Rohit Sharma: ನಾನು 6 ಬಾಲ್​ಗೆ 6 ಸಿಕ್ಸ್ ಬಾರಿಸಲಿದ್ದೆ, ಆದರೆ...; ಸೀಕ್ರೆಟ್ ಬಿಚ್ಚಿಟ್ಟ ರೋಹಿತ್ ಶರ್ಮಾ

ಬಾಂಗ್ಲಾ ವಿರುದ್ಧ ಆರು ಸಿಕ್ಸರ್‌ಗಳನ್ನು ಬಾರಿಸಿರುವ ರೋಹಿತ್ ಹೊಸ ದಾಖಲೆ ನಿರ್ಮಿಸಿದರು. 2019ನೇ ಸಾಲಿನಲ್ಲಿ ಈಗಾಗಲೇ ಒಟ್ಟು 66 ಸಿಕ್ಸರ್‌ಗಳನ್ನು ರೋಹಿತ್ ಸಿಡಿಸಿದ್ದಾರೆ. ಇನ್ನು 2017 ಹಾಗೂ 2018ನೇ ಸಾಲಿನಲ್ಲಿ ಅನುಕ್ರಮವಾಗಿ 65 ಹಾಗೂ 74 ಸಿಕ್ಸರ್‌ಗಳನ್ನು ಬಾರಿಸಿದ್ದರು.

Vinay Bhat | news18-kannada
Updated:November 8, 2019, 3:50 PM IST
Rohit Sharma: ನಾನು 6 ಬಾಲ್​ಗೆ 6 ಸಿಕ್ಸ್ ಬಾರಿಸಲಿದ್ದೆ, ಆದರೆ...; ಸೀಕ್ರೆಟ್ ಬಿಚ್ಚಿಟ್ಟ ರೋಹಿತ್ ಶರ್ಮಾ
2019ನೇ ಸಾಲಿನಲ್ಲಿ ರೋಹಿತ್ ಶರ್ಮಾ ಒಟ್ಟು 10 ಶತಕಗಳನ್ನು ಸಿಡಿಸಿದ್ದಾರೆ. ಏಕದಿನದಲ್ಲಿ 7 ಶತಕ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ದ್ವಿಶತಕ ಸೇರಿದಂತೆ ಮೂರು ಶತಕಗಳು ಇವರ ಬ್ಯಾಟ್ನಿಂದ ಬಂದಿವೆ.
  • Share this:
ಬೆಂಗಳೂರು (ನ. 08): ಬಾಂಗ್ಲಾದೇಶ  ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ 8 ವಿಕೆಟ್​ಗಳ ಅಮೋಘ ಜಯ ಸಾಧಿಸಿ ಟೀಂ ಇಂಡಿಯಾ ಸರಣಿಯನ್ನು ಇನ್ನೂ ಜೀವಂತವಾಗಿರಿಸಿದೆ. ಭಾರತ ಈ ಪಂದ್ಯ ಗೆಲ್ಲಲು ಪ್ರಮುಖ ಕಾರಣ ನಾಯಕ ರೋಹಿತ್ ಶರ್ಮಾ. ನೂರನೇ ಅಂತರಾಷ್ಟ್ರೀಯ ಟಿ-20 ಪಂದ್ಯದಲ್ಲಿ ಅದ್ಭುತ ಆಟವಾಡಿದ ಹಿಟ್​ಮ್ಯಾನ್​ ನೂತನ ಸಾಧನೆ ಮಾಡಿದರು.

ಕೇವಲ 43 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಿಡಿಸಿ 85 ರನ್ ಚಚ್ಚಿದ ರೋಹಿತ್ ಆಟಕ್ಕೆ ಬಾಂಗ್ಲಾ ಆಟಗಾರರು ಸುಸ್ತಾಗಿ ಹೋದರು. ಅದ್ಭುತ ಪ್ರದರ್ಶನ ನೀಡಿದ್ದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡರು. ಪಂದ್ಯ ಮುಗಿದ ಬಳಿಕ ಬಿಸಿಸಿಐಯ ಚಹಾಲ್ ಟಿವಿಯಲ್ಲಿ ಮಾತನಾಡಿದ ಶರ್ಮಾ ಕೆಲವೊಂದು ಮಾಹಿತಿಯನ್ನು ತಿಳಿಸಿದ್ದಾರೆ.

 ಟೀಂ ಇಂಡಿಯಾದಿಂದ ಆಸ್ಟ್ರೇಲಿಯಾ ವಿಶ್ವ ದಾಖಲೆ ಉಡೀಸ್ ; ಈ ವಿಚಾರದಲ್ಲಿ ಭಾರತವೇ ನಂಬರ್ ಒನ್!

ಅದರಲ್ಲು ಪಂದ್ಯದ 10ನೇ ಓವರ್​ನ ಮೊಸದ್ದಿಕ್ ಬೌಲಿಂಗ್​ನ ಮೊದಲ ಮೂರು ಎಸೆತದಲ್ಲಿ ರೋಹಿತ್ ಮೂರು ಸಿಕ್ಸರ್ ಸಿಡಿಸಿ ಆರ್ಭಟಿಸಿದರು. ಈ ಬಗ್ಗೆ ಮಾತನಾಡಿದ ರೋಹಿತ್, "ನಾನು ಸತತವಾಗಿ ಮೂರು ಸಿಕ್ಸ್ ಬಾರಿಸಿದ ಬೆನ್ನಲ್ಲೆ ಆರು ಬಾಲ್​ಗೆ ಆರು ಸಿಕ್ಸ್ ಸಿಡಿಸಬೇಕೆಂದು ಪ್ರಯತ್ನಿಸಿದೆ. ಆದರೆ, 4ನೇ ಎಸೆತ ಮಿಸ್ ಮಾಡಿಕೊಂಡೆ. ಹೀಗಾಗಿ ನಂತರ ಒಂದು ರನ್ ತೆಗೆದುಕೊಳ್ಳುವ ತೀರ್ಮಾನ ಮಾಡಿದೆ" ಎಂದು ಹೇಳಿದ್ದಾರೆ.

 "ಸಿಕ್ಸ್ ಬಾರಿಸಲು ದೊಡ್ಡ ಬಾಡಿ ಅಥವಾ ಶಕ್ತಿ ಬೇಕಾಗಿಲ್ಲ. ಯಜುವೇಂದ್ರ ಚಹಾಲ್ ಕೂಡ ಚೆಂಡನ್ನು ಸಿಕ್ಸ್​ಗೆ ಅಟ್ಟಬಹುದು. ಸಮಯ ಮತ್ತು ಏಕಾಗ್ರತೆ ಮುಖ್ಯವಾಗುತ್ತದಷ್ಟೆ. ಚೆಂಡು ಬ್ಯಾಟ್​ನ ಮಧ್ಯ ಭಾಗಕ್ಕೆ ಸರಿಯಾಗಿ ತಾಗಬೇಕು" ಎಂದು ವಿವರಿಸಿದರು.

IND vs BAN: ಬಾಂಗ್ಲಾಕ್ಕೆ ಮಹಾ ಚಂಡಮಾರುತವಾದ ರೋಹಿತ್; ಇಲ್ಲಿವೆ 2ನೇ ಟಿ-20 ಪಂದ್ಯದ ರೋಚಕ ಕ್ಷಣ!

ಬಾಂಗ್ಲಾ ವಿರುದ್ಧ ಆರು ಸಿಕ್ಸರ್‌ಗಳನ್ನು ಬಾರಿಸಿರುವ ರೋಹಿತ್ ಹೊಸ ದಾಖಲೆ ನಿರ್ಮಿಸಿದರು. 2019ನೇ ಸಾಲಿನಲ್ಲಿ ಈಗಾಗಲೇ ಒಟ್ಟು 66 ಸಿಕ್ಸರ್‌ಗಳನ್ನು ರೋಹಿತ್ ಸಿಡಿಸಿದ್ದಾರೆ. ಇನ್ನು 2017 ಹಾಗೂ 2018ನೇ ಸಾಲಿನಲ್ಲಿ ಅನುಕ್ರಮವಾಗಿ 65 ಮತ್ತು 74 ಸಿಕ್ಸರ್‌ಗಳನ್ನು ಬಾರಿಸಿದ್ದರು.

ಇನ್ನು ಟಿ-20ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಟೀಂ ಇಂಡಿಯಾ ಆಟಗಾರರ ಪಟ್ಟಿಯಲ್ಲಿ ರೋಹಿತ್ (344 ಸಿಕ್ಸ್) ಮೊದಲ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿ ಸುರೇಶ್ ರೈನಾ (311 ಸಿಕ್ಸ್​) ಹಾಗೂ ಮೂರನೇ ಕ್ರಮಾಂಕದಲ್ಲಿ ಮಹೇಂದ್ರ ಸಿಂಗ್ ಧೋನಿ (295 ಸಿಕ್ಸ್​) ಇದ್ದಾರೆ. ಇದರ ಜೊತೆಗೆ ಭಾರತದ ನಾಯಕನಾಗಿ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ದಾಖಲೆಯನ್ನೂ ಹಿಟ್​ಮ್ಯಾನ್ ತಮ್ಮದಾಗಿಸಿದ್ದಾರೆ.

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading