ಡೇ ನೈಟ್ ಟೆಸ್ಟ್​​ನಲ್ಲಿ ಕೊಹ್ಲಿ 32 ರನ್ ಗಳಿಸಿದರೆ ಅದು ಭಾರತ ಪರ ಯಾರೂ ಮಾಡಿರದ ಸಾಧನೆ!

ಕೊಹ್ಲಿ ಪಡೆ ಹಾಗೂ ಬಾಂಗ್ಲಾದೇಶ ತಂಡ ಈಗಾಗಲೇ ಕೋಲ್ಕತ್ತಾಕ್ಕೆ ಬಂದಿಳಿದಿದ್ದು ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದೆ. ಪಿಂಕ್ ಬಾಲ್​ನಲ್ಲಿ ಆಡುವುದು ಅಷ್ಟೊಂದು ಸುಲಭವಲ್ಲ ಎಂದು ತಿಳಿದಿರುವ ಉಭಯ ತಂಡದ ಆಟಗಾರರು ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ.

ಇನ್ನೊಬ್ಬ ಆಟಗಾರ ವಿರಾಟ್ ಕೊಹ್ಲಿ. ಜೊತೆಗೆ ಕೊಹ್ಲಯನ್ನು ಐಸಿಸಿ ನಾಯಕನನ್ನಾಗಿ ಮಾಡಿದೆ.

ಇನ್ನೊಬ್ಬ ಆಟಗಾರ ವಿರಾಟ್ ಕೊಹ್ಲಿ. ಜೊತೆಗೆ ಕೊಹ್ಲಯನ್ನು ಐಸಿಸಿ ನಾಯಕನನ್ನಾಗಿ ಮಾಡಿದೆ.

  • Share this:
ಬೆಂಗಳೂರು (ನ. 20): ಭಾರತ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್​ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ನ. 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ಡೇ ನೈಟ್ ಟೆಸ್ಟ್​ ಆರಂಭವಾಗಲಿದ್ದು, ಈ ಐತಿಹಾಸಿಕ ಕ್ಷಣದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ.

ಸದ್ಯ ವಿರಾಟ್ ಕೊಹ್ಲಿ ನಾಯಕನಾಗಿ ಟೆಸ್ಟ್​ ಕ್ರಿಕೆಟ್​ನಲ್ಲಿ 52 ಪಂದ್ಯಗಳಿಂದ 4968 ರನ್ ಕಲೆಹಾಕಿದ್ದಾರೆ. ಇನ್ನು ಕೇವಲ 32 ರನ್ ಗಳಿಸಿದರೆ ಕೊಹ್ಲಿ 5 ಸಾವಿರ ರನ್ ಪೂರೈಸಿ ದಾಖಲೆ ಬರೆಯಲಿದ್ದಾರೆ.

 RCB: ಹರಾಜಿಗೂ ಮುನ್ನ ಕೈಬಿಟ್ಟ ಈ ಸ್ಟಾರ್ ಆಟಗಾರನನ್ನು ಮತ್ತೆ ಖರೀದಿ ಮಾಡಲಿದೆ ಆರ್​​ಸಿಬಿ?

ಕೊಹ್ಲಿ ಈ ಸಾಧನೆಯನ್ನು ಡೇ ನೈಟ್ ಐತಿಹಾಸಿಕ ಟೆಸ್ಟ್​ನಲ್ಲೇ ಮಾಡಲು ಕಾತುರರಾಗಿದ್ದಾರೆ. ಕೊಹ್ಲಿ 32 ರನ್ ಬಾರಿಸಿದ್ದೇ ಆದಲ್ಲಿ ಭಾರತ ಪರ ನಾಯಕನಾಗಿ 5 ಸಾವಿರ ರನ್ ಪೂರೈಸಿದ ಪ್ರಥಮ ಕ್ರಿಕೆಟಿಗ ಆಗಲಿದ್ದಾರೆ. ಅಲ್ಲದೆ ವಿಶ್ವದ 6ನೇ ಆಟಗಾರ ಆಗಲಿದ್ದಾರೆ.

ನಾಯಕನಾಗಿ ಟೆಸ್ಟ್​ನಲ್ಲಿ ಗರಿಷ್ಠ ರನ್ ಕಲೆಹಾಕಿದವರ ಪೈಕಿ ಮೊದಲ ಸ್ಥಾನದಲ್ಲಿ ದ. ಆಫ್ರಿಕಾದ ಗ್ರೇಮ್ ಸ್ಮಿತ್ (109 ಪಂದ್ಯ, 8659 ರನ್) ಇದ್ದಾರೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಅಲೆನ್ ಬಾರ್ಡರ್ (93 ಪಂದ್ಯ, 6623 ರನ್), ಮೂರನೇ ಸ್ಥಾನ ರಿಕಿ ಪಾಂಟಿಂಗ್ (77 ಪಂದ್ಯ, 6542 ರನ್), ನಾಲ್ಕನೇ ಸ್ಥಾನದಲ್ಲಿ ವೆಸ್ಟ್​ ಇಂಡೀಸ್​ನ ಸಿಹಚ್ ಲಾಯ್ಡ್ (74 ಪಂದ್ಯ, 5233 ರನ್), 5ನೇ ಸ್ಥಾನ ನ್ಯೂಜಿಲೆಂಡ್​ನ ಸ್ಟೆಪೆನ್ ಫ್ಲೆಮಿಂಗ್ (80 ಪಂದ್ಯ, 5156 ರನ್) ಹಾಗೂ 6ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ (52 ಪಂದ್ಯ, 4968 ರನ್) ಸ್ಥಾನ ಪಡೆದುಕೊಂಡಿದ್ದಾರೆ.

India vs Bangladesh: Virat Kohli 32 runs away from scripting history at Eden Gardens
ಟೆಸ್ಟ್​ನಲ್ಲಿ ಗರಿಷ್ಠ ರನ್ ಕಲೆಹಾಕಿದ ನಾಯಕರು


ಟೆಸ್ಟ್​​ ಕ್ರಿಕೆಟ್​ ಮೇಲೆತ್ತಲು ಪಿಂಕ್ ಬಾಲ್​​ ಉತ್ತಮ ಮಾರ್ಗ, ಆದರೆ...; ರಾಹುಲ್ ದ್ರಾವಿಡ್

ಕೊಹ್ಲಿ ಪಡೆ ಹಾಗೂ ಬಾಂಗ್ಲಾದೇಶ ತಂಡ ಈಗಾಗಲೇ ಕೋಲ್ಕತ್ತಾಕ್ಕೆ ಬಂದಿಳಿದಿದ್ದು ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದೆ. ಪಿಂಕ್ ಬಾಲ್​ನಲ್ಲಿ ಆಡುವುದು ಅಷ್ಟೊಂದು ಸುಲಭವಲ್ಲ ಎಂದು ತಿಳಿದಿರುವ ಉಭಯ ತಂಡದ ಆಟಗಾರರು ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ.

 

First published: