂಡೀಸ್ ಪಾರುಪತ್ಯ ಮೆರೆದಿತ್ತು. ಏಳು ವರ್ಷಗಳ ಸಾಧನೆ ನೋಡಿದ್ರೆ ಡಾಮಿನೆನ್ಸ್​ ಎನ್ನಬಹುದು ಆದರೆ ಕೇವಲ 7 ಪಂದ್ಯಗಳಿಂದ ಈ ರೀತಿ ಹೇಳಲು ಸಾಧ್ಯವಿಲ್ಲ" ಎಂಬುದು ಕೊಹ್ಲಿ ಮಾತು.

First published: